web analytics
My page - topic 1, topic 2, topic 3
ಮಧುಗಿರಿ; ಹೊಸ ಜಿಲ್ಲೆ ಮಾಡುವುದರಿಂದ ರೈತರಿಗೆ ಪ್ರಯೋಜನವಾಗುವುದಿಲ್ಲ; ಸಚಿವ ಮಾಧುಸ್ವಾಮಿ

ಮಧುಗಿರಿ; ಹೊಸ ಜಿಲ್ಲೆ ಮಾಡುವುದರಿಂದ ರೈತರಿಗೆ ಪ್ರಯೋಜನವಾಗುವುದಿಲ್ಲ; ಸಚಿವ ಮಾಧುಸ್ವಾಮಿ

Listen to this article


TTS

Tumkurnews.in
ಮಧುಗಿರಿ; ಹೊಸ ಜಿಲ್ಲೆ ಮಾಡುವುದರಿಂದ ಹೊಸ ಜಿಲ್ಲಾಧಿಕಾರಿ ಬರುತ್ತಾರೆಯೇ ಹೊರತು ರೈತರ ಬೋರ್ ವೆಲ್ ತುಂಬುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ ಮಾಧುಸ್ವಾಮಿ ತಿಳಿಸಿದರು.
ತಾಲ್ಲೂಕಿನ ಮುದ್ದೇನಹಳ್ಳಿ ಗ್ರಾಮದಲ್ಲಿ ಮಂಗಳವಾರ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾರಂಭದಲ್ಲಿ ಭಾಷಣದ ವೇಳೆ ಮಧ್ಯ ಪ್ರವೇಶಿಸಿದ ಗ್ರಾಮಸ್ಥರೊಬ್ಬರು ಮಧುಗಿರಿಯನ್ನು ಜಿಲ್ಲೆ ಮಾಡುವಂತೆ ಮನವಿ ಮಾಡಿದರು, ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಜೆ.ಸಿ ಮಾಧುಸ್ವಾಮಿ, ಜಿಲ್ಲೆ ಮಾಡುವುದರಿಂದ ಯಾರಾದರೂ ಡೀಸಿ ಬರ್ತಾರೆ, ರೈತರ ಬೋರ್ ವೆಲ್ ಓಡುವುದಿಲ್ಲ, ಬೋರ್ ವೆಲ್ ಸುದ್ದಿ ಮಾತನಾಡುವಾಗ ನೀವು ಎದ್ದು ಜಿಲ್ಲೆ ಮಾಡಿ ಅಂತೀರಲ್ವಾ? ಅವರ ತೀಟೆ ತೀರಿಸಲು ನಾನು ಜಿಲ್ಲೆ ಮಾಡೋಣ ಅಂತ ಭಾಷಣ ಮಾಡೋಣ್ವಾ? ಯಾವ ಜಿಲ್ಲೆ ಆದರೇನು? ಅದರಿಂದ ರೈತರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ ಎಂದರು.
ಹೊಸ ಜಿಲ್ಲೆಯ ಬದಲಾಗಿ ಕೆರೆಗಳಿಗೆ ನೀರು ಬಿಟ್ಟರೆ 1200, 1500 ಅಡಿಗಳಲ್ಲಿರುವ ಬೋರ್ ಗಳಲ್ಲಿ 500, 600 ಅಡಿಗಳಲ್ಲಿ ನೀರು ಬಂದರೆ, ನಮ್ಮ ಹೆಣ್ಣು ಮಕ್ಕಳು 10, 12 ಜನ ಆಟೋ ರಿಕ್ಷಾದಲ್ಲಿ ಗಾರ್ಮೆಂಟ್ಸ್ ಗೆ ಹೋಗುವುದನ್ನು ತಪ್ಪಿಸಿದರೆ ನಾನು ಮಂತ್ರಿ ಆಗುವುದು ಸಾರ್ಥಕವಾಗುತ್ತದೆ ಎಂದು ತಿಳಿಸಿದರು.
ಆಡಳಿತವೇ ಶ್ರೇಷ್ಠ ಎನ್ನುವ ಕಾಲ ಹೋಯಿತು, ಅಭಿವೃದ್ಧಿ ಶ್ರೇಷ್ಠ ಕೂಡ, ನನಗಿರುವ ಸ್ವಾತಂತ್ರ್ಯ ಬೇರೆಯವರಿಗೂ ಇರಬೇಕು, ಅದಕ್ಕಾಗಿಯೇ ಗಾಂಧೀಜಿ ಸ್ವಾತಂತ್ರ್ಯ ಹೋರಾಟ ಮಾಡಿದ್ದು, ಸ್ವಲ್ಪಮಟ್ಟಿಗಾದರೂ ಅದರ ಸಮೀಪಕ್ಕೆ ನಾವು ಹೋಗೋಣ ಎಂದರು.
ಸಣ್ಣ ನೀರಾವರಿ ಇಲಾಖೆ, ಎತ್ತಿನ ಹೊಳೆ, ಭದ್ರಾ ಮೇಲ್ದಂಡೆ ಹಾಗೂ ಹೇಮಾವತಿಯವರು ಒಟ್ಟಾಗಿ ವರದಿ ತಯಾರಿಸಿ ಕೊಟ್ಟಲ್ಲಿ ಜನರ ನೀರಿನ ಬೇಡಿಕೆ ಈಡೇರಿಕೆಗೆ ಪರಿಣಾಮಕಾರಿಯಾಗಿ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲತಾ ರವಿಕುಮಾರ್, ಜಿಲ್ಲಾಧಿಕಾರಿ ಪಾಟೀಲ್ ವೈ.ಎಸ್, ಆರೋಗ್ಯ ಇಲಾಖೆಯ ನಿರ್ದೇಶಕ ಡಾ. ಓಂಪ್ರಕಾಶ್ ಪಾಟೀಲ್, ಎಸ್ಪಿ ಡಾ.ಕೆ ವಂಶಿಕೃಷ್ಣ, ಎಸಿ ಸೋಮಪ್ಪ ಕಡಕೋಳ, ಜಿಪಂ ಸಿಇಓ ಜಿ.ಎಂ ಗಂಗಾಧರ್ ಸ್ವಾಮಿ, ತಾಪಂ ಅಧ್ಯಕ್ಷೆ ಇಂದಿರಾ ದೇನನಾಯ್ಕ್, ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಚೌಡಪ್ಪ, ಸದಸ್ಯೆ ಮಂಜುಳಾ ಆದಿನಾರಯಣ ರೆಡ್ಡಿ, ಡಿ.ಎಚ್.ಓ ಡಾ.ನಾಗೇಂದ್ರಪ್ಪ, ತಹಸೀಲ್ದಾರ್ ಡಾ.ಜಿ ವಿಶ್ವನಾಥ್, ಟಿ.ಎಚ್.ಓ ರಮೇಶ್ ಬಾಬು, ಪಿಡಿಓ ನವೀನ್ ಕುಮಾರ್, ಗ್ರಾಪಂ ಸದ್ಯಸ್ಯರಾದ ಸುದ್ದೇಕುಂಟೆ ನರಸಪ್ಪ, ಸೈಯದ್ ಗೌಸ್ ಮುಖಂಡರಾದ ನರಸಿಂಹರೆಡ್ಡಿ, ಅಂಜು ಜಬೀಉಲ್ಲಾ, ಗುಂಡಗಲ್ಲು ಜೈರಾಮ್, ಟಿ ರಾಮಕೃಷ್ಣಪ್ಪ, ರಮೇಶ್, ದಯನಾಂದ ರೆಡ್ಡಿ, ಕಸಿನಾಯಕನಹಳ್ಳಿ ತಿಮ್ಮರೆಡ್ಡಿ, ಶಂಕರ್ ಹಾಜರಿದ್ದರು.

ತುಮಕೂರುನ್ಯೂಸ್.ಇನ್ ವಾಟ್ಸ್ ಆಪ್ ನಂಬರ್ :+91 9148215339 ಇಮೇಲ್: tumkurnews.in@gmail.com ವೆಬ್ ಸೈಟ್ : https://www.tumkurnews.in/

Leave a Reply

Your email address will not be published. Required fields are marked *

error: Content is protected !!