ಎಸ್‌ ಮಾಲ್’ನಿಂದ ಅಮಾನಿಕೆರೆ ರಾಜಕಾಲುವೆ ಒತ್ತುವರಿ?: ದಿಶಾಂಕ್ ಆ್ಯಪ್’ನಲ್ಲಿ ಬಯಲು!

1 min read

ಎಸ್‌ ಮಾಲ್’ನಿಂದ ತುಮಕೂರು ಅಮಾನಿಕೆರೆ ರಾಜಕಾಲುವೆ ಒತ್ತುವರಿ?: ದಿಶಾಂಕ್ ಆ್ಯಪ್’ನಲ್ಲಿ ಬಯಲು

ಒತ್ತುವರಿ ಆಗಿಲ್ಲ ಎಂದು ಕಾನೂನು ಕ್ರಮ ಕೈಗೊಳ್ಳದ ಅಧಿಕಾರಿಗಳು

ದಿಶಾಂಕ್ ಆ್ಯಪ್’ನಲ್ಲಿ ಒತ್ತುವರಿ ಪತ್ತೆಯಾಗಿದ ಎಂದ ಇಮ್ರಾನ್ ಪಾಷಾ

Tumkurnews
ತುಮಕೂರು: ನಗರದ ಶಿರಾ ರಸ್ತೆಯಲ್ಲಿರುವ ಎಸ್‌.ಮಾಲ್ ಮೇಲೆ ಅಮಾನಿಕೆರೆಗೆ ಸೇರಿರುವ ರಾಜಕಾಲುವೆಯ ಒತ್ತುವರಿ ಆರೋಪ ಕೇಳಿ ಬಂದಿದೆ.
ಮಾಹಿತಿ ಹಕ್ಕು ಕಾರ್ಯಕರ್ತ ಇಮ್ರಾನ್ ಪಾಷಾ ಈ‌ ಕುರಿತು ಆರೋಪ ಮಾಡಿದ್ದಾರೆ. “ತುಮಕೂರು ತಾಲೂಕು ಕಸಬಾ ಹೋಬಳಿ ತುಮಕೂರು ಗ್ರಾಮದ ಅಮಾನಿಕೆರೆ ಕೋಡಿಯಿಂದ ಹಾದು ಹೋಗುವ ರಾಜ ಕಾಲುವೆಯನ್ನು ಒತ್ತುವರಿ ಮಾಡಿಕೊಂಡು ಎಸ್ ಮಾಲ್ ಎಂಬ ಬೃಹತ್ ಗಾತ್ರದ ವಾಣಿಜ್ಯ ಮಳಿಗೆಯನ್ನು ಕಟ್ಟಿರುತ್ತಾರೆ. ಸಂಬಂಧಿಸಿದ ಅಧಿಕಾರಿಗಳು ತಕ್ಷಣವೇ ಸರ್ವೇ ಮಾಡಿಸಿ ಒತ್ತುವರಿಯನ್ನು ತೆರವುಗೊಳಿಸಬೇಕು” ಎಂದು ಇಮ್ರಾನ್ ಪಾಷಾ ಆಗ್ರಹಿಸಿದ್ದಾರೆ.

(ದಿಶಾಂಕ್ ಆ್ಯಪ್’ನಲ್ಲಿ ಅಮಾನಿಕೆರೆಯ ರಾಜಕಾಲುವೆ ಒತ್ತುವರಿ ಪತ್ತೆಯಾಗಿದೆ ಎಂದು ಇಮ್ರಾನ್ ಪಾಷಾ ದೂರಿರುವ ಚಿತ್ರ)

ಜಿಲ್ಲೆಯ 1293 ಕೆರೆಗಳ ಸರ್ವೇಗೆ ಸೂಚನೆ; ಒತ್ತುವರಿ ತೆರವಿಗೆ ಅಲರ್ಟ್
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಇಮ್ರಾನ್ ಪಾಷಾ, ಎಸ್.ಮಾಲ್ ಒತ್ತುವರಿ ಪ್ರಕರಣದ ಬಗ್ಗೆ ನಾನು ಈ ಹಿಂದೆಯೇ ಜಿಲ್ಲಾಧಿಕಾರಿಗಳಿಗೆ ಹಾಗೂ ಮಹಾನಗರ ಪಾಲಿಕೆಗೆ ದೂರು ಸಲ್ಲಿಸಿದ್ದೆ. ಆದರೆ ನೆಪ ಮಾತ್ರಕ್ಕೆ ಪರಿಶೀಲನೆ ನಡೆಸಿ ಯಾವುದೇ ಒತ್ತುವರಿಯಾಗಿಲ್ಲ ಎಂದು ಈವರೆಗೆ ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ.
ಆದರೆ ಸ್ವತಃ ನಾನು ಸ್ಥಳಕ್ಕೆ ತೆರಳಿ ದಿಶಾಂಕ್ ಆ್ಯಪ್’ನಲ್ಲಿ ಪರಿಶೀಲನೆ ನಡೆಸಿದಾಗ ಒತ್ತುವರಿ ಅಗಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ
ಅಧಿಕಾರಿಗಳು ಕೂಡಲೇ ಈ ಬಗ್ಗೆ ಗಮನ ಹರಿಸಿ ಒತ್ತುವರಿ ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.

ತುಮಕೂರು: ಫುಟ್‍ಪಾತ್ ವ್ಯಾಪಾರಿಗಳಿಗೆ ಶಾಕ್ ನೀಡಿದ ಪಾಲಿಕೆ!

You May Also Like

More From Author

+ There are no comments

Add yours