web analytics
My page - topic 1, topic 2, topic 3
ಲಂಚಕ್ಕೆ ಬೇಡಿಕೆ; ಅನುದಾನಿತ ಪ್ರೌಢಶಾಲೆಯ ಇಬ್ಬರು ಎಸ್.ಡಿ.ಎಗಳ ಬಂಧನ

ಲಂಚಕ್ಕೆ ಬೇಡಿಕೆ; ಅನುದಾನಿತ ಪ್ರೌಢಶಾಲೆಯ ಇಬ್ಬರು ಎಸ್.ಡಿ.ಎಗಳ ಬಂಧನ

 1,039 

Tumkurnews.in
ಕುಣಿಗಲ್; ರಜೆ ನಗದೀಕರಣಕ್ಕಾಗಿ ಲಂಚಕ್ಕೆ ಬೇಡಿಕೆ ಇರಿಸಿದ್ದ ಇಬ್ಬರು ಆರೋಪಿಗಳನ್ನು ಎಸಿಬಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಕುಣಿಗಲ್ ತಾಲ್ಲೂಕು ಅಮೃತ್ತೂರು ಹೋಬಳಿ ಚಿನ್ನಾಗರ ವಾಸಿ ಶ್ರೀನಿವಾಸ್ ಎಂಬುವವರು ಪ್ರಕರಣ ಕುರಿತು ಎಸಿಬಿ ಪೊಲೀಸರಿಗೆ ದೂರು ನೀಡಿದ್ದರು.
ತಮ್ಮ ರಜೆ ನಗದೀಕರಣಕ್ಕಾಗಿ ಶಿಫಾರಸ್ಸು ಮಾಡಿಸಲು ಹಾಗೂ ಜಿಎಲ್ಎಸ್ಐ ಅನ್ನು ಸೆಕ್ರೆಟರಿ ಮತ್ತು ಮುಖ್ಯೋಪಾಧ್ಯಾಯರಿಂದ ಸಹಿ ಮಾಡಿಸಿಕೊಡಲು ಕೆಂಪೇಗೌಡ ಅನುದಾನಿತ ಪ್ರೌಢಶಾಲೆಯ ಎಸ್.ಡಿ.ಎ ಗೋಪಾಲಸ್ವಾಮಿ ಮತ್ತು ನಿವೃತ್ತ ಎಸ್.ಡಿ.ಎ ಖಾಸಗಿಯಾಗಿ ಕೆಲಸ ಮಾಡುತ್ತಿದ್ದ ಬೆಟ್ಟಸ್ವಾಮಿ ಎಂಬುವರಿಬ್ಬರು ಸೇರಿಕೊಂಡು ಫೆಬ್ರುವರಿ 9ರಂದು 25 ಸಾವಿರ ರೂ‌.ಗಳಿಗೆ ಬೇಡಿಕೆ ಇರಿಸಿದ್ದರು ಎಂದು ಕೆ.ಶ್ರೀನಿವಾಸ್ ತಮ್ಮ ದೂರಿನಲ್ಲಿ ತಿಳಿಸಿದ್ದರು.
ಅದರಂತೆ ಮುಂಗಡವಾಗಿ 5 ಸಾವಿರ ರೂ.ಗಳನ್ನು ಪಡೆದು ಉಳಿಕೆ 20 ಸಾವಿರ ರೂ.ಗಳನ್ನು ಪಡೆಯುವಾಗ ಫೆಬ್ರವರಿ 12ರಂದು ಪಡೆದುಕೊಳ್ಳುವಾಗ ಕೆಂಪೇಗೌಡ ಅನುದಾನಿತ ಪ್ರೌಢಶಾಲೆಯ ಬಳಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಆರೋಪಿಗಳಾದ ಗೋಪಾಲಸ್ವಾಮಿ ಹಾಗೂ ಬೆಟ್ಟಸ್ವಾಮಿ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರಕರಣದಲ್ಲಿ ಎಸಿಬಿ ಡಿವೈಎಸ್ಪಿ ಮಲ್ಲಿಕಾರ್ಜುನ ಚುಕ್ಕಿ ಎಸ್., ನೇತೃತ್ವದಲ್ಲಿ ತನಿಖಾಧಿಕಾರಿಗಳಾದ ಪೊಲೀಸ್ ಇನ್ಸ್ ಪೆಕ್ಟರ್ ಎಸ್.ವಿಜಯ ಲಕ್ಷ್ಮಿ, ಎನ್.ವೀರೇಂದ್ರ, ಸಿಬ್ಬಂದಿ ನರಸಿಂಹ ರಾಜು ಡಿ., ಮೋಹನ್ ಕುಮಾರ್, ಎಂ.ಚಂದ್ರಶೇಖರ್, ಎಲ್.ನರಸಿಂಹ ರಾಜು, ಟಿ.ಎಸ್ ಗಿರೀಶ್ ಕುಮಾರ್, ವಿ.ಮಹೇಶ್ ಕುಮಾರ್ ಮತ್ತು ರಮೇಶ್ ದಾಳಿ ತಂಡದಲ್ಲಿದ್ದರು.

ತುಮಕೂರುನ್ಯೂಸ್.ಇನ್ ವಾಟ್ಸ್ ಆಪ್ ನಂಬರ್ :+91 9148215339 ಇಮೇಲ್: tumkurnews.in@gmail.com ವೆಬ್ ಸೈಟ್ : https://www.tumkurnews.in/

Leave a Reply

Your email address will not be published. Required fields are marked *

error: Content is protected !!