ಪ್ರತಿ ರೈತರಿಗೆ ಸಿಗುತ್ತೆ 50 ಸಾವಿರ! ಸರ್ಕಾರದಿಂದ 500 ಕೋಟಿ ವೆಚ್ಚ!
Tumkurnews
ತುಮಕೂರು; ಜಿಲ್ಲೆಯ ಎಲ್ಲಾ 10 ತಾಲ್ಲೂಕುಗಳು ಬರ ಪೀಡಿತವಾಗಿದ್ದು, ರೈತರ ತೆರವಿಗೆ ಧಾವಿಸಲು ಸರ್ಕಾರ ನರೇಗಾ ಯೋಜನೆಗೆ ಮತ್ತಷ್ಟು ಆದ್ಯತೆ ನೀಡುತ್ತಿದೆ. ಈ ನಿಟ್ಟಿನಲ್ಲಿ 500 ಕೋಟಿ ರೂ. ವೆಚ್ಚದ ನರೇಗಾ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳನ್ನು ಅನುಷ್ಟಾನಗೊಳಿಸಲಾಗುತ್ತಿದೆ!
ತುಮಕೂರು ಜಿಲ್ಲೆ ರಾಜ್ಯದಲ್ಲಿಯೇ ನಂಬರ್ ಒನ್
ಈ ಕುರಿತು ಜಿಪಂ ಸಿಇಒ ಜಿ.ಪ್ರಭು ರೈತರಿಗೆ ಮಾಹಿತಿ ನೀಡಿದ್ದು, ನರೇಗಾ ಸದ್ಬಳಕೆಗೆ ಕರೆ ನೀಡಿದ್ದಾರೆ. 500 ಕೋಟಿ ವೆಚ್ಚದ ನರೇಗಾ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳನ್ನು ಅನುಷ್ಟಾಗೊಳಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಗೃಹ ಲಕ್ಷ್ಮಿಯ 2 ಸಾವಿರ ಸ್ಥಗಿತ? ಚಿಟ್ ಫಂಡ್’ಗೆ ಹೂಡಿಕೆ?: ಸಿಎಂ ಸಿದ್ದರಾಮಯ್ಯ ಮಾಹಿತಿ
ರೈತರಿಗೆ ಸಿಗುತ್ತೆ 50 ಸಾವಿರ!: ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 300 ರಿಂದ 500 ಜನ ಹಾಗೂ ಪ್ರತಿ ರೈತನಿಗೆ 30 ರಿಂದ 50ಸಾವಿರದ ವರೆಗಿನ ಕಾಮಗಾರಿಯಂತೆ ಜಿಲ್ಲೆಯ ಒಂದು ಲಕ್ಷ ರೈತರನ್ನು ಯೋಜನೆ ವ್ಯಾಪ್ತಿಗೆ ಒಳಪಡಿಸಲಾಗಿದೆ. ಮುಂದುವರೆದು, ಅಂಗನವಾಡಿ ಶಾಲೆ, ಆಸ್ಪತ್ರೆ, ಇತರೆ ಸರ್ಕಾರಿ ಕಟ್ಟಡ, ರಸ್ತೆ ಮೊದಲಾದ ಸಮುದಾಯ ಆಧಾರಿತ ಕಾಮಗಾರಿಗಳ ಅನುಷ್ಟಾಗೊಳಿಸಲಾಗುತ್ತಿದೆ ಎಂದು ಜಿಪಂ ಸಿಇಒ ಜಿ.ಪ್ರಭು ತಿಳಿಸಿದ್ದಾರೆ.
ತುಮಕೂರು: ಶೇ.85ರಷ್ಟು ಬೆಳೆ ನಷ್ಟ, ರೈತರಿಗೆ ಎಷ್ಟು ಕೋಟಿ ಲಾಸ್ ಗೊತ್ತೇ?
+ There are no comments
Add yours