35,647
Tumkurnews.in
ತುಮಕೂರು; ಮನೆ ಕಳವು ಮಾಡುತ್ತಿದ್ದ ಅಂತರ್ ಜಿಲ್ಲಾ ಕುಖ್ಯಾತ ಕಳ್ಳನನ್ನು ಕೋಳಾಲ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ತುಮಕೂರಿನ ಬೆಳಗುಂಬ ರಸ್ತೆ, ಜ್ಯೋತಿಪುರ ಗ್ರಾಮದ ರಘು ಜಿ.,(28) ಎಂಬಾತ ಬಂಧಿತ ಆರೋಪಿ.
ಫೆ.14ರಂದು ಮಧ್ಯಾಹ್ನ 2.30ರ ಸಮಯದಲ್ಲಿ ಕೋಳಾಲ ಪೊಲೀಸ್ ಠಾಣೆಯ ಹೆಡ್ ಕಾನ್ಸ್ ಟೇಬಲ್ ಮೋಹನ್ ಕುಮಾರ್ ಅವರು ಇರಕಸಂದ್ರ ಕಾಲೋನಿ ಸಿದ್ದಾಪುರ ಚಾಮುಂಡಿಗುಡ್ಡದ ಬಳಿ ಇರುವ ಎಸ್.ಎಲ್.ಎನ್ ಪಬ್ಲಿಕ್ ಸ್ಕೂಲ್ ಮುಂಭಾಗ ರಸ್ತೆ ಬದಿಯಲ್ಲಿ ಓರ್ವ ವ್ಯಕ್ತಿ(ರಘು) ಅನುಮಾನಸ್ಪದವಾಗಿ ನಿಂತಿದ್ದನ್ನು ಗಮನಿಸಿದ್ದಾರೆ.
ಆತನನ್ನು ವಿಚಾರಣೆ ಮಾಡಿದಾಗ ಸಮಂಜಸವಾಗಿ ಉತ್ತರ ನೀಡದ ಕಾರಣಕ್ಕೆ ಆತನ ಬೈಕ್ ಸಮೇತವಾಗಿ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ. ಆಗ ಆತ ಹಲವು ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ಕಳ್ಳ ಎನ್ನುವುದು ಬಯಲಾಗಿದೆ.
ಸದರಿ ಆರೋಪಿಯು ಈಗಾಗಲೇ ಹೆಬ್ಬೂರು, ತುಮಕೂರು ಗ್ರಾಮಾಂತರ, ಕೋರಾ ಹಾಗೂ ಕೊರಟಗೆರೆ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಮನೆ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಇತ್ತೀಚೆಗಷ್ಟೇ ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದನು ಎನ್ನುವುದು ವಿಚಾರಣೆಯಲ್ಲಿ ತಿಳಿದುಬಂದಿದೆ.
ಈತ ಕೋರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 1, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 4 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ.
ಬಂಧಿತ ಆರೋಪಿಯಿಂದ ಒಟ್ಟು 5 ಪ್ರಕರಣಗಳಲ್ಲಿ ಸುಮಾರು 14 ಲಕ್ಷ ರೂ., ಮೌಲ್ಯದ 350 ಗ್ರಾಂ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತುಮಕೂರುನ್ಯೂಸ್.ಇನ್ ವಾಟ್ಸ್ ಆಪ್ ನಂಬರ್ :+91 9148215339
ಇಮೇಲ್: tumkurnews.in@gmail.com
ವೆಬ್ ಸೈಟ್ : https://www.tumkurnews.in/