ತುಮಕೂರು: ಜಗಳ ಬಿಡಿಸಲು ಬಂದ ಪೊಲೀಸರ 112 ವಾಹನವನ್ನೇ ಕದ್ದೊಯ್ದ ಆಸಾಮಿ!

1 min read

ಜಗಳ ಬಿಡಿಸಲು ಬಂದ ಪೊಲೀಸರ 112 ವಾಹನವನ್ನೇ ಕದ್ದೊಯ್ದ ಆಸಾಮಿ!

ಜಗಳ ಬಿಡಿಸಲು ಬಂದು ಹೈರಾಣಾದ ಪೊಲೀಸರು!

Tumkurnews
ತುಮಕೂರು: ವ್ಯಕ್ತಿಯೋರ್ವ ಜಗಳ ಬಿಡಿಸಲು ಬಂದ ಪೊಲೀಸರ 112 ವಾಹನವನ್ನೇ ಕದ್ದೊಯ್ದು ಪೊಲೀಸರನ್ನು ಹೈರಾಣು ಮಾಡಿರುವ ಪ್ರಕರಣ ನಡೆದಿದೆ.
ಜಿಲ್ಲೆಯ ಗುಬ್ಬಿ ತಾಲ್ಲೂಕು, ಸಿ.ಎಸ್ ಪುರ ಪೊಲೀಸ್ ಠಾಣೆ ವ್ಯಾಪ್ತಿಯ ನಾರಾನಹಳ್ಳಿಯಲ್ಲಿ ಘಟನೆ ಸಂಭವಿಸಿದ್ದು, ಮುನಿಯ ಎಂಬಾತ ಪೊಲೀಸರ ವಾಹನ ಹೊತ್ತೊಯ್ದ ಆಸಾಮಿ.

ಗಬ್ಬೆದ್ದು ನಾರುತ್ತಿದೆ ತುಮಕೂರು KSRTC ಬಸ್ ನಿಲ್ದಾಣ
ಕಳೆದ ರಾತ್ರಿ ಇಲ್ಲಿನ ಮುನಿಯ ಮತ್ತು ಆತನ ಸಹೋದರನ ನಡುವೆ ಜಗಳ ನಡೆಯುತ್ತಿತ್ತು. ಆಗ‌ ಮುನಿಯನ ಸಹೋದರ 112 ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ಸ್ಥಳಕ್ಕೆ ಬರುವಂತೆ ಮನವಿ ಮಾಡಿದ್ದಾನೆ.
ಸ್ಥಳಕ್ಕೆ ಬಂದ 112 ಪೊಲೀಸರು ಜಗಳ ಬಿಡಿಸಿ ಮುನಿಯನಿಗೆ ತಿಳಿ ಹೇಳಿದ್ದಾರೆ.
ಇದರಿಂದ ಕುಪಿತಗೊಂಡ ಮುನಿಯ ಪೊಲೀಸರು ಬಂದಿದ್ದ 112 ವಾಹನದ ಹಿಂಬದಿಯ ಗಾಜು ಹೊಡೆದು ಹಾಕಿದ್ದಾನೆ. ಪೊಲೀಸರು ಕಾರಿನಿಂದ ಇಳಿದು ಗಾಜು ಪರಿಶೀಲನೆ ಮಾಡುತ್ತಿದ್ದಾಗ. ಏಕಾಏಕಿ ಕಾರು ಹತ್ತಿದ ಮುನಿಯ ಕಾರನ್ನು ಚಲಾಯಿಸಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ.
ಈ ಅನಿರೀಕ್ಷಿತ ಘಟನೆಯಿಂದ ಕಕ್ಕಾಬಿಕ್ಕಿಯಾದ ಪೊಲೀಸರು ಇಡೀ ರಾತ್ರಿ ಮುನಿಯ ಹಾಗೂ 112 ವಾಹನವನ್ನು ಹುಡುಕಿದ್ದಾರೆ. ಕೊನೆಗೆ ಸತತ ಮೂರ್ನಾಲ್ಕು ಗಂಟೆಗಳ ಹುಡುಕಾಟದ ಬಳಿಕ ತುಮಕೂರು ತಾಲ್ಲೂಕಿನ ಹೆಬ್ಬೂರು ಬಳಿ ವಾಹನ ಸಮೇತವಾಗಿ ಮುನಿಯ ಪತ್ತೆಯಾಗಿದ್ದಾನೆ. ಕೊನೆಗೂ‌ ಮುನಿಯನನ್ನು ಪತ್ತೆ ಮಾಡಿದ ಪೊಲೀಸರು 112 ವಾಹನವನ್ನು ಸುಪರ್ದಿಗೆ ಪಡೆದು, ಮುನಿಯನನ್ನು ವಶಕ್ಕೆ ಪಡೆದಿದ್ದಾರೆ.

ಮಹಿಳಾ ಪೊಲೀಸ್ ಮುಂದೆ ಡ್ರಾಗರ್ ಹಿಡಿದು ಪುಡಿರೌಡಿ ಹುಚ್ಚಾಟ: ವಿಡಿಯೋ

You May Also Like

More From Author

+ There are no comments

Add yours