ಪಾಳು ಬಾವಿಗೆ ಬಿದ್ದ ಚಿರತೆ: ನೋಡಲು ಮುಗಿ ಬಿದ್ದ ಜನತೆ
ಆಹಾರ ಅರಸಿ ಬಂದು ಬಾವಿಗೆ ಬಿದ್ದ ಚಿರತೆಯ ರಕ್ಷಣೆ
Tumkurnews
ತುಮಕೂರು: ಆಹಾರ ಅರಸಿಕೊಂಡು ಬಂದ ಚಿರತೆಯೊಂದು ಬಾವಿಗೆ ಬಿದ್ದಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ.
ತುಮಕೂರು: ಮಾಂಸಕ್ಕಾಗಿ ನವಿಲು ಬೇಟೆ! ಮೂವರ ಬಂಧನ
ತಿಪಟೂರು ತಾಲ್ಲೂಕು ಮಾರನಗೆರೆಯಲ್ಲಿ ಘಟನೆ ಸಂಭವಿಸಿದ್ದು, ಆಹಾರ ಹುಡುಕಿಕೊಂಡು ಬಂದ ಚಿರತೆಯು ಆಯ ತಪ್ಪಿ ಪಾಳು ಬಾವಿಗೆ ಬಿದ್ದಿದೆ. ಚಿರತೆ ಬಾವಿಗೆ ಬಿದ್ದ ವಿಷಯ ತಿಳಿದು ಜನರು ಚಿರತೆ ನೋಡಲು ಮುಗಿ ಬಿದ್ದಿದ್ದರು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಯನ್ನು ಬಾವಿಯಿಂದ ಮೇಲೆತ್ತಿ ರಕ್ಷಣೆ ಮಾಡಿದ್ದಾರೆ.
ಬಾಲಕಿ ಮೇಲೆ ದಾಳಿ ನಡೆಸಿದ್ದ ಚಿರತೆ ಸೆರೆ: ವಿಡಿಯೋ
ಕಳೆದ ಹಲವು ದಿನಗಳಿಂದ ಈ ಭಾಗದಲ್ಲಿ ಮೂರು ಚಿರತೆಗಳು ಓಡಾಡಿಕೊಂಡಿರುವುದನ್ನು ಗ್ರಾಮಸ್ಥರು ಗಮನಿಸಿದ್ದರು. ಒಂದು ದಿನದ ಹಿಂದಷ್ಟೇ ಮೇಕೆಯೊಂದನ್ನು ಚಿರತೆ ಬಲಿ ಪಡೆದಿತ್ತು.
ದೇವರಾಯನದುರ್ಗದಲ್ಲಿ ಅಪರೂಪದ ಬೇಟೆಯಾಡಿದ ಚಿರತೆ: ಕ್ಯಾಮೆರಾದಲ್ಲಿ ಸೆರೆ
+ There are no comments
Add yours