ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನದ ಸರ ಅಪಹರಣ!: ಸಿಸಿ ಟಿವಿಯಲ್ಲಿರುವ ಮಹಿಳೆಯರಿಗಾಗಿ ತಲಾಶ್!

1 min read

 

 

 

 

 

ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನದ ಸರ ಅಪಹರಣ: ಸಿಸಿ ಟಿವಿಯಲ್ಲಿರುವ ಮಹಿಳೆಯರಿಗಾಗಿ ತಲಾಶ್

Tumkurnews
ತುಮಕೂರು: ಗ್ರಾಹಕರ ಸೋಗಿನಲ್ಲಿ ಚಿನ್ನ ಖರೀದಿಗೆಂದು ಬಂದ ಮಹಿಳೆಯರಿಬ್ಬರು ಚಿನ್ನದ ಸರ ಕದ್ದೊಯ್ದಿರುವ ಘಟನೆ ನಗರದಲ್ಲಿ ನಡೆದಿದ್ದು, ಪೊಲೀಸ್ ದೂರು ದಾಖಲಾಗಿದೆ.

ಪೊಲೀಸರ ಮನೆಯಲ್ಲಿ ಕದಿಯುವಾಗ ಸಿಕ್ಕಿಬಿದ್ದ ಕಳ್ಳರು: ಇಬ್ಬರ ಬಂಧ‌ನ
ನಗರದ ಗುಂಚಿ ಸರ್ಕಲ್’ನಲ್ಲಿರುವ ಎಸ್‌.ಎನ್.ಡಿ ಜ್ಯೂವೆಲ್ಲರಿಯಲ್ಲಿ ಕಳವು ನಡೆದಿದ್ದು, ನಗರ ಪೊಲೀಸ್ ಠಾಣೆಯಲ್ಲಿ ಅಪರಿಚಿತ ಮಹಿಳೆಯರಿಬ್ಬರ ವಿರುದ್ಧ ಜ್ಯೂವೆಲ್ಲರಿ ಮಾಲಿಕ ರಾಹುಲ್ ದೂರು ದಾಖಲಿಸಿದ್ದಾರೆ.
ಪ್ರಕರಣದ ವಿವರ: ತುಮಕೂರು ನಗರದ ಗುಂಚಿ ವೃತ್ತದಲ್ಲಿರುವ ಎಸ್.ಎನ್‌.ಡಿ ಜ್ಯೂವೆಲ್ಲರಿಗೆ ಡಿಸೆಂಬರ್ 2ರಂದು ರಾತ್ರಿ 8.10 ಗಂಟೆ ಸಮಯದಲ್ಲಿ ಇಬ್ಬರು ಮಹಿಳೆಯರು ಬಂದಿದ್ದು, ಮಾಂಗಲ್ಯ ಸರ ತೋರಿಸುವಂತೆ ಕೇಳಿದ್ದಾರೆ.

ತುಮಕೂರು; ನಗರದಲ್ಲಿ ಸರಣಿ ಕಳ್ಳತನ, ಬೆಚ್ಚಿ ಬಿದ್ದ ಜನ; ವಿಡಿಯೋ
ಅಂಗಡಿ ಮಾಲೀಕರು ಸರಗಳನ್ನು ತೋರಿಸಿದ್ದು, ಮಹಿಳೆಯರು ಯಾವುದೇ ಸರವನ್ನು ಖರೀದಿ ಮಾಡಿಲ್ಲ. ಬದಲಾಗಿ ಆರ್ಡರ್ ಕೊಡುತ್ತೇವೆ. ಬೇರೆ ಮಾಡಿಕೊಡಿ ಎಂದು ಹೇಳಿದ್ದು, ಹಣವನ್ನು ಎಟಿಎಂನಿಂದ ಡ್ರಾ ಮಾಡಿಕೊಂಡು ಬರುವುದಾಗಿ ಹೇಳಿ ಹೋಗಿದ್ದಾರೆ. ಮಹಿಳೆಯರು ಹೋದ ಬಳಿಕ ಜ್ಯೂವೆಲ್ಲರಿ ಮಾಲೀಕರು ಎಲ್ಲಾ ಚಿನ್ನದ ಸರಗಳನ್ನು ತೆಗೆದಿಡುವಾಗ 32 ಗ್ರಾಂ ತೂಕದ ಒಂದು ಚಿನ್ನದ ಸರ ಕಳ್ಳತನವಾಗಿರುವುದು ಗಮನಕ್ಕೆ ಬಂದಿದೆ.

ಐವರ ಆತ್ಮಹತ್ಯೆಗೆ ನಿಜವಾದ ಕಾರಣ ಬಹಿರಂಗ: ಇಲ್ಲಿದೆ ಡೆತ್ ನೋಟ್, ಸೆಲ್ಫಿ ವಿಡಿಯೋ
ಬಳಿಕ ಜ್ಯೂವೆಲ್ಲರಿ ಮಾಲೀಕರು ನಗರದ ಎಲ್ಲಾ ಎಟಿಎಂಗಳಲ್ಲಿ ಆ ಇಬ್ಬರು ಮಹಿಳೆಯರಿಗಾಗಿ ಹುಡುಕಾಡಿದ್ದಾರೆ. ಮಹಿಳೆಯರು ಎಲ್ಲಿಯೂ ಸಿಗದೇ ಇದ್ದಾಗ ಸಿಸಿ‌ ಟಿವಿ ದೃಶ್ಯಗಳೊಂದಿಗೆ ಡಿಸೆಂಬರ್ 4ರಂದು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ತುಮಕೂರು-ಚಿತ್ರದುರ್ಗ: ವಿಮಾನ ನಿಲ್ದಾಣಕ್ಕೆ ಸ್ಥಳ ಪರಿಶೀಲನೆ: Good News

You May Also Like

More From Author

+ There are no comments

Add yours