ಸಿದ್ಧಗಂಗಾ ಮಠಕ್ಕೆ ವಿಜಯೇಂದ್ರ ಭೇಟಿ: ರಾಜ್ಯಾಧ್ಯಕ್ಷನಾಗಿ ಅಧಿಕಾರ ಸ್ವೀಕಾರ ದಿನಾಂಕ ಪ್ರಕಟ
Tumkurnews
ತುಮಕೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಭಾನುವಾರ ಇಲ್ಲಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಮಠಾಧ್ಯಕ್ಷ ಶ್ರೀ ಸಿದ್ಧಲಿಂಗ ಸ್ವಾಮಿ ಅವರ ಆಶೀರ್ವಾದ ಪಡೆದರು.
ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ನೇಮಕ: ಇಲ್ಲಿದೆ ಆದೇಶ ಪ್ರತಿ
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನವೆಂಬರ್ 15ರಂದು ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಮಲ್ಲೇಶ್ವರಂ ರಾಜ್ಯ ಬಿಜೆಪಿ ಕಚೇರಿಯಲ್ಲಿ ರಾಜ್ಯಾಧ್ಯಕ್ಷನಾಗಿ ಅಧಿಕಾರ ಸ್ವೀಕರಿಸುತ್ತೇನೆ. ಮಾರನೇ ದಿನ ಅಂದರೆ ನವೆಂಬರ್ 16ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಾರ್ಯಕರ್ತರ ಸಭೆ ನಡೆಸುವ ನಿರ್ಣಯ ಮಾಡಿದ್ದೇವೆ. ಪಕ್ಷದ ಎಲ್ಲಾ ಹಿರಿಯರ ಸಮ್ಮುಖದಲ್ಲಿ ಜವಾಬ್ದಾರಿ ಸ್ವೀಕಾರ ಮಾಡುತ್ತೇನೆ. ಈ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗಿಯಾಗುತ್ತಾರೆ ಎಂದು ತಿಳಿಸಿದರು.
ಚುನಾವಣೆ ಇರುವುದರಿಂದ ರಾಷ್ಟ್ರೀಯ ನಾಯಕರು ಜವಬ್ದಾರಿ ಸ್ವೀಕಾರ ಸಮಾರಂಭಕ್ಕೆ ಬರುತ್ತಿಲ್ಲ. ವೀಕ್ಷಕರು ಬರುವ ಸಾಧ್ಯತೆಯಿದೆ. ನಮ್ಮ ಮೊದಲ ಆದ್ಯತೆ ರೈತರಿಗೆ ಬರ ಪರಿಹಾರ ಕೊಡಿಸುವುದು ಎಂದರು.
ರಾಜ್ಯದ ನೂತನ ಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್! ಸಿದ್ದರಾಮಯ್ಯಗೆ ಹೊಸ ಜವಬ್ದಾರಿ! ರಾಜ್ಯದಲ್ಲಿ ಅಚ್ಚರಿ
ತಂದೆ ಹಾದಿಯಲ್ಲಿ: ಕೇಂದ್ರದ ವರಿಷ್ಠರು ಚರ್ಚೆ ಮಾಡಿ ಬಿಜೆಪಿಯ ರಾಜ್ಯದ ಅಧ್ಯಕ್ಷನಾಗಿ ಆಯ್ಕೆ ಮಾಡಿದ ನಂತರ, ಜವಾಬ್ದಾರಿ ಪಡೆಯುವ ಮುನ್ನ ಸಿದ್ದಗಂಗಾ ಮಠಕ್ಕೆ ಬಂದು ಪೂಜ್ಯರ ಆಶೀರ್ವಾದ ಪಡೆದಿದ್ದೇನೆ. ತಂದೆಯವರು ಕೂಡ ಯಾವುದೇ ಜವಾಬ್ದಾರಿ ತೆಗೆದುಕೊಳ್ಳುವ ಮುನ್ನ, ಸಿದ್ದಗಂಗೆಗೆ ಭೇಟಿ ನೀಡಿ ಪೂಜ್ಯರ ಆಶೀರ್ವಾದ ಪಡೆದು ಮುಂದೆ ಸಾಗುತ್ತಿದ್ದರು. ಅದೇ ರೀತಿ ನಾನು ಕೂಡ ಇಲ್ಲಿ ಬಂದು ಪೂಜ್ಯರ ಆಶೀರ್ವಾದ ಪಡೆದಿದ್ದೇನೆ ಎಂದು ತಿಳಿಸಿದರು.
ಬಿಜೆಪಿಗೆ ಒಂದೇ ಒಂದು ವೋಟು ಹಾಕಬೇಡಿ: ಸಿಎಂ ಸಿದ್ದು ನೀಡಿದ ಕಾರಣವೇನು?
+ There are no comments
Add yours