ಸಿದ್ಧಗಂಗಾ ಮಠ, ಕೆ‌.ಎನ್ ರಾಜಣ್ಣರನ್ನು ಭೇಟಿಯಾದ ಡಿ.ಟಿ ಶ್ರೀನಿವಾಸ್ ದಂಪತಿ

1 min read

ಸಿದ್ಧಗಂಗಾ ಮಠ, ಕೆ‌.ಎನ್ ರಾಜಣ್ಣರನ್ನು ಭೇಟಿಯಾದ ಡಿ.ಟಿ ಶ್ರೀನಿವಾಸ್ ದಂಪತಿ

ವಿಧಾನ ಪರಿಷತ್ ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಡಿ.ಟಿ‌ ಶ್ರೀನಿವಾಸ್ ಕಾಂಗ್ರೆಸ್ ಅಭ್ಯರ್ಥಿ

Tumkurnews
ತುಮಕೂರು: ವಿಧಾನ ಪರಿಷತ್ತು ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಡಿ.ಟಿ.ಶ್ರೀನಿವಾಸ್ ಪತ್ನಿಯೊಂದಿಗೆ ಮಂಗಳವಾರ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ, ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮಿಗಳ ಆಶೀರ್ವಾದ ಪಡೆದರು.
ಕ್ಷೇತ್ರದ ಪ್ರವಾಸದಲ್ಲಿರುವ ಡಿ.ಟಿ.ಶ್ರೀನಿವಾಸ್ ಈ ವೇಳೆ ಮಾತನಾಡಿ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಸುಮಾರು 45 ವಿಧಾನಸಭಾ ಕ್ಷೇತ್ರಗಳಿಗೆ ಆಗ್ನೇಯ ಶಿಕ್ಷಕರ ಕ್ಷೇತ್ರ ಹರಡಿದೆ. ಇಂದಿನಿಂದ ತುಮಕೂರು ಜಿಲ್ಲಾ ಪ್ರವಾಸವನ್ನು ಹಮ್ಮಿಕೊಂಡಿದ್ದು, ಇದರ ಹಿನ್ನೆಲೆಯಲ್ಲಿ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಅಶೀರ್ವಾದ ಪಡೆದಿದ್ದೇವೆ. ಶಿಕ್ಷಣ ಸಂಸ್ಥೆಯೊಂದನ್ನು ನಡೆಸುತ್ತಾ ಶಿಕ್ಷಕರ ಕಷ್ಟ ಸುಖಃಗಳನ್ನು ಬಹಳ ಹತ್ತಿರದಿಂದ ಬಲ್ಲವನಾಗಿದ್ದೇನೆ. ಅಲ್ಲದೆ ಕ್ಷೇತ್ರದ ಮತದಾರ ಬಂದುಗಳಾದ ಶಿಕ್ಷಕರು ಸಹ ಬದಲಾವಣೆ ಬಯಸಿದ್ದು, ಜೊತೆಗೆ ಸ್ವಾಮೀಜಿಗಳ ಆಶೀರ್ವಾದವು ದೊರೆತ್ತಿರುವುದು ನಮ್ಮ ಹುಮ್ಮಸ್ಸನ್ನು ಮತ್ತಷ್ಟು ಹೆಚ್ಚಿಸಿದೆ ಎಂದರು.

ಕಾಡುಗೊಲ್ಲರ ಅಭಿವೃದ್ಧಿಗಾಗಿ ಪೂರ್ಣಿಮಾ, ಶ್ರೀನಿವಾಸ್ ದುಡಿದಿದ್ದಾರೆ: ಸ್ವಯಂ ಘೋಷಿತ ಮುಖಂಡರ ಟೀಕೆ ಸರಿಯಲ್ಲ
ಆಗ್ನೇಯ ಪದವಿಧರರ ಚುನಾವಣೆಯ ವೇಳೆ ನನಗೆ ಎರಡನೇ ಸ್ಥಾನ ಪಡೆಯಲು ಮತದಾರರ ಕಾರಣ. ಕ್ಷೇತ್ರದ ದೊಡ್ಡದಾಗಿತ್ತು. ಎಲ್ಲಾ ಪದವಿಧರರು ಅವರು ಉದ್ಯೋಗದಲ್ಲಿರಲಿ, ಇಲ್ಲದಿರಲಿ ಮತ ಹಾಕುವ ಹಕ್ಕು ಪಡೆಯುತ್ತಾರೆ. ಆದರೆ ಶಿಕ್ಷಕರ ಕ್ಷೇತ್ರದಲ್ಲಿ ಶಿಕ್ಷಕರು ಮಾತ್ರ ಮತದಾರರಾಗಿರುವ ಹಿನ್ನೆಲೆಯಲ್ಲಿ ಮತದಾರರ ಸಂಖ್ಯೆ ಕಡಿಮೆ ಇದೆ. ಅಲ್ಲದೆ ಕಳೆದ ಚುನಾವಣೆಯಲ್ಲಿ ಸೋಲು ಕಂಡಿರುವ ಹಿನ್ನೆಲೆಯಲ್ಲಿ ನನ್ನ ಮೇಲೆ ವಿಶೇಷ ಒಲವು ಇದೆ. ಎಲ್ಲಾ ಮತದಾರರನ್ನು ನೇರವಾಗಿ ಭೇಟಿಯಾಗಿ ಮತ ನೀಡುವಂತೆ ಮನವಿ ಮಾಡಲು ಅವಕಾಶ ಹೆಚ್ಚಿದೆ. ಅದು ನನಗೆ ಶ್ರೀರಕ್ಷೆಯಾಗಲಿದೆ. ಈ ಹಿನ್ನೆಲೆಯಲ್ಲಿಯೇ ಐದು ಜಿಲ್ಲೆಗಳ ಪ್ರವಾಸವನ್ನು ಆರಂಭಿಸಿರುವುದಾಗಿ ಡಿ.ಟಿ.ಶ್ರೀನಿವಾಸ್ ತಿಳಿಸಿದರು.

ಇಂದಿರಾಗಾಂಧಿ ಜನ್ಮ ದಿನ: ಇಂದಿರಾ ಕ್ಯಾಂಟೀನ್’ನಲ್ಲಿ ಹೋಳಿಗೆ ಊಟ!
ಮಾಜಿ ಶಾಸಕಿ ಶ್ರೀಮತಿ ಪೂರ್ಣೀಮ ಶ್ರೀನಿವಾಸ್ ಮಾತನಾಡಿ, ನಮ್ಮ ತಂದೆಯ ಕಾಲದಿಂದಲೂ ನಮ್ಮ ಕುಟುಂಬ ಶಿಕ್ಷಣದ ಜೊತೆ ಜೊತೆಗೆ ರಾಜಕಾರಣವನ್ನು ಮಾಡಿಕೊಂಡು ಬರುತ್ತಿದೆ. ಹಿರಿಯೂರು ಕ್ಷೇತ್ರದಲ್ಲಿ ಶಾಸಕರಾಗಿದ್ದ ಸಂದರ್ಭದಲ್ಲಿ ಕ್ಷೇತ್ರವನ್ನು ಎಲ್ಲಾ ರೀತಿಯಿಂದಲೂ ಅಭಿವೃದ್ದಿ ಪಡಿಸಿದ್ದೇನೆ. ಆದರೆ ಮತದಾರರ ತೀರ್ಪನ್ನು ಒಪ್ಪಿಕೊಳ್ಳಲೇಬೇಕಾಗುತ್ತದೆ. ಕಳೆದ ಬಾರಿಯ ಆಗ್ನೇಯ ಪದವಿಧರ ಕ್ಷೇತ್ರದಲ್ಲಿ ಅಲ್ಪ ಅಂತರದಲ್ಲಿ ಸೋತಿರುವ ಶ್ರೀನಿವಾಸ್ ಅವರ ಬಗ್ಗೆ ಕ್ಷೇತ್ರದ ಮತದಾರರಲ್ಲಿ ಒಲವಿದೆ. ಈ ಬಾರಿ ನಮಗೆ ಗೆಲುವು ದೊರೆಯಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಸಿದ್ದಗಂಗಾ ಮಠದ ಭೇಟಿ ನಂತರ, ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರ ಮನೆಗೆ ದಂಪತಿಗಳು ಭೇಟಿ ನೀಡಿದರು. ಈ ವೇಳೆ ರಾಜ್ಯ ಕೃಷಿಕ ಸಮಾಜದ ಕಾರ್ಯಾಧ್ಯಕ್ಷ ಪಾಪಣ್ಣ, ಪ್ರವರ್ಗ 1ರ ಮೀಸಲಾತಿ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಲೋಕೇಶಪ್ಪ, ಮುಖಂಡರಾದ ಡಿ.ಎಂ.ಸತೀಶ್, ಸುರೇಶ್, ಕುಣಿಹಳ್ಳಿ ಮಂಜುನಾಥ್, ಅರುಣ್ ಕೃಷ್ಣಯ್ಯ, ಷಣ್ಮುಖಪ್ಪ, ಶ್ರೀನಿವಾಸ್, ಹುಚ್ಚಾಚಾರ್, ಲೋಕೇಶ್, ಗಂಗಾಧರ್, ಕೃಷ್ಣಕುಮಾರ್, ಬಾಬು ಮತ್ತಿತರರು ಜೊತೆಗಿದ್ದರು.

ಕಾಡುಗೊಲ್ಲರನ್ನು ಎಸ್ಟಿ ಜಾತಿ ಪಟ್ಟಿಗೆ ಸೇರಿಸಲು ವಿರೋಧ ಮಾಡಿಲ್ಲ; ಪೂರ್ಣಿಮ ಶ್ರೀನಿವಾಸ್

You May Also Like

More From Author

+ There are no comments

Add yours