18 ವರ್ಷ ತುಂಬಿದೆಯೇ? ತೆಂಗು ಉದ್ದಿಮೆ ಆರಂಭಿಸಿ, ಪಡೆಯಿರಿ 15 ಲಕ್ಷ ರೂ.ವರೆಗೆ ಸಹಾಯ ಧನ!

1 min read

 

 

 

 

 

ಆತ್ಮ ನಿರ್ಭರ ಭಾರತ ಅಭಿಯಾನ: ತೆಂಗಿನ ಮೌಲ್ಯವರ್ಧನೆ, ಸಂಸ್ಕರಣೆ, ಪ್ಯಾಕಿಂಗ್, ಬ್ರಾಂಡ್ ಅಭಿವೃದ್ಧಿ ಹಾಗೂ ಮಾರುಕಟ್ಟೆಗೆ ಪ್ರೋತ್ಸಾಹ

ಒಂದು ಜಿಲ್ಲೆ ಒಂದು ಉತ್ಪನ್ನ ಕಾರ್ಯಕ್ರಮದಡಿ ತುಮಕೂರು ಜಿಲ್ಲೆಗೆ ತೆಂಗು ಬೆಳೆ ಆಯ್ಕೆ

Tumkurnews
ತುಮಕೂರು: ಆತ್ಮ ನಿರ್ಭರ ಭಾರತ ಅಭಿಯಾನದ “ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಔಪಚಾರೀಕರಣ ಯೋಜನೆ” ಅಂಗವಾಗಿ “ಒಂದು ಜಿಲ್ಲೆ ಒಂದು ಉತ್ಪನ್ನ” ಕಾರ್ಯಕ್ರಮದಡಿ ತುಮಕೂರು ಜಿಲ್ಲೆಯಲ್ಲಿ ತೆಂಗು ಬೆಳೆಯನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದ್ದಾರೆ.
ತೆಂಗು ಹಾಗೂ ಇನ್ನಿತರ ಯಾವುದೇ ಆಹಾರ ಪದಾರ್ಥಗಳ ಮೌಲ್ಯವರ್ಧನೆ, ಸಂಸ್ಕರಣೆ, ಪ್ಯಾಕಿಂಗ್, ಬ್ರಾಂಡ್ ಅಭಿವೃದ್ಧಿ ಹಾಗೂ ಮಾರುಕಟ್ಟೆಗೆ ಪ್ರೋತ್ಸಾಹಿಸಬೇಕಾಗಿರುತ್ತದೆ. ಮಾರಾಟ ಮತ್ತು ರಫ್ತು ಘಟಕಗಳನ್ನು ಸ್ಥಾಪಿಸುವ ಸಣ್ಣ ಉದ್ದಿಮೆದಾರರಿಗೆ ಸಹಾಯಧನವನ್ನು ನೀಡಲಾಗುತ್ತದೆ. ವೈಯಕ್ತಿಕವಾಗಿ ರೈತರು, ರೈತ ಉತ್ಪಾದಕರ ಸಂಸ್ಥೆಗಳು, ಸ್ವ-ಸಹಾಯ ಗುಂಪುಗಳು, ಉತ್ಪಾದಕರ ಸಹಕಾರ ಸಂಘಗಳು ಈ ಹೊಸ ಯೋಜನೆಯನ್ನು ಪ್ರಾರಂಭಿಸಲು ಮತ್ತು ಉನ್ನತೀಕರಣಕ್ಕೆ ಹಾಗೂ ಇತರೆ ಆಹಾರ ಸಂಸ್ಕರಣೆಯ ಕಿರು ಉದ್ದಿಮೆಗಳು ಸದರಿ ಯೋಜನೆಯಡಿ ಸಹಾಯಧನ ಸೌಲಭ್ಯ ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.

ಗೃಹಲಕ್ಷ್ಮಿ; ಜಿಲ್ಲೆಯ 1.35ಲಕ್ಷ ಫಲಾನುಭವಿಗಳ ಖಾತೆಗೆ ಹಣ ಜಮೆ: ಉಳಿದವರಿಗೆ ಯಾವಾಗ? ಇಲ್ಲಿದೆ ಮಾಹಿತಿ
ಯೋಜನೆಯ ಘಟಕಗಳು: ವೈಯಕ್ತಿಕ ಉದ್ದಿಮೆದಾರರು ಮತ್ತು ಗುಂಪುಗಳು ಹೊಸ ಆಹಾರ ಸಂಸ್ಕರಣಾ ಉದ್ದಿಮೆ ಪ್ರಾರಂಭಿಸಲು ಹಾಗೂ ಚಾಲ್ತಿಯಲ್ಲಿರುವ ಉದ್ದಿಮೆಗಳನ್ನು ವಿಸ್ತರಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ. 18 ವರ್ಷ ಮೇಲ್ಪಟ್ಟವರು ಆಗಿರಬೇಕು. ಸರ್ಕಾರಿ ಯೋಜನೆಗಳಲ್ಲಿ ಸಹಾಯಧನ ಸಂಪರ್ಕಿತ ಬ್ಯಾಂಕ್ ಸಾಲ ಪಡೆದಿದ್ದರೂ ಸಹ ಅರ್ಹರಾಗಿರುತ್ತಾರೆ. ವೈಯಕ್ತಿಕ ಉದ್ದಿಮೆದಾರರು, ಮಾಲೀಕತ್ವದ ಸಂಸ್ಥೆಗಳಿಗೆ, ಪಾಲುದಾರಿಕೆ ಸಂಸ್ಥೆಗಳಿಗೆ, ಖಾಸಗೀ ಕಂಪನಿಗಳು ರೈತ ಉತ್ಪಾದಕ ಸಂಸ್ಥೆಗಳಿಗೆ, ಸರ್ಕಾರೇತರ ಸಂಸ್ಥೆಗಳಿಗೆ ಮತ್ತು ಸ್ವಸಹಾಯ ಸಂಘಗಳಿಗೆ ಸಾಲ ಸಂಪರ್ಕಿತ ಶೇ.35ರಷ್ಟು ಸಹಾಯಧನ ಜೊತೆಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿ 15% ಸಹಾಯಧನ, ಗರಿಷ್ಠ ರೂ.15 ಲಕ್ಷಗಳು ಅಥವಾ ಶೇ.50 ಪಡೆಯಲು ಅವಕಾಶವಿದೆ.

ಗೃಹಲಕ್ಷ್ಮಿಗೆ ಈಗಲೂ ನೋಂದಣಿ ಮಾಡಿಸಬಹುದೇ?; ಮುರಳೀಧರ ಹಾಲಪ್ಪ ಸ್ಪಷ್ಟನೆ
ಪ್ರಾಥಮಿಕ ಬಂಡವಾಳ: ಆಹಾರ ಸಂಸ್ಕರಣಾ ಚಟುವಟಿಕೆಗಳಲ್ಲಿ ತೊಡಗಿರುವ ಸ್ವಸಹಾಯ ಸಂಘಗಳ ಸದಸ್ಯರುಗಳಿಗೆ ದುಡಿಯುವ ಬಂಡವಾಳ ಮತ್ತು ಸಣ್ಣ ಉಪಕರಣಗಳ ಖರೀದಿಗಾಗಿ ಪ್ರತೀ ಸದಸ್ಯರಿಗೆ ಗರಿಷ್ಟ ರೂ.40000 ಹಾಗೂ ಪ್ರತೀ ಸ್ವಸಹಾಯ ಸಂಘಕ್ಕೆ ಗರಿಷ್ಟ ರೂ. 4 ಲಕ್ಷ ಪಡೆಯಲು ಅವಕಾಶವಿದೆ.
ಸಾಮಾನ್ಯ ಮೂಲಭೂತ ಸೌಕರ್ಯ ಸ್ಥಾಪನೆಗೆ ಸಹಾಯಧನ: ಸಾಮಾನ್ಯ ಮೂಲಭೂತ ಸೌಕರ್ಯ ಸೃಷ್ಟಿಗೆ ಶೇ.35 ರಷ್ಟು ಸಾಲ ಸಂಪರ್ಕಿತ ಸಹಾಯಧನ, ಗರಿಷ್ಠ ಸಹಾಯಧನ ರೂ.3.00 ಕೋಟಿ ಹಾಗೂ ಗರಿಷ್ಟ ಯೋಜನಾ ವೆಚ್ಚ ರೂ.10 ಕೋಟಿ. ಅರ್ಹ ಸಂಸ್ಥೆಗಳಾದ ರೈತ ಉತ್ಪಾದಕ ಸಂಸ್ಥೆಗಳು, ರೈತ ಉತ್ಪಾದಕ ಕಂಪನಿಗಳು, ಸಹಕಾರಿಗಳು, ಸ್ವಸಹಾಯ ಸಂಘಗಳು & ಅದರ ಒಕ್ಕೂಟ ಮತ್ತು ಸರ್ಕಾರಿ ಸಂಸ್ಥೆಗಳು. ಅರ್ಜಿ ಸಲ್ಲಿಸಿ ಸೌಲಭ್ಯ ಪಡೆಯಬಹುದಾಗಿದೆ. ಅರ್ಜಿದಾರರ ಸಂಸ್ಥೆಯ ಕನಿಷ್ಠ ವಹಿವಾಟು ಮತ್ತು ಅನುಭವದ ಯಾವುದೇ ಪೂರ್ವ ಷರತ್ತುಗಳಿಲ್ಲದೆ, ವಿಂಗಡಣೆ, ಶ್ರೇಣೀಕರಣ, ಸಂಗ್ರಹಣೆ, ಸಾಮಾನ್ಯ ಸಂಸ್ಕರಣೆ, ಪ್ಯಾಕೇಜಿಂಗ್ ಮತ್ತು ಪ್ರಯೋಗಾಲಯ ಇತ್ಯಾದಿ ಸ್ಥಾಪಿಸಲು ಅವಕಾಶ ಮಾಡಿಕೊಡಲಾಗಿದೆ.

ನೀವು ಕೋಳಿ ಸಾಕಾಣಿಕೆ ಕಲಿಯಬೇಕೆ? ಉಚಿತ ತರಬೇತಿಗೆ ಅರ್ಜಿ ಆಹ್ವಾನ
ಬ್ರಾಂಡಿಂಗ್ ಮತ್ತು ಮಾರುಕಟ್ಟೆಗೆ ಸಹಾಯ: ಬ್ರಾಂಡಿಂಗ್ ಮತ್ತು ಮಾರುಕಟ್ಟೆ ಚಟುವಟಿಕೆಗಳಾದ ಪ್ಯಾಕೇಜಿಂಗ್, ಜಾಹಿರಾತು, ಸಾಮಾನ್ಯ ಬ್ರಾಂಡ್ ಅಭಿವೃದ್ಧಿ, ಚಿಲ್ಲರೆ ಮಾರಾಟ ಸಂಸ್ಥೆಗಳೊಂದಿಗೆ ಒಡಂಬಡಿಕೆ ಇತ್ಯಾದಿಗಳಿಗಾಗಿ ಶೇ.50 ರಷ್ಟು ಸಹಾಯಧನ. ಅರ್ಹ ಸಂಸ್ಥೆಗಳಾದ ರೈತ ಉತ್ಪಾದಕ ಸಂಸ್ಥೆಗಳು, ಕಂಪನಿಗಳು, ಸಹಕಾರಿಗಳು, ಸ್ವಸಹಾಯ ಸಂಘಗಳು, ಸಹಕಾರಿ ಸಂಸ್ಥೆಗಳು ಮತ್ತು ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ವಿಶೇಷ ಉದ್ದೇಶ ಸಂಸ್ಥೆಗಳು ಲಾಭ ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರು, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರನ್ನು ಸಂಪರ್ಕಿಸಲು ಕೋರಿದೆ ಹಾಗೂ ಸೂಕ್ತ ವೈಯಕ್ತಿಕ ಫಲಾನುಭವಿಗಳು ಸ್ವ-ಸಹಾಯ ಗುಂಪುಗಳು, ರೈತ ಉತ್ಪಾದಕರ ಸಂಸ್ಥೆಗಳು ಮತ್ತು ಸಹಕಾರಿ ಸಂಸ್ಥೆಗಳು ಯೋಜನೆಯಲ್ಲಿ ಅರ್ಜಿ ಸಲ್ಲಿಸಲು ವಿಸ್ತೃತ ಯೋಜನಾ ವರದಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಗೌತಮ್. ಮೊಬೈಲ್ ಸಂಖ್ಯೆ.9448752379, ಶ್ರೀ ಪ್ರಣೀತ್. ಜಿ.ಎಸ್. ಮೊ.ಸಂಖ್ಯೆ: 9902856987, ಲೋಕೇಶ್.ಎಸ್.ಡಿ. ಮೊ. ಸಂಖ್ಯೆ: 7204727563, ಸುದರ್ಶನ್.ಕೆ.ಎನ್. ಮೊ.ಸಂಖ್ಯೆ: 9900106843, ಓಂಪ್ರಕಾಶ್.ಹೆಚ್.ಸಿ. ಮೊ.ಸಂಖ್ಯೆ::9535088925, ವಿನಯ್.ಕೆ ಮೊ.ಸಂಖ್ಯೆ: 9959766129, ಅಶ್ವಿನಿ.ಡಿ.ಆರ್. ಮೊ.ಸಂಖ್ಯೆ: 7349001197, ಭೂಮಿಕ ಮೊ.ಸಂಖ್ಯೆ: 8861526145, ದೇವರಾಜು.ಎಲ್.ವಿ. ಮೊ.ಸಂಖ್ಯೆ: 9535141141, ಚಿದಾನಂದ.ಎನ್. ಮೊ.ಸಂಖ್ಯೆ: 9886620878, ರಮೇಶ್.ಹೆಚ್. ಮೊ.ಸಂಖ್ಯೆ: 8884033060 ಮತ್ತು ಸುಲೋಚನಾ.ಬಿ.ಜಿ ಮೊ. ಸಂಖ್ಯೆ.8105501945 ರವರನ್ನು ಸಂಪರ್ಕಿಸಬಹುದು ಮತ್ತು ಜಂಟಿ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಲು ಕೋರಿದೆ ಹಾಗೂ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಯೋಜನೆಯ ಸದುಪಯೋಗ ಪಡೆಯಬೇಕೆಂದು ಅವರು ತಿಳಿಸಿದ್ದಾರೆ.

ತೆಂಗು ಗೊನೆಗಾರರಿಗೆ ಶುಭ ಸುದ್ದಿ!; 5 ಲಕ್ಷ ರೂ.ಗಳ ವಿಮೆ ಸೌಲಭ್ಯ

You May Also Like

More From Author

+ There are no comments

Add yours