ತುಮಕೂರು: 5 ನಾಪತ್ತೆ ಪ್ರಕರಣಗಳು ದಾಖಲು
Tumkurnews
ತುಮಕೂರು: ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ 5 ಪ್ರತ್ಯೇಕ ಕಾಣೆ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ಸಬ್ ಇನ್ಸ್’ಪೆಕ್ಟರ್ ತಿಳಿಸಿದ್ದಾರೆ.
ತುಮಕೂರು: ಸಾರ್ವಜನಿಕರ ಮೇಲೆ ಪುಂಡರ ದಾಳಿ, ಪೊಲೀಸ್ ಮೇಲೆ ಹಲ್ಲೆ: ವಿಡಿಯೋ
ಪ್ರಕರಣ– 1: ಸುಮಾರು 41 ವರ್ಷದ ಶಿವಕುಮಾರ್ ಎಂಬ ವ್ಯಕ್ತಿಯು ಅಕ್ಟೋಬರ್ 16, 2023ರಂದು ಮನೆಯಿಂದ ಹೋದವನು ಮರಳಿ ಬಾರದೆ ಕಾಣೆಯಾಗಿದ್ದಾನೆ. ಈತನು 5.9 ಅಡಿ ಎತ್ತರ, ದುಂಡು ಮುಖ, ಕಪ್ಪು ಮೈಬಣ್ಣ, ದೃಢಕಾಯ ಶರೀರ ಹೊಂದಿದ್ದು, ಕನ್ನಡ, ಇಂಗ್ಲೀಷ್, ಹಿಂದಿ ಮತ್ತು ತೆಲುಗು ಮಾತನಾಡುತ್ತಾನೆ.
ಮದ್ಯ ಮಾರಾಟಗಾರರಿಗೆ ಗೃಹ ಸಚಿವ ಪರಮೇಶ್ವರ್ ಎಚ್ಚರಿಕೆ
ಪ್ರಕರಣ–2: ಸುಮಾರು 25 ವರ್ಷದ ಪೂಜಾ ಕೋಂ ಸುನಿಲ್ ಕುಮಾರ್ ಎಂಬ ಮಹಿಳೆಯು ಅಕ್ಟೋಬರ್ 13, 2023ರಂದು ಬೆಳಿಗ್ಗೆ ಶಾಪಿಂಗ್‍ಗೆ ಹೋಗಿ ಬರುತ್ತೇನೆಂದು ಹೋದವಳು ಮರಳಿ ಬಂದಿರುವುದಿಲ್ಲ. ಈಕೆಯು 159 ಸೆಂ.ಮೀ. ಎತ್ತರ, ದುಂಡು ಮುಖ, ಗೋಧಿ ಮೈಬಣ್ಣ, ತೆಳ್ಳನೆಯ ಶರೀರ ಹೊಂದಿದ್ದು, ಮುಖದ ಮೇಲೆ ಗಾಯದ ಗುರುತು ಇರುತ್ತದೆ. ಈಕೆಯು ಕನ್ನಡ ಮತ್ತು ಇಂಗ್ಲೀಷ್ ಮಾತನಾಡುತ್ತಾಳೆ.
ಗೃಹ ಸಚಿವ ಪರಮೇಶ್ವರ್ ಒಡೆತನದ SSIT ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ
ಪ್ರಕರಣ –3: ಸುಮಾರು 20 ವರ್ಷದ ಲಿಖಿತ್ ರಾಜ್ ಎಂಬ ಯುವಕನು ಅಕ್ಟೋಬರ್ 14, 2023ರಂದು ದಾಬಸ್‍ಪೇಟೆಗೆ ಹೋಗಿ ಕಾರ್ಯಕ್ರಮದ ಬಗ್ಗೆ ಗೊತ್ತುಪಡಿಸಿಕೊಂಡು ಬರುತ್ತೇನೆಂದು ಹೋದವನು ಮರಳಿ ಬಂದಿರುವುದಿಲ್ಲ. ಈತನು 5.2 ಅಡಿ ಎತ್ತರ ದುಂಡು ಮುಖ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ ಹೊಂದಿದ್ದು, ಕನ್ನಡ ಮಾತನಾಡುತ್ತಾನೆ.
ಮಾಜಿ ಶಾಸಕ ಡಿ.ಸಿ ಗೌರಿಶಂಕರ್ ಕಾಂಗ್ರೆಸ್ ಸೇರ್ಪಡೆ! ಅಸಲಿ ಕಾರಣ ಬಯಲು
ಪ್ರಕರಣ –4: ಸುಮಾರು 19 ವರ್ಷದ ಮೇಘನ ಆರ್.ಜಿ. ಎಂಬ ಯುವತಿಯು ಅಕ್ಟೋಬರ್ 31, 2023ರಂದು ತನ್ನ ಮನೆಯಿಂದ ಕಾಣೆಯಾಗಿದ್ದಾಳೆ. ಈಕೆಯು 5.3 ಅಡಿ ಎತ್ತರ, ದುಂಡು ಮುಖ, ಗೋಧಿ ಮೈಬಣ್ಣ ಹೊಂದಿದ್ದು, ಕನ್ನಡ ಮಾತನಾಡುತ್ತಾಳೆ.
ಪ್ರಕರಣ – 5: ಸುಮಾರು 23ವರ್ಷದ ಲಾವಣ್ಯ ಎಂಬುವಳು ನವೆಂಬರ್ 4, 2023ರಿಂದ ಕಾಣೆಯಾಗಿದ್ದಾಳೆ. ಈಕೆಯು 155 ಸೆಂ.ಮೀ. ಎತ್ತರ, ದುಂಡು ಮುಖ, ಗೋಧಿ ಮೈಬಣ್ಣ ಹೊಂದಿದ್ದು, ಕನ್ನಡ ಮಾತನಾಡುತ್ತಾಳೆ.
ಕಾಣೆಯಾದ ಇವರ ಬಗ್ಗೆ ಸುಳಿವು ಸಿಕ್ಕವರು ಕೂಡಲೇ ಹತ್ತಿರದ ಪೊಲೀಸ್ ಠಾಣೆಯನ್ನು ಸಂಪರ್ಕಿಸಬೇಕೆಂದು ಪೊಲೀಸ್ ಸಬ್ ಇನ್ಸ್’ಪೆಕ್ಟರ್ ಮನವಿ ಮಾಡಿದ್ದಾರೆ.
ಗೂಳೂರು ಗಣೇಶ ಪ್ರತಿಷ್ಟಾಪನೆ: ಏನಿದರ ವಿಶೇಷ?
+ There are no comments
Add yours