46,679
Tumkurnews.in
ಕೊರಟಗೆರೆ; ಮನುಷ್ಯನ ಮುಖ ಮತ್ತು ಗೂಬೆಯಂತೆ ಕಾಣುವ ವಿಚಿತ್ರ ರೂಪದ ಮೇಕೆ ಮರಿಯೊಂದು ಜನಿಸಿದ್ದು, ಅಚ್ಚರಿ ಮೂಡಿಸಿದೆ.
ಕೊರಟಗೆರೆ ತಾಲೂಕಿನ ಕೋಳಾಲ ಹೋಬಳಿ ಪಾತಗಾನಗಳ್ಳಿ ಗ್ರಾಪಂ ವ್ಯಾಪ್ತಿಯ ವೆಂಗಳಮ್ಮನಹಳ್ಳಿಯ ರೈತ ಕುಮಾರ್ ಎಂಬುವರಿಗೆ ಸೇರಿದ ಮೇಕೆ ಈ ರೀತಿಯ ವಿಚಿತ್ರ ರೂಪದ ಮೇಕೆ ಮರಿಗೆ ಜನ್ಮ ನೀಡಿದೆ.
ಶುಕ್ರವಾರ ಸಂಜೆ ಜನಿಸಿರುವಈ ಮೇಕೆ ಮರಿಗೆ ಸಹಜವಾದ ನಾಲ್ಕು ಕಾಲು, ಎರಡು ಕಿವಿಗಳಿವೆ. ಆದರೆ ಮನುಷ್ಯನಿಗಿರುವಂತೆ ತಲೆ ಇದೆ, ಎರಡೂ ಕಣ್ಣು ಒಂದಕ್ಕೊಂದು ಅಂಟಿಕೊಂಡಿವೆ. ನಾಲಿಗೆ ಸಂಪೂರ್ಣವಾಗಿ ಬಾಯಿಯಿಂದ ಹೊರಗಡೆ ಬಂದಿದೆ. ಕಣ್ಣು ಗೂಬೆ ಕಣ್ಣಿನಂತೆ ಕಾಣುತ್ತಿದೆ.
ಈ ವಿಚಿತ್ರ ರೂಪದ ಮೇಕೆಯ ಜನನ ಸುತ್ತಮುತ್ತಲಿನ ಜನರಿಗೆ ಆಕರ್ಷಣೆಯ ಕೇಂದ್ರವಾಗಿದ್ದು, ಜನರು ತಂಡೋಪಡವಾಗಿ ಬಂದು ನೋಡುತ್ತಿದ್ದಾರೆ. ರೈತ ಕುಮಾರ್ ವಾರದ ಹಿಂದೆ 14 ಸಾವಿರ ರೂ. ನೀಡಿ ಒಂದು ಮೇಕೆ ಖರೀದಿಸಿ ತಂದಿದ್ದರು. ಆ ಮೇಕೆ ಈ ರೀತಿಯ ವಿಚಿತ್ರ ರೂಪದ ಮರಿಗೆ ಜನ್ಮ ನೀಡಿದೆ.
ತುಮಕೂರುನ್ಯೂಸ್.ಇನ್ ವಾಟ್ಸ್ ಆಪ್ ನಂಬರ್ :+91 9148215339
ಇಮೇಲ್: tumkurnews.in@gmail.com
ವೆಬ್ ಸೈಟ್ : https://www.tumkurnews.in/