44,207
Tumkurnews.in
ಕೊರಟಗೆರೆ; ನೀರಿನ ಟ್ಯಾಂಕ್ ಸ್ವಚ್ಛ ಮಾಡುವ ವೇಳೆ ಏಣಿಯ ಕಾಲು ಮುರಿದು ಟ್ಯಾಂಕಿನ ಮೇಲಿಂದ ಬಿದ್ದು ವಾಟರ್ ಮೆನ್ ಮೃತಪಟ್ಟಿರುವ ಘಟನೆ ನಡೆದಿದೆ.
ಕೊರಟಗೆರೆ ತಾಲೂಕು ಚನ್ನರಾಯನದುರ್ಗ ಹೋಬಳಿ ತೋವಿನಕೆರೆ ಗ್ರಾಪಂ ವ್ಯಾಪ್ತಿಯ ಬೋರಪ್ಪನಹಳ್ಳಿ ಗ್ರಾಮದ ನೀರು ವಿತರಕ ಪ್ರಕಾಶ್(43) ಮೃತ ದುರ್ದೈವಿ.
ಸಂಕ್ರಾಂತಿ ಹಬ್ಬದ ದಿನ ನೀರಿನ ಟ್ಯಾಂಕ್ ತೊಳೆಯುವ ವೇಳೆ ಪ್ರಕಾಶ್, ಟ್ಯಾಂಕಿನ ಮೇಲಿನಿಂದ ಕೆಳಗೆ ಬಿದ್ದಿದ್ದರು. ಈ ವೇಳೆ ಕೆಳಗೆ ಚಪ್ಪಡಿ ಕಲ್ಲುಗಳಿದ್ದ ಕಾರಣ ಕಲ್ಲಿನ ಮೇಲೆ ಬಿದ್ದ ಪ್ರಕಾಶ್ ಅವರ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು, ಪ್ರಜ್ಞೆ ಕಳೆದುಕೊಂಡಿದ್ದಾರೆ.
ಕೂಡಲೇ ಅವರನ್ನು ತುಮಕೂರಿನ ಶ್ರೀದೇವಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಗುರುವಾರ ಬೆಂಗಳೂರಿನ ನಿಮಾನ್ಸ್ ಗೆ ರವಾನಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಶುಕ್ರವಾರ ತಡರಾತ್ರಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಪ್ರಕಾಶ್, 18 ವರ್ಷದಿಂದ ನೀರು ವಿತರಕನಾಗಿ ಕೆಲಸ ಮಾಡುತ್ತಿದ್ದರು, ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತುಮಕೂರುನ್ಯೂಸ್.ಇನ್ ವಾಟ್ಸ್ ಆಪ್ ನಂಬರ್ :+91 9148215339
ಇಮೇಲ್: tumkurnews.in@gmail.com
ವೆಬ್ ಸೈಟ್ : https://www.tumkurnews.in/