ಅವ್ಯವಸ್ಥೆ: ಸರ್ಕಾರಿ ನೌಕರರ ಕ್ರೀಡಾಕೂಟ ಮುಂದೂಡಿಕೆ! ಆಯೋಜಕರು ಹೇಳಿದ್ದೇನು? ವಿಡಿಯೋ

1 min read

ಸರ್ಕಾರಿ ನೌಕರರ ಕ್ರೀಡಾಕೂಟ ಮುಂದೂಡಿಕೆ!! ಸಂಘದ ಅಧ್ಯಕ್ಷ ಹೇಳಿದ್ದೇನು?

Tumkurnews
ತುಮಕೂರು: ನಗರದ ಮಹಾತ್ಮ ಗಾಂಧೀಜಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಅವ್ಯವಸ್ಥೆ ವಿರುದ್ಧ ಕ್ರೀಡಾಪಟುಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಪುರುಷ ಹಾಗೂ ಮಹಿಳೆಯರ ವಿಭಾಗದಲ್ಲಿ ವಿಜೇತರಾಗಿ ರಾಜ್ಯ ಮಟ್ಟಕ್ಕೆ ಅರ್ಹತೆ ಪಡೆದಿರುವ ಸುಮಾರು 10 ಸಾವಿರ ಸ್ಪರ್ಧಿಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ.

ನಾಳೆ ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ: ಇಲ್ಲಿದೆ ಆದೇಶ ಪ್ರತಿ
ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಅ.27 ರಿಂದ 29 ರವರೆಗೆ ತುಮಕೂರಿನ ಮಹಾತ್ಮಾಗಾಂಧಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. 3 ದಿನಗಳ ಈ ಕೂಟಕ್ಕೆ ರಾಜ್ಯ ಸರ್ಕಾರವು 2 ಕೋಟಿ ರೂ., ಅನುದಾನ ಕೂಡ ನೀಡಿದೆ. ಜೊತೆಗೆ ಸ್ಪರ್ಧಿಗಳಿಂದಲೂ ತಲಾ 400 ರೂ.ಗಳನ್ನು ಸಂಗ್ರಹಿಸಲಾಗಿದೆ. ಹೀಗಿದ್ದರೂ ಕ್ರೀಡಾಕೂಟದಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದೆ ಎಂದು ಸ್ಪರ್ಧಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರಿ ನೌಕರರ ಸಂಘದ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಪತ್ರಕರ್ತರ ಮೇಲೆ ಹಲ್ಲೆ: ಪ್ರತಿಭಟನೆ
ಷಡಕ್ಷರಿಗೆ ತರಾಟೆ: ಸ್ಪರ್ಧಿಗಳಿಗೆ ಆಯೋಜಕರು ನೀಡಿರುವ ಟಿ ಶರ್ಟ್’ಗಳ ಗುಣಮಟ್ಟ ಸರಿ ಇಲ್ಲ. ಸರಿಯಾದ ಅಳತೆಗಳಿಲ್ಲದ ಟಿ ಶರ್ಟ್’ಗಳನ್ನು ನೀಡಲಾಗಿದೆ. ಬಹುತೇಕ ಸ್ಪರ್ಧಿಗಳಿಗೆ ಟಿ ಶರ್ಟ್ ಸಿಕ್ಕಿಲ್ಲ, ಅವರಿಗೆ ಹೊಂದುವ ಅಳತೆಯ ಟಿ ಶರ್ಟ್ ತಂದಿಲ್ಲ ಎಂದು ಸ್ಪರ್ಧಿಸಲು ಅಸಮಾಧಾನ ವ್ಯಕ್ತಪಡಿಸಿದರು.
ಈ ವೇಳೆ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ಹಾಗೂ ಮಹಿಳಾ ಸ್ಪರ್ಧಿಯೊಬ್ಬರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಕ್ರೀಡಾಕೂಟದ ಆಯೋಜಕರ ವಿರುದ್ಧ ಸ್ಪರ್ಧಿಗಳು ಅಸಮಾಧಾನ ವ್ಯಕ್ತಪಡಿಸಿದರು.

ತುಮಕೂರು: ಅಕ್ಟೋಬರ್ 28 ಮತ್ತು 29 ರಂದು ನಿಷೇಧಾಜ್ಞೆ; ಜಿಲ್ಲಾಧಿಕಾರಿ ಆದೇಶ
ಕ್ರೀಡಾಕೂಟ ಮುಂದೂಡಿಕೆ?: ಕ್ರೀಡಾಕೂಟದ ಅವ್ಯವಸ್ಥೆ ಬಗ್ಗೆ ವರದಿ ಮಾಡುತ್ತಿದ್ದ ಪತ್ರಕರ್ತರ ಮೇಲೆ ಷಡಕ್ಷರಿ‌ ಹಲ್ಲೆ ಮಾಡಿದ ಘಟನೆಯೂ ನಡೆಯಿತು. ಈ ಬಗ್ಗೆ ಪತ್ರಕರ್ತರು ದಿಢೀರ್ ಪ್ರತಿಭಟನೆ ನಡೆಸಿದರು. ಈ ವೇಳೆ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನರಸಿಂಹ ರಾಜು, ಕ್ರೀಡಾಕೂಟವನ್ನು ಮುಂದೂಡುವುದಾಗಿ ಹೇಳಿದರು.‌ ಸದ್ಯ ಮೂರು ದಿನಗಳ ಕಾಲ ಕ್ರೀಡಾಕೂಟ ನಡೆಯಬೇಕಿದ್ದು, ಅವ್ಯವಸ್ಥೆ ಕಾರಣದಿಂದಾಗಿ ಹಾಗೂ ನರಸಿಂಹರಾಜು ಹೇಳಿದಂತೆ ಮುಂದೂಡಲ್ಪಡುತ್ತದೆಯೇ ಎಂದು ಸ್ಪರ್ಧಿಗಳು ಗೊಂದಲಕ್ಕೊಳಗಾಗಿದ್ದಾರೆ.

(ಚಿತ್ರ: ಪತ್ರಕರ್ತರು ಪ್ರತಿಭಟನೆ ನಡೆಸುತ್ತಿರುವ ದೃಶ್ಯ)

(ಕ್ರೀಡಾಕೂಟ ಮುಂದೂಡಿಕೆ ಹೇಳಿಕೆ ವಿಡಿಯೋ)

You May Also Like

More From Author

+ There are no comments

Add yours