ಶಾಲಾಕಾಲೇಜುಗಳಿಗೆ ನಾಳೆಯಿಂದ ಮೂರು ದಿನ ರಜೆ
Tumkurnews
ತುಮಕೂರು: ದೀಪಾವಳಿ ಹಬ್ಬದ ಪ್ರಯುಕ್ತ ಕೆಲವು ಖಾಸಗಿ ಶಾಲಾಕಾಲೇಜುಗಳಿಗೆ ಮೂರು ದಿನಗಳ ಸರಣಿ ರಜೆ ದೊರೆತಿದೆ.
ನವೆಂಬರ್ 12 ಭಾನುವಾರ ಎಂದಿನಂತೆ ಸರ್ಕಾರಿ ರಜೆ, ನವೆಂಬರ್ 13 ಸೋಮವಾರ ದೀಪಾವಳಿ ಅಮವಾಸ್ಯೆಯಾಗಿರುವುದರಿಂದ ರಾಜ್ಯದ ಬಹುತೇಕ ಖಾಸಗಿ ಶಾಲಾಕಾಲೇಜುಗಳು ರಜೆ ಘೋಷಣೆ ಮಾಡಿವೆ. ನವೆಂಬರ್ 14 ಮಂಗಳವಾರ ದೀಪಾವಳಿ ಹಬ್ಬದ ಪ್ರಯುಕ್ತ ಸರ್ಕಾರಿ ರಜೆ ಇದೆ. ಹೀಗಾಗಿ ಶಾಲಾಕಾಲೇಜುಗಳಿಗೆ ಮೂರು ದಿನಗಳ ರಜೆ ಸೌಲಭ್ಯ ದೊರೆತಿದೆ.
ಬರ ನಿರ್ವಹಣೆಗೆ ಕೇಂದ್ರದಿಂದ ಅನುದಾನ ಬಂದಿಲ್ಲ: ಕೆಡಿಪಿ ಸಭೆಯಲ್ಲಿ ಪರಮೇಶ್ವರ್ ಆರೋಪ: ಸಮಗ್ರ ವರದಿ
” ದೀಪಾವಳಿ ಹಬ್ಬದ ಪ್ರಯುಕ್ತ ರಾಜ್ಯದ ಬಹುತೇಕ ಖಾಸಗಿ ಶಾಲಾಕಾಲೇಜುಗಳು ದೀಪಾವಳಿ ಅಮವಾಸ್ಯೆಗೆ ರಜೆ ಘೋಷಣೆ ಮಾಡುತ್ತವೆ, ದೀಪಾವಳಿಯ ಸರ್ಕಾರಿ ರಜೆಯೂ ಸೇರಿದಂತೆ ಎರಡು ದಿನಗಳ ರಜೆ ಸಿಗುತ್ತದೆ. ಆದಾಗ್ಯೂ ರಜೆ ಘೋಷಣೆ ಮಾಡುವುದು, ಬಿಡುವುದು ಆಯಾ ಶಿಕ್ಷಣ ಸಂಸ್ಥೆಗಳ ವಿವೇಚನೆಗೆ ಸೇರಿದ್ದಾಗಿರುತ್ತದೆ” ಎಂದು ಮಾನ್ಯತೆ ಪಡೆದ ಅನುದಾನಿತ ಶಾಲೆಗಳ ಒಕ್ಕೂಟ(ರುಪ್ಸಾ) ಅಧ್ಯಕ್ಷ ಡಾ.ಹಾಲನೂರು ಲೇಪಾಕ್ಷ ತಿಳಿಸಿದ್ದಾರೆ.
ಸರ್ಕಾರಿಗೆ ರಜೆ ಇಲ್ಲ: ದೀಪಾವಳಿ ಅಮವಾಸ್ಯೆ ಪ್ರಯುಕ್ತ ಸರ್ಕಾರಿ ರಜೆ ಘೋಷಣೆ ಮಾಡಿಲ್ಲ. ಹೀಗಾಗಿ ನವೆಂಬರ್ 13ರ ಸೋಮವಾರದ ರಜೆ ಸರ್ಕಾರಿ ಶಾಲಾಕಾಲೇಜುಗಳಿಗೆ ಅನ್ವಹಿಸುವುದಿಲ್ಲ, ನವೆಂಬರ್ 14ರಂದು ಸರ್ಕಾರಿ ರಜೆ ಇದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿ ಸಿ.ನಂಜಪ್ಪ ತಿಳಿಸಿದ್ದಾರೆ.
ನಿಮ್ಮ ಮನೆಯಲ್ಲಿ 6-18 ವರ್ಷದ ಮಕ್ಕಳಿದ್ದಾರೆಯೇ?: ಸರ್ಕಾರದ ಮಹತ್ವದ ಸೂಚನೆ: ಗಮನಿಸಿ
+ There are no comments
Add yours