ಗೃಹಲಕ್ಷ್ಮಿ ಎರಡನೇ ಕಂತಿನ ಹಣ ಬಿಡುಗಡೆ ಯಾವಾಗ? ಇಲ್ಲಿದೆ ಮಾಹಿತಿ: ಗುಡ್ ನ್ಯೂಸ್ ನೀಡಿದ ಸಚಿವೆ
Tumkurnews
ಬೆಂಗಳೂರು: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಐದು ಗ್ಯಾರೆಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಮೊದಲ ಕಂತಿನ ಹಣವನ್ನು ಈಗಾಗಲೇ ಮಹಿಳೆಯರು ಪಡೆದುಕೊಡಿದ್ದಾರೆ. ಉಳಿದಂತೆ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಸಹಾಯಧನದ ಪಾವತಿಗಾಗಿ ಒಟ್ಟು 4,449 ಕೋಟಿ ರೂ.ಹಣ ಬಿಡುಗಡೆ ಬಗ್ಗೆ ಸ್ವತಃ ಮಹಿಳಾ ಮತ್ತು ಮಕ್ಕಳ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದಾರೆ. ಈ ಕುರಿತು ಪೋಸ್ಟ್ ಹಂಚಿಕೊಂಡಿದ್ದು, ಮಹಿಳೆಯರಿಗೆ ಸಿಹಿ ಸದ್ದಿ ನೀಡಿದ್ದಾರೆ.
1.08 ಕೋಟಿ ಮಹಿಳೆಯರಿಗೆ ಹಣ ಜಮೆ: ಈಗಾಗಲೇ ರಾಜ್ಯದ 1.8 ಕೋಟಿ ಅರ್ಹ ಫಲಾನುಭವಿಗಳಿಗೆ 2169 ಕೋಟಿ ರೂ. ಅನುದಾನವನ್ನು ಸರ್ಕಾರ ಬಿಡುಗಡೆಗೊಳಿಸಿದೆ.
ಗೃಹಲಕ್ಷ್ಮಿ; ಜಿಲ್ಲೆಯ 1.35ಲಕ್ಷ ಫಲಾನುಭವಿಗಳ ಖಾತೆಗೆ ಹಣ ಜಮೆ: ಉಳಿದವರಿಗೆ ಯಾವಾಗ? ಇಲ್ಲಿದೆ ಮಾಹಿತಿ
ಸೆಪ್ಟಂಬರ್ ತಿಂಗಳಲ್ಲಿ 1.14 ಲಕ್ಷ ಫಲಾನುಭವಿಗಳಿಗೆ 2280 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಲಾಗಿದೆ.
ಈ ನಡುವೆ ಎರಡು ಮತ್ತು ಮೂರನೇ ಕಂತಿನ ಹಣಕ್ಕಾಗಿ ಅಂದರೆ ಆಗಸ್ಟ್ ಮತ್ತು ಸೆಪ್ಟೆಂಬರ್ ಈ ಎರಡು ತಿಂಗಳ ಹಣ 4 ಸಾವಿರ ರೂ. ಒಟ್ಟಿಗೆ ಜಮೆ ಆಗಲಿದೆ. ಈ ಕುರಿತು ಈಗಾಗಲೇ ಸರ್ಕಾರದ ಆರ್ಥಿಕ ಇಲಾಖೆಯು ಅಗತ್ಯ ಸಿದ್ಧತೆಗಳನ್ನು ಇಲಾಕೆ ಮಾಡಿಕೊಂಡಿದೆ.
ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಮಾಸಿಕ 2 ಸಾವಿರ ರೂ. ಸಹಾಯಧನಕ್ಕಾಗಿ ಈವರೆಗೆ 1.16 ಕೋಟಿ ಮಹಿಳೆಯರು ಅರ್ಜಿ ಸಲ್ಲಿಕೆ ಮಾಡಿದ್ದು, 1.08 ಕೋಟಿ ಮಹಿಳೆಯರಿಗೆ ಹಣ ಜಮೆಯಾಗಿದೆ. ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಸಹಾಯ ಧನದ ಪಾವತಿಗಾಗಿ ಒಟ್ಟು 4,449 ಕೋಟಿ ರೂ.ಗಳ ಬಿಡುಗಡೆಗೆ ಆರ್ಥಿಕ ಇಲಾಖೆಯ ಸಮ್ಮತಿ ದೊರೆತಿದೆ. ಹೀಗಾಗಿ ಇನ್ನೊಂದು ವಾರದೊಳಗೆ ಅಥವಾ ಹಬ್ಬದ ವೇಳೆಗೆ ಫಲಾನುಭವಿಗಳ ಖಾತೆಗೆ ಹಣ ಸಂದಾಯವಾಗಲಿದೆ ಎಂದು ಆಹಾರ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಗಾಂಜಾ ಇದೆ ಎಂದು ಭಿಕ್ಷುಕನ ಬ್ಯಾಗ್ ಚೆಕ್ ಮಾಡಿದ ಪೊಲೀಸರಿಗೆ ಕಾದಿತ್ತು ಶಾಕ್! ಬೆಚ್ಚಿ ಬಿದ್ದ ಜನ: ವಿಡಿಯೋ
+ There are no comments
Add yours