360
ತುಮಕೂರು; ತಾಲೂಕಿನ ಊರ್ಡಿಗೆರೆ ಹೋಬಳಿಯ ದೇವರಾಯನ ದುರ್ಗದ ಶ್ರೀ ಲಕ್ಷ್ಮಿನರಸಿಂಹಸ್ವಾಮಿ ಕ್ಷೇತ್ರದಲ್ಲಿ ಏಪ್ರಿಲ್ 29, ಮೇ 30, ಜೂನ್ 27 ಹಾಗೂ ಜುಲೈ 4ರಂದು ‘ಸಪ್ತಪದಿ” ಉಚಿತ ಸರಳ ಸಾಮೂಹಿಕ ವಿವಾಹ ಮಹೋತ್ಸವ ಹಮ್ಮಿಕೊಳ್ಳಲಾಗಿದ್ದು, ಆಸಕ್ತ ವಧು-ವರರು ಕೊನೆ ದಿನಾಂಕದೊಳಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದು ಶ್ರೀ ಲಕ್ಷ್ಮಿನರಸಿಂಹಸ್ವಾಮಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಎಸ್.ಟಿ ಸುನೀಲ್ ಕುಮಾರ್ ತಿಳಿಸಿದ್ದಾರೆ.
ಏಪ್ರಿಲ್ 29ರಂದು ಬೆಳಗ್ಗೆ 11.30ರಿಂದ ಮಧ್ಯಾಹ್ನ 12.30ರವರೆಗೆ ನಡೆಯಲಿರುವ ಮುಹೂರ್ತಕ್ಕೆ ಮಾರ್ಚ್ 30ರೊಳಗೆ ನೋಂದಾಯಿಸಿಕೊಳ್ಳಬೇಕಾಗಿದೆ. ನೋಂದಾವಣೆಗೊಂಡ ವಧು-ವರರ ವಿವರಗಳನ್ನು ಏಪ್ರಿಲ್ 4ರಂದು ದೇವಾಲಯದಲ್ಲಿ ಪ್ರಕಟಿಸಲಾಗುವುದು. ಪ್ರಕಟಿಸಲಾದ ಪಟ್ಟಿಗೆ ಏಪ್ರಿಲ್ 9ರೊಳಗೆ ಆಕ್ಷೇಪಣೆ ಸಲ್ಲಿಸಬಹುದಾಗಿದ್ದು, ಏಪ್ರಿಲ್ 14ರಂದು ಅಂತಿಮ ವಧು-ವರರ ಪಟ್ಟಿ ಪ್ರಕಟಿಸಲಾಗುತ್ತದೆ.
ಮೇ 30ರಂದು ಬೆಳಿಗ್ಗೆ 11ರಿಂದ ಮಧ್ಯಾಹ್ನ 12ರವರೆಗೆ ನಡೆಯಲಿರುವ ಮಹೂರ್ತಕ್ಕೆ ಏಪ್ರಿಲ್ 30ರೊಳಗೆ ನೋಂದಾಯಿಸಿಕೊಳ್ಳಬೇಕಾಗಿದೆ. ನೋಂದಾವಣೆಗೊಂಡ ವಧು-ವರರ ವಿವರಗಳನ್ನು ಮೇ 5ರಂದು ದೇವಾಲಯದಲ್ಲಿ ಪ್ರಕಟಿಸಲಾಗುವುದು. ಪ್ರಕಟಿಸಲಾದ ಪಟ್ಟಿಗೆ ಮೇ. 10ರೊಳಗೆ ಆಕ್ಷೇಪಣೆ ಸಲ್ಲಿಸಬಹುದಾಗಿದ್ದು, ಮೇ 15ರಂದು ಅಂತಿಮ ವಧು-ವರರ ಪಟ್ಟಿ ಪ್ರಕಟಿಸಲಾಗುತ್ತದೆ.
ಜೂನ್ 27ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 12ರವರೆಗೆ ನಡೆಯಲಿರುವ ಮಹೂರ್ತಕ್ಕೆ ಮೇ 28ರೊಳಗೆ ನೋಂದಾಯಿಸಿಕೊಳ್ಳಬೇಕಾಗಿದೆ. ನೋಂದಾವಣೆಗೊಂಡ ವಧು-ವರರ ವಿವರಗಳನ್ನು ಜೂನ್ 2ರಂದು ದೇವಾಲಯದಲ್ಲಿ ಪ್ರಕಟಿಸಲಾಗುವುದು. ಪ್ರಕಟಿಸಲಾದ ಪಟ್ಟಿಗೆ ಜೂನ್ 7ರೊಳಗೆ ಆಕ್ಷೇಪಣೆ ಸಲ್ಲಿಸಬಹುದಾಗಿದ್ದು, ಜೂನ್ 12 ರಂದು ಅಂತಿಮ ವಧು-ವರರ ಪಟ್ಟಿ ಪ್ರಕಟಿಸಲಾಗುವುದು.
ಜುಲೈ 4ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 12 ರವರೆಗೆ ನಡೆಯಲಿರುವ ಮಹೂರ್ತಕ್ಕೆ ಜೂನ್ 5ರೊಳಗೆ ನೋಂದಾಯಿಸಿಕೊಳ್ಳಬೇಕಾಗಿದೆ. ನೋಂದಾವಣೆಗೊಂಡ ವಧು-ವರರ ವಿವರಗಳನ್ನು ಜೂನ್ 9ರಂದು ದೇವಾಲಯದಲ್ಲಿ ಪ್ರಕಟಿಸಲಾಗುವುದು. ಪ್ರಕಟಿಸಲಾದ ಪಟ್ಟಿಗೆ ಜೂನ್ 14ರೊಳಗೆ ಆಕ್ಷೇಪಣೆ ಸಲ್ಲಿಸಬಹುದಾಗಿದ್ದು, ಜೂನ್ 19 ರಂದು ಅಂತಿಮ ವಧು-ವರರ ಪಟ್ಟಿ ಪ್ರಕಟಿಸಲಾಗುವುದು.
ಸಾಮೂಹಿಕ ವಿವಾಹವಾಗುವ ವರನಿಗೆ ಹೂವಿನ ಹಾರ, ಪಂಚೆ, ಶರ್ಟ್ ಮತ್ತು ಶಲ್ಯಕ್ಕಾಗಿ 5ಸಾವಿರ ರೂ. ಹಾಗೂ ವಧುವಿಗೆ ಹೂವಿನ ಹಾರ, ಧಾರೆ ಸೀರೆ, ಮತ್ತು ರವಿಕೆ ಕಣಕ್ಕಾಗಿ 10 ಸಾವಿರ ರೂ. ಪ್ರೋತ್ಸಾಹ ಧನ ನೀಡಲಾಗುವುದು. ಜೊತೆಗೆ ವಧುವಿಗೆ ಚಿನ್ನದ ತಾಳಿ, ಎರಡು ಚಿನ್ನದ ಗುಂಡುಗಳಿಗಾಗಿ (ಅಂದಾಜು 08 ಗ್ರಾಂ ತೂಕ ) ಪ್ರೋತ್ಸಾಹ ಧನ 40,000 ರೂ. ನೀಡಲಾಗುವುದು. ವಧು ಹಾಗೂ ವರನಿಗೆ ಸೇರಿ ಒಟ್ಟು 55 ಸಾವಿರ ರೂ. ಪ್ರೋತ್ಸಾಹ ಧನ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ 7348811613, 8277791139, 6362863782ನ್ನು ಸಂಪರ್ಕಿಸಬಹುದೆಂದು ಅವರು ತಿಳಿಸಿದ್ದಾರೆ.