ಗಬ್ಬೆದ್ದು ನಾರುತ್ತಿದೆ ತುಮಕೂರು KSRTC ಬಸ್ ನಿಲ್ದಾಣ

1 min read

ಇದೇನು ಬಸ್ ನಿಲ್ದಾಣವೋ? ತ್ಯಾಜ್ಯ ವಿಲೇವಾರಿ ಘಟಕವೋ?

Tumkurnews
ತುಮಕೂರು: ಇದೇನು ಬಸ್ ನಿಲ್ದಾಣವೋ ಅಥವಾ ತಿಪ್ಪೆಗುಂಡಿಯೋ? ಎನ್ನುವ ಅನುಮಾನ ತುಮಕೂರಿನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣವನ್ನು ನೋಡಿದಾಗ ಮನಸ್ಸಿನಲ್ಲಿ ಮೂಡುತ್ತದೆ!

ತುಮಕೂರು KSRTC ಬಸ್ ನಿಲ್ದಾಣ: ಅಧಿಕಾರಿಗಳ ಮನವಿ ತಿರಸ್ಕರಿಸಿದ ಪರಮೇಶ್ವರ್
ಹೌದು, ಸ್ಮಾರ್ಟ್ ಸಿಟಿ ಖ್ಯಾತಿಯ ತುಮಕೂರಿನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಸ್ವಚ್ಚತೆ ಇಲ್ಲದೇ ತಿಪ್ಪೆಗುಂಡಿಯಂತಾಗಿದೆ.
ಬಸ್ ನಿಲ್ದಾಣದ ಗೇಟಿನಲ್ಲೇ ರಾಶಿ ರಾಶಿ ಕಸವನ್ನು ತುಂಬಿಡಲಾಗಿದೆ. ವಾರ ಕಳೆದರೂ ಈ ಕಸದ ರಾಶಿಯನ್ನು ತೆರವುಗೊಳಿಸುತ್ತಿಲ್ಲ. ಹೀಗಾಗಿ ಬಸ್ ನಿಲ್ದಾಣ ತಿಪ್ಪೆಗುಂಡಿಗಿಂತಲೂ ಕಡೆಯಾಗಿದೆ.

(ಬಸ್ ನಿಲ್ದಾಣದ ಗೇಟಿನಲ್ಲಿ ಕಸದ ರಾಶಿ)

ಕಳ್ಳರ ಪಾಲಿನ ಸ್ವರ್ಗ; ತುಮಕೂರು KSRTC ಬಸ್ ನಿಲ್ದಾಣ!
ಬಸ್ ನಿಲ್ದಾಣದಲ್ಲಿ ಹುಡುಕಿದರೂ ಸ್ವಚ್ಚತೆ ಇಲ್ಲ, ಎಲ್ಲೆಂದರಲ್ಲಿ ಗುಟ್ಕಾ ಉಗುಳಿರುವ ಕಲೆ ಇದೆ. ನಿಲ್ದಾಣದಲ್ಲಿ ನೆಪ ಮಾತ್ರಕ್ಕೆ ಒಂದೆರಡು ಕಸದ ಡಬ್ಬಿಗಳನ್ನು ಇಡಲಾಗಿದೆ. ಎಲ್ಲಾ ಅಂಕಣಗಳಲ್ಲಿ ಕಸದ ಡಬ್ಬಿ ಇಲ್ಲದ ಕಾರಣ ಪ್ರಯಾಣಿಕರು ಎಲ್ಲೆಂದರಲ್ಲಿ ಕಸ ಹಾಕುವಂತಾಗಿದೆ. ಇನ್ನು ಇರುವ ಒಂದರೆಡು ಕಸದ ತುಂಬಿಗಳು ಸದಾ ತುಂಬಿ ತುಳುಕುತ್ತಿರುತ್ತವೆ. ಅವುಗಳನ್ನು ಖಾಲಿ ಮಾಡುವ ಕೆಲಸವೂ ಸಮಯಕ್ಕೆ ಸರಿಯಾಗಿ ನಡೆಯುತ್ತಿಲ್ಲ.
ಕೂರಲು ಆಸನವೇ ಇಲ್ಲ!: ಬಸ್ ನಿಲ್ದಾಣದ ನಾಲ್ಕನೇ ಫ್ಲಾಟ್ ಫಾರಂನಲ್ಲಿ ಪ್ರಯಾಣಿಕರ ಆಸನ ಮುರಿದು ಬಿದ್ದಿದೆ. ವಾರ ಕಳೆದರೂ ಅವುಗಳನ್ನು ಸರಿಪಡಿಸುವ ಕೆಲಸವಾಗಿಲ್ಲ. ಸರಿಯಾದ ಆಸನ ವ್ಯವಸ್ಥೆ ಇಲ್ಲದೇ ಪ್ರಯಾಣಿಕರು, ವಯೋವೃದ್ಧರು, ಮಹಿಳೆಯರು ತಾಸುಗಟ್ಟಲೆ ನಿಂತುಕೊಂಡು ಬಸ್ ಕಾಯಬೇಕಾದ ಪರಿಸ್ಥಿತಿ ಇದೆ.

(ಮುರಿದು ಬಿದ್ದಿರುವ ಪ್ರಯಾಣಿಕರ ಆಸನ)

ವಿದ್ಯಾರ್ಥಿಗಳಿಗೆ ಬಸ್ ಸಮಸ್ಯೆ: ಅಧಿಕಾರಿ, ಜನಪ್ರತಿನಿಧಿಗಳು ಮೌನಕ್ಕೆ ಶರಣು!
ಶೌಚಾಲಯ ಸ್ವಚ್ಚತೆ ಇಲ್ಲ: ಬಸ್ ನಿಲ್ದಾಣದ ಶೌಚಾಲಯದ ಸ್ವಚ್ಚತೆಯಂತೂ ಮರೀಚಿಕೆಯಾಗಿದೆ. ಸ್ವಚ್ಚತೆ ಇಲ್ಲದ ಶೌಚಾಲಯ ಬಳಕೆಯಿಂದಾಗಿ ಚಾಲಕ, ನಿರ್ವಾಹಕರು ಮೂತ್ರಕೋಶ ಸೋಂಕಿಗೆ ಒಳಗಾಗಿರುವುದೂ ಇದೆ. ಇನ್ನು ಪುರುಷರಿಗೆ ಮೂತ್ರ ವಿಸರ್ಜನೆಗೆ ಉಚಿತ ಇದ್ದರೂ ಇಲ್ಲಿ 5 ರೂ. ಶುಲ್ಕ ವಸೂಲಿ ಮಾಡಲಾಗುತ್ತಿದೆ. ಇದನ್ನು ಪ್ರಶ್ನೆ ಮಾಡುವ ಸಾರ್ವಜನಿಕರ ಮೇಲೆ ಶೌಚಾಲಯ ನಿರ್ವಹಣೆ ಮಾಡುವ ಹೊರ ರಾಜ್ಯದ ಕಾರ್ಮಿಕರು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುವುದು ಕಂಡು ಬಂದಿದೆ. ಒಟ್ಟಿನಲ್ಲಿ ತುಮಕೂರಿನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸಮಸ್ಯೆಗಳನ್ನು ಹೇಳುವವರು, ಕೇಳುವವರು ಇಲ್ಲದಂತಾಗಿರುವುದು ಮಾತ್ರ ವಿಪರ್ಯಾಸ.

ಜನತಾ ದರ್ಶನಕ್ಕೆ KSRTC ಬಸ್’ನಲ್ಲಿ ಬಂದ ಜಿಲ್ಲಾಧಿಕಾರಿ!

ಡಿ.ಸಿ‌ ಪ್ರತಿಕ್ರಿಯೆ: ಈ ಕುರಿತು ಕೆ.ಎಸ್.ಆರ್.ಟಿ.ಸಿ ವಿಭಾಗಿಯ ನಿಯಂತ್ರಣಾಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದಾರೆ.
ಬಸ್ ನಿಲ್ದಾಣದ ಗೇಟಿನಲ್ಲಿ ಸಂಗ್ರಹಿಸಿಟ್ಟಿರುವ ಕಸದ ರಾಶಿಯನ್ನು ಹಸಿ ಮತ್ತು ಒಣ ಕಸವನ್ನು ಬೇರ್ಪಡಿಸಿ, ವಿಲೇವಾರಿಗೆ ಇರಿಸಲಾಗಿದೆ. ಬಸ್ ನಿಲ್ದಾಣದಲ್ಲಿ ಸ್ವಚ್ಚತೆಯನ್ನು ಕಾಪಾಡಿಕೊಳ್ಳಲಾಗುತ್ತಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

You May Also Like

More From Author

+ There are no comments

Add yours