957
Tumkurnews.in
ಪಾವಗಡ; ಖೋಟಾ ನೋಟು ಪ್ರಿಂಟ್ ಮಾಡಿ ಚಲಾವಣೆಗೆ ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಂದ 1.27 ಲಕ್ಷ ರೂ., ಗಳ ಖೋಟಾ ನೋಟುಗಳನ್ನು ಹಾಗೂ ಮುದ್ರಣಕ್ಕೆ ಬಳಸುತ್ತಿದ್ದ ಒಂದು ಪ್ರಿಂಟಿಂಗ್ ಮೆಷಿನನ್ನು ವಶಕ್ಕೆ ಪಡೆಯಲಾಗಿದೆ.
ಪಾವಗಡ ತಾಲ್ಲೂಕು ವೈ.ಎನ್ ಹೊಸಕೋಟೆ ಹೋಬಳಿ ವೈ.ಎನ್ ಹೊಸಕೋಟೆ ಟೌನ್ ನಲ್ಲಿ ಆರೋಪಿ ತನ್ನ ಮನೆಯ ಮೇಲಿರುವ ಕೊಠಡಿಯಲ್ಲಿ ದಸ್ತಾವೇಜು ಮತ್ತು ಉಪಕರಣಗಳಿಂದ ಖೋಟಾ ನೋಟುಗಳನ್ನು ಮುದ್ರಿಸಿ, ಮೋಸದಿಂದ ಸಾರ್ವಜನಿಕರಿಗೆ ಚಲಾವಣೆ ಮಾಡುವ ಸಲುವಾಗಿ ಮನೆಯಲ್ಲಿ ಇಟ್ಟುಕೊಂಡಿರುವ ಮಾಹಿತಿ ಮೇರೆಗೆ ಸ್ಥಳೀಯ ಪೊಲೀಸರು ದಾಳಿ ನಡೆಸಿದ್ದಾರೆ.
ಕೃತ್ಯಕ್ಕೆ ಸಂಬಂಧಿಸಿದಂತೆ ಆರೋಪಿತರಿಂದ 500 ರೂ. ಮುಖ ಬೆಲೆಯ 248 ಖೋಟಾ ನೋಟುಗಳು(1 ಲಕ್ಷ 24 ಸಾವಿರ ), 200 ರೂ. ಮುಖ ಬೆಲೆಯ 10 ಖೋಟಾ ನೋಟುಗಳು (2000), 100 ರೂ. ಮುಖಬೆಲೆಯ 17 (1700) ಖೋಟಾ ನೋಟುಗಳನ್ನು ಹಾಗೂ ಖೋಟಾ ನೋಟು ಪ್ರಿಂಟ್ ಮಾಡಲು ಬಳಸುತ್ತಿದ್ದ ಉಪಕರಣಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.


(ಶಿವಕುಮಾರ) (ಶ್ರೀನಿವಾಸ)
ಆರೋಪಿಗಳಾದ ಶಿವಕುಮಾರ ಬಿನ್ ನಾಗರಾಜಪ್ಪ,(32 )ವರ್ಷ ಹಾಗೂ ಶ್ರೀನಿವಾಸ ಬಿನ್ ಅಂಜಿನಪ್ಪ (50)ವರ್ಷ ಬಂಧಿತರು.
ವಿಚಾರಣೆ ವೇಳೆ ಆರೋಪಿ ಶ್ರೀನಿವಾಸನ ವಿರುದ್ಧ ಹಿಂದೂಪುರ ಪೋಲಿಸ್ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿ ಒಂದು ವರ್ಷ ಜೈಲು ವಾಸ ಅನುಭವಿಸಿದ್ದಾನೆ ಎಂದು ತಿಳಿದುಬಂದಿದೆ. ಬಂಧಿತರು ಯೂ ಟ್ಯೂಬ್ ಚಾನಲ್ ನೋಡಿಕೊಂಡು ಖೋಟಾ ನೋಟುಗಳನ್ನು ಪ್ರಿಂಟ್ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಈ ಪ್ರಕರಣವನ್ನು ಪತ್ತೆ ಹಚ್ಚಲು ಶ್ರಮಿಸಿದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಉದೇಶ ಟಿ.ಜೆ., ಮಧುಗಿರಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಎಂ.ಪ್ರವೀಣ್ ಹಾಗೂ ತಿರುಮಣಿ ವೃತ್ತ ನಿರೀಕ್ಷಕ ವೆಂಕಟೇಶ್, ವೈ.ಎನ್ ಹೊಸಕೋಟೆ ಠಾಣೆಯ ಪಿ.ಎಸ್.ಐ ರಾಮಯ್ಯ , ಸಿಬ್ಬಂದಿಗಳಾದ ಶಿವರಾಜು , ಶೌಕತ್ ಲಾಲಸಾ ಕುರಿ, ಸದ್ದಾಂ ಸಾಹೇಬ್, ರಾಮಚಂದ್ರ, ಹನುಮಾನಾಯ್, ಗೋಕರ್ಣ , ಶ್ರೀನಿವಾಸ್, ನಾಗೇಶ್, ಮಾಳಪ್ಪರವರುಗಳ ಪತ್ತೆ ತಂಡವನ್ನು ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಕೆ.ವಂಶಿಕೃಷ್ಣ ಅಭಿನಂದಿಸಿದ್ದಾರೆ.