ದಸರಾ ಜಂಬೂ ಸವಾರಿಗೆ ಬಂದಿದ್ದ ಆನೆಗೆ ಹೆರಿಗೆ!: ಜಂಬೂ ಸವಾರಿ ಕ್ಯಾನ್ಸಲ್: ಅಧಿಕಾರಿಗಳ ಬೇಜವಾಬ್ದಾರಿಗೆ ಜನಾಕ್ರೋಶ

1 min read

 

 

 

 

 

ದಸರಾ ಜಂಬೂ ಸವಾರಿಗೆ ಬಂದಿದ್ದ ಆನೆಗೆ ಹೆರಿಗೆ: ಜಂಬೂ ಸವಾರಿ ಕ್ಯಾನ್ಸಲ್! ಅಧಿಕಾರಿಗಳ ಬೇಜವಾಬ್ದಾರಿಗೆ ಜನರ ಆಕ್ರೋಶ

Tumkurnews
ಶಿವಮೊಗ್ಗ: ದಸರಾ ಜಂಬೂ ಸವಾರಿಗೆ ಕರೆತಂದಿದ್ದ ಎರಡು ಹೆಣ್ಣು ಆನೆಗಳ ಪೈಕಿ ಒಂದು ಆನೆಯು ಮರಿ ಹಾಕಿರುವ ಹಿನ್ನೆಲೆಯಲ್ಲಿ ಅಂಬಾರಿಯೊಂದಿಗೆ ದಸರಾ ಜಂಬೂ ಸವಾರಿಯನ್ನು ರದ್ದುಗೊಳಿಸಲಾಗಿದೆ.
ಬದಲಾಗಿ ಅಲಂಕೃತ ವಾಹನದ ಮೇಲೆ ಚಾಮುಂಡೇಶ್ವರಿಯ ವಿಗ್ರಹವನ್ನು ಇರಿಸಿ ವಾಹನದ ಮುಂಭಾಗದ ಎರಡು ಆನೆಗಳೊಂದಿಗೆ ಮೆರವಣಿಗೆ ನಡೆಲಾಗುತ್ತದೆ‌. ಈ ಕುರಿತು ಶಾಸಕ ಚೆನ್ನಬಸಪ್ಪ ನೇತೃತ್ವದಲ್ಲಿ ಮಂಗಳವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ.

(ಚಿತ್ರ: ಸಕ್ರೆಬೈಲು ಆನೆ ಬಿಡಾರದ ದೃಶ್ಯ)
ಆನೆಗಳು ವಾಪಾಸು: ಸಕ್ರೆಬೈಲಿನಿಂದ ಸಾಗರ, ನೇತ್ರಾವತಿ ಮತ್ತು ಹೇಮಾವತಿಯ ಮೇಲೆ ಈ ಬಾರಿ ಅಂಬಾರಿ ಹೊರಿಸುವುದಾಗಿ ತೀರ್ಮಾನಿಸಲಾಗಿತ್ತು. ಆದರೆ ನಿನ್ನೆ ರಾತ್ರಿ ನೇತ್ರಾವತಿ ಆನೆ ಹೆಣ್ಣು ಮರಿಗೆ ಜನ್ಮ ನೀಡಿದ ಹಿನ್ನೆಲೆಯಲ್ಲಿ ನೇತ್ರಾವತಿ ಮತ್ತು ಮರಿಯನ್ನು ಸಕ್ರೆಬೈಲಿಗೆ ಕಳುಹಿಸಲಾಗಿದೆ. ಈ ಮೊದಲು ನಿಗದಿಯಂತೆ ಜಂಬೂ ಸವಾರಿಯಲ್ಲಿ ಹೇಮಾವತಿ ಮತ್ತು ನೇತ್ರಾವತಿಯ ನಡುವೆ ಸಾಗರ ಆನೆಯು ಅಂಬಾರಿಯನ್ನು ಹೊರಬೇಕಿತ್ತು. ಆದರೆ ಒಂದು ಆನೆ ವಾಪಾಸ್ ಸಕ್ರೆಬೈಲಿಗೆ ಹೋಗಿದ್ದರಿಂದ ಕೊನೆಯ ಕ್ಷಣದಲ್ಲಿ ಜಂಬೂ ಸವಾರಿಯ ಸ್ವರೂಪವನ್ನು ಬದಲಾಯಿಸಲಾಗಿದೆ. ಇಂದು ಮಧ್ಯಾಹ್ನ 2.30ರ ಸಮಯದಲ್ಲಿ ಜಂಬೂ ಸವಾರಿಯ ಮೆರವಣಿಗೆ ವಾಸವಿ ಶಾಲೆಯಿಂದ ಹೊರಡಲಿದೆ. ಅಲಂಕೃತ ವಾಹನದ ಮೇಲೆ ಜಂಬೂ ಸವಾರಿ ನಡೆಯಲಿದೆ.

(ಚಿತ್ರ: ಮರಿಯೊಂದಿಗೆ ತಾಯಿ ನೇತ್ರಾವತಿ)
ಅಧಿಕಾರಿಗಳ ಬೇಜವಾಬ್ದಾರಿ?: ತುಂಬು ಗರ್ಭಿಣಿ ಆನೆಯನ್ನು ದಸರಾ ಜಂಬು ಸವಾರಿಗೆ ಕರೆತಂದ ಬಗ್ಗೆ ಅಧಿಕಾರಿಗಳ ಬೇಜವಾಬ್ದಾರಿ ಬಗ್ಗೆ ಪ್ರಾಣಿ ಪ್ರಿಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವೈದ್ಯರು ನೀಡಿರುವ ಮಾಹಿತಿ ಪ್ರಕಾರ ಆನೆ ನೇತ್ರಾವತಿ 18 ತಿಂಗಳ ಗರ್ಭಿಣಿಯಾಗಿತ್ತು ಎಂದಿದ್ದಾರೆ. ಮುಂದುವರಿದು ನೇತ್ರಾವತಿ ಗರ್ಭ ಕಟ್ಟಿದ್ದು ಯಾವಾಗ? ಮೇಟಿಂಗ್ ಯಾವಾಗ ಆಯ್ತು ಎಂಬ ಮಾಹಿತಿ ಇರಲಿಲ್ಲ ಎಂದಿದ್ದಾರೆ. ಇದು ಸಕ್ರೆಬೈಲು ಆನೆ ಬಿಡಾರದಲ್ಲಿ ಆನೆಗಳನ್ನು ಎಷ್ಟು ಜವಾಬ್ದಾರಿಯುತವಾಗಿ ‌ನೋಡಿಕೊಳ್ಳುತ್ತಿದ್ದಾರೆ ಎನ್ನುವುದನ್ನು ಸೂಚಿಸುತ್ತದೆ. ಜೊತೆಗೆ ಕಾವಾಡಿಗಳು ನೀಡಿದ ಮಾಹಿತಿ ಆಧರಿಸಿ ಗರ್ಭಿಣಿ ಆನೆಯನ್ನು ದಸರಾ ಜಂಬು ಸವಾರಿಗೆ ಬಳಸಿಕೊಳ್ಳುವ ಮೂಲಕ ಅಧಿಕಾರಿಗಳು ಅಮಾನವೀಯತೆ ಹಾಗೂ ಬೇಜವಾಬ್ದಾರಿ ತೋರಿದ್ದಾರೆ ಎಂಬ ಅಸಮಾಧಾನ ವ್ಯಕ್ತವಾಗಿದೆ.

ಗಾಂಜಾ ಇದೆ ಎಂದು ಭಿಕ್ಷುಕನ ಬ್ಯಾಗ್ ಚೆಕ್ ಮಾಡಿದ ಪೊಲೀಸರಿಗೆ ಕಾದಿತ್ತು‌ ಶಾಕ್! ಬೆಚ್ಚಿ ಬಿದ್ದ ಜನ: ವಿಡಿಯೋ
ಅವಧಿ ಪೂರ್ವ ಪ್ರಸವ: ಆನೆಗಳಿಗೆ ಗರ್ಭಧರಿಸಿ 24 ತಿಂಗಳಿಗೆ ಹೆರಿಗೆ ಆಗುವುದು ಎಂದು ಹೇಳಲಾಗುತ್ತದೆ. ಆದರೂ ಹೆರಿಗೆಯಾಗಲು ಕನಿಷ್ಠ 18 ತಿಂಗಳು ಹಿಡಿಯಲಿದೆ ಎಂಬುದು ಪ್ರಾಣಿ ವೈದ್ಯಲೋಕದ ಮಾತಾಗಿದೆ. ನೇತ್ರಾವತಿಗೆ 18 ತಿಂಗಳು ತುಂಬಿದ ಹಿನ್ನೆಲೆಯಲ್ಲಿ ಹೆರಿಗೆಯಾಗಿದೆ. ತಾಯಿ ಮತ್ತು ಮರಿ ಎರಡೂ ಆರೋಗ್ಯದಿಂದ ಇವೆ.
ದಸರಾ ಮೆರವಣಿಗೆಯಲ್ಲಿ ಭಾಗಿಯಾಗಲು ಸಕ್ರೆಬೈಲಿನಿಂದ ಮಹಾನಗರ ಪಾಲಿಕೆಯ ವತಿಯಿಂದ ಮೂರು ಆನೆಗಳನ್ನು ಪ್ರತಿ ವರ್ಷದಂತೆ ಈ ಬಾರಿಯೂ ಕರೆತರಲಾಗಿತ್ತು. ಈ ಮೆರವಣಿಗೆಯಲ್ಲಿ ಭಾಗಿಯಾಗಲು ಸಾಗರ, ನೇತ್ರಾವತಿ ಹಾಗೂ ಹೇಮಾವತಿ ಆನೆಯನ್ನ ಕರೆತರಲಾಗಿತ್ತು.
ಸೋಮವಾರ ಸಂಜೆ ಮೆರವಣಿಗೆಯ ತಾಲೀಮು ನಡೆಸಲಾಗಿತ್ತು. ವಾಸವಿ ಶಾಲೆಯಲ್ಲಿ ಬಿಡಾರ ಬಿಟ್ಟಿರುವ ಮೂರು ಆನೆಗಳನ್ನು ತಾಲೀಮು ಮುಗಿಸಿ ವಾಪಾಸ್ ತರಲಾಗಿದೆ. ರಾತ್ರಿ 10 ಗಂಟೆಗೆ ನೇತ್ರಾವತಿ ಹೆಸರಿನ ಆನೆಗೆ ಹೆರಿಗೆಯಾಗಿದ್ದು, ಹೆಣ್ಣು ಮರಿಗೆ ಜನ್ಮ ನೀಡಿದೆ.

ದೇವರಾಯನದುರ್ಗದಲ್ಲಿ ಅಪರೂಪದ ಬೇಟೆಯಾಡಿದ ಚಿರತೆ: ಕ್ಯಾಮೆರಾದಲ್ಲಿ ಸೆರೆ


21 ಆನೆಗಳಾಯ್ತು: ಈಗ ಜನಿಸಿರುವ ಮರಿಯಿಂದಾಗಿ ಸಕ್ರಬೈಲಿನಲ್ಲಿ ಆನೆಗಳ ಸಂಖ್ಯೆ 21 ಕ್ಕೆ ಏರಿದೆ. ಈ ಹಿಂದೆ ಆರೆಂಟು ತಿಂಗಳ ಹಿಂದೆ ಆನೆಗಳ ಸಂಖ್ಯೆ 18ಕ್ಕೆ ಕುಸಿದಿತ್ತು. ಎರಡು ಆನೆಗಳನ್ನು ಬೇರೆ ರಾಜ್ಯಕ್ಕೆ ಬಿಟ್ಟು ಬರಲಾಗಿತ್ತು. ಒಂದು ಆನೆ ಸಾವನ್ನಪ್ಪಿತ್ತು. ಈಗ ಆನೆಗಳ ಸಂಖ್ಯೆ 21 ಕ್ಕೆ ಏರಿದೆ.
ಈ 21 ಆನೆಗಳ ಪೈಕಿ ಐದು ಹೆಣ್ಣು 16 ಗಂಡು ಆನೆಗಳು ಇವೆ. ಪುನೀತ್ ರಾಜ್ ಕುಮಾರ್ ಎಂಬ ಆನೆಗೆ ಇದೇ ನೇತ್ರಾವತಿ ಜನ್ಮ ನೀಡಿತ್ತು.‌ ಪುನೀತ್ ರಾಜ್ ಕುಮಾರ್ ನಾಲ್ಕನೇ ಮರಿಯಾದರೆ ಇದು ಐದನೇ ಮರಿಯಾಗಿದೆ.

ಕೇವಲ 8 ವರ್ಷಕ್ಕೆ ಇನ್ಸ್‌ಪೆಕ್ಟರ್ ಹುದ್ದೆಗೇರಿದ ಬಾಲಕ!: ಶಿವಮೊಗ್ಗದ ಹೃದಯವಂತ ಪೊಲೀಸ್

You May Also Like

More From Author

+ There are no comments

Add yours