ರಾಜ್ಯದ 41 ತಾಲ್ಲೂಕುಗಳು ಮರಳುಗಾಡಾಗುವ ಆತಂಕವಿದೆ; ಮಾಧುಸ್ವಾಮಿ

0 min read

 

 

 

 

 

ತುಮಕೂರು ನ್ಯೂಸ್.ಇನ್; ಗುಬ್ಬಿ (ಜೂ.13)
ಸಮೀಕ್ಷೆ ಪ್ರಕಾರ ಅಂತರ್ಜಲ ಕುಸಿತದಿಂದ ರಾಜ್ಯದ 41 ತಾಲ್ಲೂಕುಗಳು ಮರಳುಗಾಡಾಗುವ ಆತಂಕವಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ ಮಾಧುಸ್ವಾಮಿ ಆತಂಕ ವ್ಯಕ್ತಪಡಿಸಿದರು.
ಗುಬ್ಬಿ ತಾಲ್ಲೂಕು ಮಾರಶೆಟ್ಟಿಹಳ್ಳಿ ಮೀಸಲು ಅರಣ್ಯ ಪ್ರದೇಶದಲ್ಲಿಂದು ವನಮಹೋತ್ಸವ ಹಾಗೂ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ತುಮಕೂರು ಜಿಲ್ಲೆಯ ಅಂತರ್ಜಲ ಮಟ್ಟ 1200 ಅಡಿ ಆಳಕ್ಕೆ ಕುಸಿದಿದೆ. ಅಂತರ್ಜಲ ಮಟ್ಟದ ಹೀಗೆ ಕುಸಿಯುತ್ತಿದ್ದರೆ ಜಿಲ್ಲೆಯು ಶಾಶ್ವತ ಮರಳುಗಾಡಾಗುವುದರಲ್ಲಿ ಸಂಶಯವಿಲ್ಲ. ಸಮೀಕ್ಷೆ ಪ್ರಕಾರ ಅಂತರ್ಜಲ ಕುಸಿತದಿಂದ ಜಿಲ್ಲೆಯ 6 ತಾಲ್ಲೂಕು ಸೇರಿ ರಾಜ್ಯದ 41 ತಾಲ್ಲೂಕುಗಳು ಮರಳುಗಾಡಾಗುವ ಆತಂಕವಿದೆ. ಈ ನಿಟ್ಟಿನಲ್ಲಿ ಅಂತರ್ಜಲ ಸಂರಕ್ಷಣೆಯಾಗಬೇಕು. ರಾಜ್ಯದ ಅಂತರ್ಜಲ ಸಂರಕ್ಷಣೆಗಾಗಿ ಕೇಂದ್ರ ಸರ್ಕಾರವು ಅಟಲ್ ಭೂಜಲ್ ಯೋಜನೆಯಡಿ 1230 ಕೋಟಿ ರೂ.ಗಳ ಅನುದಾನ ಒದಗಿಸಿದೆ ಎಂದು ತಿಳಿಸಿದರು.
(ಫೋಟೋ: ಸಚಿವ ಜೆ.ಸಿ ಮಾಧುಸ್ವಾಮಿ)

You May Also Like

More From Author

+ There are no comments

Add yours