web analytics
My page - topic 1, topic 2, topic 3
ಕೊರಟಗೆರೆ; ಕೊಲೆ ಮಾಡಿ ‘ಆಕ್ಸಿಡೆಂಟ್’ ದೃಶ್ಯ ಸೃಷ್ಟಿ! ಸ್ಥಳದಲ್ಲೇ ಸಿಕ್ಕ ಸುಳಿವೇನು ಗೊತ್ತೇ?

ಕೊರಟಗೆರೆ; ಕೊಲೆ ಮಾಡಿ ‘ಆಕ್ಸಿಡೆಂಟ್’ ದೃಶ್ಯ ಸೃಷ್ಟಿ! ಸ್ಥಳದಲ್ಲೇ ಸಿಕ್ಕ ಸುಳಿವೇನು ಗೊತ್ತೇ?

 71,057 

Tumkurnews.in
ಕೊರಟಗೆರೆ; ವ್ಯಕ್ತಿಯೋರ್ವನನ್ನು ಕೊಲೆ ಮಾಡಿ, ಅಪಘಾತ ಎಂಬಂತೆ ಬಿಂಬಿಸಲು ಯತ್ನಿಸಿರುವ ಘಟನೆ ಶನಿವಾರ ಬೆಳಕಿಗೆ ಬಂದಿದೆ.
ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿ ತುಂಬಾಡಿ ಗ್ರಾಪಂ ವ್ಯಾಪ್ತಿಯ ಶಾಲೆ ಎದುರು ಮರಕ್ಕೆ ಡಿಕ್ಕಿ ಹೊಡೆದ ರೀತಿಯಲ್ಲಿ ಕಾರೊಂದು ಪತ್ತೆಯಾಗಿದ್ದು, ಚಾಲಕನ ಸೀಟಿನಲ್ಲಿ ವ್ಯಕ್ತಿಯೋರ್ವನ ಶವ ಪತ್ತೆಯಾಗಿದೆ.
ಸ್ಥಳಕ್ಕೆ ಭೇಟಿ ನೀಡಿದ ಕೊರಟಗೆರೆ ಪೊಲೀಸರು ಪರಿಶೀಲನೆ ವೇಳೆ ಇದೊಂದು ಕೊಲೆಯಾಗಿದ್ದು, ಅಪಘಾತವಾದಂತೆ ಬಿಂಬಿಸಲಾಗಿದೆ ಎಂದು ತಿಳಿಸಿದ್ದಾರೆ.

ಕೊರಟಗೆರೆ; ಅಡಕೆ ಕಳವು, ಆರೋಪಿಗಳ ಬಂಧನ
ಬೆಂಗಳೂರಿನ ನಿಸಾರ್ ಅಹಮದ್ (48) ಎಂಬಾತನ ಶವ ಕಾರಿನ ಚಾಲಕನ ಸೀಟಿನಲ್ಲಿ ಪತ್ತೆಯಾಗಿದೆ. ಆತನ ಎದೆ, ಕತ್ತು ಮತ್ತು ತಲೆಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಲಾಗಿದ್ದು, ಶವವನ್ನು ಕಾರಿನಲ್ಲಿ ಬಿಟ್ಟು ಕಿಡಿಗೇಡಿಗಳು ಪರಾರಿಯಾಗಿದ್ದಾರೆ.
ಸ್ಥಳ ಮಹಜರು ವೇಳೆ ಕೃತ್ಯಕ್ಕೆ ಬಳಸಿರಬಹುದಾದ ಚಾಕು ಪತ್ತೆಯಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ನಿನ್ನೆ 6, ಇಂದು ದಿಢೀರನೆ 26 ಹೊಸ ಕೊರೋನಾ ಸೋಂಕಿತರು ಪತ್ತೆ; ಕೊರಟಗೆರೆಯಲ್ಲಿ ಅಧಿಕ!

ತುಮಕೂರುನ್ಯೂಸ್.ಇನ್ ವಾಟ್ಸ್ ಆಪ್ ನಂಬರ್ :+91 9148215339 ಇಮೇಲ್: tumkurnews.in@gmail.com ವೆಬ್ ಸೈಟ್ : https://www.tumkurnews.in/

Leave a Reply

Your email address will not be published. Required fields are marked *

error: Content is protected !!