ಈರುಳ್ಳಿ ಬೆಲೆ ದಿಢೀರ್ ಏರಿಕೆ! ದಾಖಲೆ ಬೆಲೆಗೆ ಮಾರಾಟ: ಎಷ್ಟಾಗಿದೆ ಈಗ?

1 min read

ದಾಖಲೆ ಬೆಲೆಗೆ ಈರುಳ್ಳಿ ಮಾರಾಟ! ದಿಢೀರ್ ಬೆಲೆ ಏರಿಕೆ

Tumkurnews
ತುಮಕೂರು: ಕಳೆದ ಕೆಲ ದಿನಗಳ ಹಿಂದೆ ಗ್ರಾಹಕರಿಗೆ ಬೆಲೆ ಏರಿಕೆಯ ಶಾಕ್ ನೀಡಿತ್ತು ಟೊಮ್ಯಾಟೊ. ಈಗ ಈರುಳ್ಳಿ ಸರದಿ! ಹೌದು ಮಾರುಕಟ್ಟೆಯಲ್ಲಿ ದಿನೇದಿನೆ ಈರುಳ್ಳಿ ಬೆಲೆ ಹೆಚ್ಚಾಗುತ್ತಿದ್ದು, ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ಮುಟ್ಟಿಸಲಿದೆ.

ಟೊಮ್ಯಾಟೊ ಬೆಳೆದು ಮತ್ತೋರ್ವ ರೈತ ಆತ್ಮಹತ್ಯೆ
ದಾಖಲೆ ಬೆಲೆಗೆ ಮಾರಾಟ: ಜಿಲ್ಲೆಯಲ್ಲಿ ಪ್ರಮುಖ ಈರುಳ್ಳಿ ಮಾರುಕಟ್ಟೆಯಾದ ಹುಳಿಯಾರಿನಲ್ಲಿ ಭಾನುವಾರ ಕಿಲೋ ಈರುಳ್ಳಿ 100 ರೂ.ಗೆ ಹಾಗೂ ಕ್ವಿಂಟಲ್‌ಗೆ 6 ಸಾವಿರ ರೂ.ನಂತೆ ಮಾರಾಟವಾಗಿದೆ!
ಬೆಲೆ ಏರಿಕೆಗೆ ಕಾರಣ ಏನು?: ಬೆಲೆ ಏರಿಕೆಗೆ ಮಳೆ ಕೊರತೆಯೇ ಪ್ರಮುಖ ಕಾರಣವಾಗಿದೆ. ಈ ವರ್ಷ ಸಮಯಕ್ಕೆ ಸರಿಯಾಗಿ ಮಳೆಯಾಗಲಿಲ್ಲ. ಹೀಗಾಗಿ ಕೆಲವು ಕಡೆಗಳಲ್ಲಿ ನಾಟಿ ಮಾಡಿದ್ದ ಬೀಜ ಮೊಳಕೆಯೊಡೆದಿಲ್ಲ. ಇದರಿಂದಾಗಿ ಇಳುವರಿ ಕುಸಿತ ಕಂಡಿದೆ. ಬೇಡಿಕೆಗೆ ತಕ್ಕಷ್ಟು ಪೈರೈಕೆಯಾಗದ ಹಿನ್ನೆಲೆಯಲ್ಲಿ ಬೆಲೆ ಹೆಚ್ಚಾಗುತ್ತಿದೆ.
ಮಳೆಯ ಕೊರತೆ ಭೀತಿಯಿಂದ ಈ ಬಾರಿ ಬಹುತೇಕ ರೈತರು ಈರುಳ್ಳಿ ಬೆಳೆದಿಲ್ಲ. ಜೊತೆಗೆ ಹುಳಿಯಾರು ಮಾರುಕಟ್ಟೆಗೆ ಸೋಲಾಪುರದಿಂದ 500 ಲಾರಿ ಈರುಳ್ಳಿ ಬರಬೇಕಿತ್ತು. ಆದರೆ ಬೆಳೆ ಇಲ್ಲದಿರುವುದರಿಂದ ಕೇವಲ 230 ಲಾರಿ ಬಂದಿದೆ. ಹೀಗಾಗಿ ಈರುಳ್ಳಿಗೆ ಬೇಡಿಕೆ ಹೆಚ್ಚಾಗಿ ಬೆಲೆ ಗಗನಕ್ಕೇರುತ್ತಿದೆ.

ನಿಮ್ಮ ಮನೆಯಲ್ಲಿ 6-18 ವರ್ಷದ ಮಕ್ಕಳಿದ್ದಾರೆಯೇ?: ಸರ್ಕಾರದ ಮಹತ್ವದ ಸೂಚನೆ: ಗಮನಿಸಿ
‘ಲೋಕಲ್ ಈರುಳ್ಳಿ ದರ ಕ್ವಿಂಟಲ್‌ಗೆ 6 ಸಾವಿರ ಹಾಗೂ ಬಿಜಾಪುರ ಈರುಳ್ಳಿ ಕ್ವಿಂಟಲ್‌ಗೆ 9 ಸಾವಿರ ತಲುಪಿದೆ. ಇದು ಇನ್ನೂ ಹೆಚ್ಚಾಗುವ ಸಾಧ್ಯತೆಯಿದ್ದು, ರೀಟೆಲ್ ಬೆಲೆಯೂ ದಿಡೀ‌ರ್ ಏರಿಕೆಯಾಗಿದೆ” ಎನ್ನುತ್ತಾರೆ ವರ್ತಕ ರಮೇಶ್.
“ಎರಡ್ಮೂರು ತಿಂಗಳಿಂದ ಕೆಜಿಗೆ 30 ರಿಂದ 35 ರ ವರೆಗೆ ಮಾರಾಟವಾಗುತ್ತಿದ್ದ ಈರುಳ್ಳಿ, ಈಗ ದಿಢೀರನೇ 100ರ ಸಮೀಪ ಬಂದಿದೆ. ಗಾತ್ರ ಹಾಗೂ ಹವಾಗುಣ ಬೆಳೆಯ ಅನುಗುಣವಾಗಿ ಈರುಳ್ಳಿ ಬೆಲೆ ಇದ್ದು ದೊಡ್ಡ ಗಾತ್ರದು 70 ರಿಂದ 100, ಮಧ್ಯಮ ಗಾತ್ರ 50, ಚಿಕ್ಕ ಗಾತ್ರದು 40 ದರವಿದೆ. ಲೋಕಲ್ ಈರುಳ್ಳಿ 40 ರಿಂದ 65 ರೂ. ಹಾಗೂ ಬಿಜಾಪುರ ಈರುಳ್ಳಿ 80 ರಿಂದ 100 ರೂ.ಗೆ ರೀಟೆಲ್ ಬೆಲೆಯಲ್ಲಿ ಮಾರಾಟವಾಗುತ್ತಿದೆ. ಲೋಕಲ್ ಈರುಳ್ಳಿ ಐದರಿಂದ ಹತ್ತು ದಿನ ಇಟ್ಟುಕೊಳ್ಳಬಹುದಾಗಿದ್ದು, ಬಿಜಾಪುರ ಈರುಳ್ಳಿ ತಿಂಗಳುಗಟ್ಟಲೆ ಇಟ್ಟರೂ ಕೆಡುವುದಿಲ್ಲ. ಹಾಗಾಗಿ ಈ ಈರುಳ್ಳಿಗೆ ಬೆಲೆ ಜಾಸ್ತಿ ಎನ್ನುತ್ತಾರೆ ಹುಳಿಯಾರು ಮಂಡಿ ವ್ಯಾಪಾರಿ ಬಸವರಾಜು.
ರೈತರಿಗೆ ಖುಷಿ: ಬರಗಾಲದಲ್ಲೂ ಈರುಳ್ಳಿ ಬಿತ್ತನೆ ಮಾಡಿ ರಿಸ್ಕ್ ತೆಗೆದುಕೊಂಡಿದ್ದ ರೈತರಿಗೆ ಈಗ ಬೆಲೆ ಏರಿಕೆಯಾಗುತ್ತಿರುವುದು ಸಂತಸ ತಂದಿದೆ. ಆದರೆ ಗ್ರಾಹಕರು, ಹೋಟೆಲ್ ಉದ್ಯಮಿಗಳು ಆತಂಕಕ್ಕೀಡಾಗಿದ್ದಾರೆ.

ತುಮಕೂರು: ಶೇ.85ರಷ್ಟು ಬೆಳೆ ನಷ್ಟ, ರೈತರಿಗೆ ಎಷ್ಟು ಕೋಟಿ ಲಾಸ್ ಗೊತ್ತೇ?

You May Also Like

More From Author

+ There are no comments

Add yours