ಬರ: ತುಮಕೂರು ಜಿಲ್ಲೆಯ 415 ಗ್ರಾಮಗಳಲ್ಲಿ ಜಲಕ್ಷಾಮ‌

1 min read

 

 

 

 

 

ಬರ: ತುಮಕೂರು ಜಿಲ್ಲೆಯ 415 ಗ್ರಾಮಗಳಲ್ಲಿ ಜಲಕ್ಷಾಮ‌

Tumkurnews
ತುಮಕೂರು: ಮಳೆ ಕೊರತೆಯಿಂದಾಗಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ಭೀತಿ ಎದುರಾಗಿದೆ. ಮಳೆ ಕೊರತೆ ಹೀಗೆ ಮುಂದುವರೆದಲ್ಲಿ ಜಿಲ್ಲೆಯ ಸುಮಾರು 415 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದುದೆಂದು ಅಂದಾಜಿಸಲಾಗಿದೆ.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ನೀರಿನ ಸಮಸ್ಯೆ ಕುರಿತು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದರು.

ತುಮಕೂರು ಜಿಲ್ಲೆ ರಾಜ್ಯದಲ್ಲಿಯೇ ನಂಬರ್ ಒನ್
ಜಿಲ್ಲೆಯಲ್ಲಿ ಉದ್ಭವಿಸಬಹುದಾದ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಈಗಾಗಲೇ ಎಲ್ಲಾ ತಾಲ್ಲೂಕುಗಳ 186 ಕಾಮಗಾರಿಗಳಿಗೆ 360.75ಲಕ್ಷ ರೂ.ಗಳ ಕಾಂಟೆಜೆನ್ಸಿ ಕ್ರಿಯಾ ಯೋಜನೆ ಅನುಮೋದನೆಗಾಗಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಮಳೆ ಕೊರತೆ ಹೀಗೆ ಮುಂದುವರೆದಲ್ಲಿ ಜಿಲ್ಲೆಯ ಸುಮಾರು 415 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದುದೆಂದು ಅಂದಾಜಿಸಲಾಗಿದೆ. ಕುಡಿಯುವ ನೀರು ಸಮಸ್ಯೆ ಬಾರದಂತೆ ಜಲಜೀವನ ಮಿಷನ್ ಯೋಜನೆಯಡಿ 881 ಕೊಳವೆ ಬಾವಿಗಳನ್ನು ಕೊರೆಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರಿಗೆ ಮಾಹಿತಿ ನೀಡಿದರು.

ಗೃಹಲಕ್ಷ್ಮಿ ಎರಡನೇ ಕಂತಿನ ಹಣ ಬಿಡುಗಡೆ ಯಾವಾಗ? ಇಲ್ಲಿದೆ ಮಾಹಿತಿ
ಜಲಜೀವನ್ ಮಿಷನ್ ಯೋಜನೆಯಡಿ 8 ಹಂತಗಳಲ್ಲಿ ಕೈಗೊಂಡಿರುವ ಕಾಮಗಾರಿಗಳ ಪ್ರಗತಿ ಪರಿಶೀಲಿಸಿ ಮಾತನಾಡಿದ ಗೃಹ ಸಚಿವ ಡಾ.ಜಿ ಪರಮೇಶ್ವರ್, ಈ ಯೋಜನೆಯಡಿ ಕೈಗೊಂಡ ಕಾಮಗಾರಿಗಳನ್ನು ಖುದ್ದು ಭೇಟಿ ಪರಿಶೀಲಿಸಿದ್ದೇನೆ. ಹಲವಾರು ಗ್ರಾಮಗಳಲ್ಲಿ ನಳ ಸಂಪರ್ಕಕ್ಕಾಗಿ ಜಿ.ಐ. ಪೈಪ್ ಬದಲಿಗೆ ಪ್ಲಾಸ್ಟಿಕ್ ಪೈಪ್ ಅಳವಡಿಸಲಾಗಿದೆ. ಅಳವಡಿಸಿದ ನಲ್ಲಿ ಬಳಿ ನೀರು ನಿಲ್ಲದಂತೆ ಚರಂಡಿ ಕಡೆ ಹರಿಯುವಂತೆ ಮಾಡಬೇಕು. ಜನರಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಇಂಜಿನಿಯರ್‌ಗಳು ಗುಣಮಟ್ಟದ ಕಾಮಗಾರಿ ನಿರ್ಮಿಸಬೇಕು. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಈಗಾಗಲೇ ಜೆಜೆಎಂ ಕಾಮಗಾರಿ ಶೇ.100ರಷ್ಟು ಪ್ರಗತಿ ಕಂಡಿದ್ದು, ತುಮಕೂರಿನಲ್ಲಿ ಯೋಜನೆಗೆ ವೇಗ ನೀಡಿ ಶೇ.100ರಷ್ಟು ಪೂರ್ಣಗೊಳಿಸಬೇಕೆಂದು ಸೂಚನೆ ನೀಡಿದರು.

ಗಾಂಜಾ ಇದೆ ಎಂದು ಭಿಕ್ಷುಕನ ಬ್ಯಾಗ್ ಚೆಕ್ ಮಾಡಿದ ಪೊಲೀಸರಿಗೆ ಕಾದಿತ್ತು‌ ಶಾಕ್! ಬೆಚ್ಚಿ ಬಿದ್ದ ಜನ: ವಿಡಿಯೋ

You May Also Like

More From Author

+ There are no comments

Add yours