web analytics
My page - topic 1, topic 2, topic 3
ಮೋದಿ, ಯಡಿಯೂರಪ್ಪ ಗೂಟ ಉಳಿಸಿಕೊಂಡು ಇರ್ತಾರಾ? ಕಾಲ ಬದಲಾಗುತ್ತೆ; ಕೆ.ಎನ್ ರಾಜಣ್ಣ ವಾರ್ನಿಂಗ್

ಮೋದಿ, ಯಡಿಯೂರಪ್ಪ ಗೂಟ ಉಳಿಸಿಕೊಂಡು ಇರ್ತಾರಾ? ಕಾಲ ಬದಲಾಗುತ್ತೆ; ಕೆ.ಎನ್ ರಾಜಣ್ಣ ವಾರ್ನಿಂಗ್

 2,893 

Tumkurnews.in
ಮಧುಗಿರಿ; ನಾಡೋಜ ಹಂಪಾ ನಾಗರಾಜಯ್ಯ ಅವರನ್ನು ಪೊಲೀಸ್ ಠಾಣೆಗೆ ಕರೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ
ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್ ರಾಜಣ್ಣ ಅವರು ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಪಟ್ಟಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಯೊಬ್ಬರಿಗೂ ವಾಕ್‌ ಸ್ವಾತಂತ್ರ್ಯ ಇದೆ. ರಾಜಕೀಯ ವಿಚಾರಗಳನ್ನು ಟೀಕೆ ಮಾಡೋಕೆ, ಪ್ರಶಂಸೆ ಮಾಡೋಕೆ ಹಕ್ಕು ಇದೆ, ಹಂಪಾ ನಾಗರಾಜ ಅವರು ರಾಜಕೀಯ ವ್ಯಕ್ತಿ ಏನಲ್ಲ, ಕನ್ನಡ ಸಾಹಿತ್ಯಕ್ಕೆ ಅವರ ಅಪಾರವಾದ ಕೊಡುಗೆ ಇದೆ. ಅಂತಹ ವ್ಯಕ್ತಿಯನ್ನು, ವ್ಯವಸ್ಥೆಯನ್ನ ಟೀಕೆ ಮಾಡಿದ್ದಾರೆ ಎನ್ನುವ ಕಾರಣಕ್ಕೆ ಪೊಲೀಸ್ ಠಾಣೆಗೆ ಕರೆಸಿದ್ದಾರೆ‌, ಇದು ಸರಿಯಲ್ಲ ಎಂದರು.
ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಗೆ ಅವರನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ. ಇದು ಸಾಹಿತಿಗಳಿಗೆ ಮಾಡಿರುವ ಅವಮಾನ, ಇದನ್ನು ಖಂಡಿಸುತ್ತೇನೆ, ಸರ್ಕಾರ ಕೂಡಲೇ ಇದಕ್ಕೆ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು. ಮೊನ್ನೆ ಜ.20 ರಂದು ಕಾಂಗ್ರೆಸ್, ರಾಜಭವನ ಚಲೋ ನಡೆಸಿತ್ತು. ಅಲ್ಲಿ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ನೂಕಾಟ, ತಳ್ಳಾಟ ನಡೆದಿದ್ದು ಸಹಜ.
ಬಿಜೆಪಿ ಪ್ರತಿಭಟನೆಗಳಲ್ಲಿ ನೂಕಾಟ ನಡೆದಿಲ್ವಾ..?
ಒಬ್ಬ ಹೋಂಗಾರ್ಡ್ ನಿಂದ ದೂರು ಪಡೆದು ಶಾಸಲಿ ಸೌಮ್ಯರೆಡ್ಡಿ ಮೇಲೆ ಕೇಸು ಹಾಕಿದ್ದಾರೆ. 323 ನೂಕಾಟ,353 ಸರ್ಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿ ಪ್ರಕರಣ ದಾಖಲಿಸಿದ್ದಾರೆ. ಹೋಂಗಾರ್ಡ್ ಯಾವ ಸರ್ಕಾರಿ ಅಧಿಕಾರಿ? ಇವರಿಗೇನಾದರೂ ಮಾನ ಮರ್ಯಾದೆ ಇದೆಯಾ ಎಂದು ಪ್ರಶ್ನಿಸಿದರು.
ಸರ್ಕಾರ ಕೂಡಲೇ ಈ ಕೇಸನ್ನು ವಾಪಸ್ ಪಡೆಯಬೇಕು, ಇಲ್ಲಾ ಅಂದ್ರೆ ಮುಂದೆ ಆಗುವ ಅನಾಹುತಗಳಿಗೆ ಈ ಸರ್ಕಾರ, ವ್ಯವಸ್ಥೆನೇ ಕಾರಣವಾಗುತ್ತೆ ಎಂದು ಎಚ್ಚರಿಸಿದರು. ಕಮಲ್ ಪಂಥ್ ಇರಬಹುದು ಇನ್ನೊಬ್ಬ ಇರಬಹುದು, ಇವ್ರೆಲ್ಲಾ ಏನ್ ತಿಳ್ಕೊಂಡಿದ್ದಾರೆ?
ಐಪಿಎಸ್ ಅಂದ್ರೇ ಸಂವಿಧಾನ, ಕಾನೂನು‌ ಪ್ರಕಾರ ಕೆಲಸ ಮಾಡಬೇಕು.
ಯಾವನೋ ಒಬ್ಬ ಕುತ್ಕೊಂಡು, ಅವ್ನ ತೀಟೆ ತೀರಿಸ್ಕೊಳ್ಳೋಕೆ ಅವ್ನು ಹೇಳ್ದಾಗೆ ಕೆಲಸ ಮಾಡೋರು ನಾಲಾಯಕ್. ಯಡಿಯೂರಪ್ಪ ಸರ್ಕಾರ ಏನ್ ಇಲ್ಲೇ ಗೂಟ ಉಳಿಸಿಕೊಂಡು ಕೂತಿರ್ತಾರಾ..? ಮೋದಿ ಏನ್ ಗೂಟ ಉಳಿಸಿಕೊಂಡು ಕೂತಿರ್ತಾರಾ..? ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಜನ್ರು ಬದಲಾವಣೆ ಬಯಸ್ತಾಗ ಅದು ಆಗ್ತಿರುತ್ತೆ.
ವ್ಯವಸ್ಥೆಯಲ್ಲಿ ಜನರಿಗೆ ಸ್ವಾಸ್ಥ್ಯ, ಸಾಮಾರಸ್ಯ ಕಾಪಾಡಿಕೊಳ್ಳೋ ಜವಾಬ್ದಾರಿ ಅಧಿಕಾರಿಗಳದ್ದು. ಯಾರನ್ನೋ ಖುಷಿ ಪಡಿಸೋಕೆ‌ ಈ ರೀತಿ ಕ್ರಮ ತೆಗೆದುಕೋಳ್ಳೊ ಪ್ರವೃತ್ತಿ ಮುಂದುವರೆದರೇ ಜನರು ಆಡಳಿತ ಮೇಲಿನ ವಿಶ್ವಾಸ ಕಳೆದುಕೊಳ್ಳುತ್ತಾರೆ ಎಂದರು.
ತುಮಕೂರುನ್ಯೂಸ್.ಇನ್ ವಾಟ್ಸ್ ಆಪ್ ನಂಬರ್ :+91 9148215339 ಇಮೇಲ್: tumkurnews.in@gmail.com ವೆಬ್ ಸೈಟ್ : https://www.tumkurnews.in/

Leave a Reply

Your email address will not be published. Required fields are marked *

error: Content is protected !!