ಒಂದೆರಡು ಬೈ ಎಲೆಕ್ಷನ್ ಗೆಲ್ಲಿಸಿದಾಕ್ಷಣ ದೊಡ್ಡ ಸಂಘಟನಾ ಚುತುರನಲ್ಲ: ಕೆ.ಎನ್ ರಾಜಣ್ಣ
Tumkurnews
ತುಮಕೂರು: ಒಂದೆರಡು ಬೈ ಎಲೆಕ್ಷನ್ ಗೆಲ್ಲಿಸಿದಾಕ್ಷಣ ದೊಡ್ಡ ಸಂಘಟನಾ ಚುತುರ ಎಂದು ಸರ್ಟಿಫಿಕೇಟ್ ನೀಡಲಾಗುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಬಿ.ವೈ ವಿಜಯೇಂದ್ರ ನೇಮಕ ಕುರಿತು ಕಾಂಗ್ರೆಸ್ ಸಚಿವ ಕೆ.ಎನ್ ರಾಜಣ್ಣ ಅಭಿಪ್ರಾಯಿಸಿದರು.
ದಿಢೀರ್ ರಾಜಕೀಯ ನಿವೃತ್ತಿ ಘೋಷಿಸಿದ ಕೆ.ಎನ್ ರಾಜಣ್ಣ! ಅಭಿಮಾನಿಗಳು ಶಾಕ್! ವಿಡಿಯೋ
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಕ್ಷದಲ್ಲಿ ಬಹಳ ದಿನಗಳಿಂದ ನನೆಗುದಿಗೆ ಬಿದ್ದಿದ್ದ ಅಧ್ಯಕ್ಷ ಮತ್ತು ವಿರೋಧ ಪಕ್ಷದ ನಾಯಕ ಸ್ಥಾನಗಳಲ್ಲಿ ಅಧ್ಯಕ್ಷ ಸ್ಥಾನಕ್ಕೆ ಯಡಿಯೂರಪ್ಪ ಅವರ ಮಗ ವಿಜಯೇಂದ್ರನನ್ನು ತಂದಿದ್ದಾರೆ. ಇದರ ಬಗ್ಗೆ ಬಿಜೆಪಿ ಪಕ್ಷದ ಮುಖಂಡರಲ್ಲಿಯೇ ತೀವ್ರ ಅಸಮಾಧಾನವಿದೆ. ಒಂದೆರಡು ಬೈ ಎಲೆಕ್ಷನ್ ಗೆಲ್ಲಿಸಿದಾಕ್ಷಣ ದೊಡ್ಡ ಸಂಘಟನಾ ಚುತುರ ಎಂದು ಸರ್ಟಿಫಿಕೇಟ್ ನೀಡಲಾಗದು ಎಂದರು.
ಸಿದ್ಧಗಂಗಾ ಮಠಕ್ಕೆ ವಿಜಯೇಂದ್ರ ಭೇಟಿ: ರಾಜ್ಯಾಧ್ಯಕ್ಷನಾಗಿ ಅಧಿಕಾರ ಸ್ವೀಕಾರ ದಿನಾಂಕ ಪ್ರಕಟ
ಇತ್ತೀಚಿನ ಬೈ ಎಲೆಕ್ಷನ್’ಗಳು ಯಾವ ಆಧಾರದ ಮೇಲೆ ಗೆಲುವು ಪಡೆಯುತ್ತವೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ನಂಜನಗೂಡು, ಗುಂಡ್ಲುಪೇಟೆ ಬೈ ಎಲೆಕ್ಷನ್’ನಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ಆರೇ ತಿಂಗಳಿಗೆ ಮತ್ತೆ ಸೋಲಾಯಿತು. ಬಳ್ಳಾರಿ ಲೋಕಸಭೆ ಬೈ ಎಲೆಕ್ಷನ್ 2 ಲಕ್ಷ ಮತಗಳಿಂದ ಗೆದ್ದರೂ, ಸಾರ್ವತ್ರಿಕ ಚುನಾವಣೆಯಲ್ಲಿ ಸೋತೆವು. ಬೈ ಎಲೆಕ್ಷನ್ ಗೆಲುವೇ ಮಾನದಂಡ ಅನ್ನೋದು ಅಷ್ಟು ಸರಿಯಲ್ಲ ಎಂದು ತಿಳಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ನೇಮಕ: ಇಲ್ಲಿದೆ ಆದೇಶ ಪ್ರತಿ
ವಿಜಯೇಂದ್ರಗೆ ಮುಂದೆ ದೊಡ್ಡ ಸವಾಲಿದೆ. ಯಡಿಯೂರಪ್ಪ ಅವರಿಗೆ 50 ವರ್ಷದ ಹೋರಾಟ ಇತ್ತು. ಆದರೆ ಇವರಿಗೆ ಯಡಿಯೂರಪ್ಪ ಹೆಸರೇ ಬಲ. ಪಕ್ಷ ಬಲಗೊಳ್ಳದಿದ್ದರೆ ಅಧ್ಯಕ್ಷ ಸ್ಥಾನ ನೀಡಿ ಏನು ಪ್ರಯೋಜನ. ಕಾದು ನೋಡುವ ಎಂದರು.
ಪರಮೇಶ್ವರ್ ಮುಂದಿನ ಮುಖ್ಯಮಂತ್ರಿ: ಸಚಿವ ಕೆ.ಎನ್ ರಾಜಣ್ಣ
+ There are no comments
Add yours