44,528
Tumkurnews.in
ಕೊರಟಗೆರೆ; ಕೊರಟಗೆರೆ ತಾಲ್ಲೂಕಿನಲ್ಲಿ ಕಳ್ಳತನ ಮಾಡಿದ್ದ ಆರೋಪಿಯೋರ್ವನನ್ನು 9 ವರ್ಷಗಳ ಬಳಿಕ ಪೊಲೀಸರು ಬಂಧಿಸಿದ್ದಾರೆ.
ದಾವಣಗೆರೆ ಜಿಲ್ಲೆ, ಚನ್ನಗಿರಿ ತಾಲ್ಲೂಕು, ಬಿಕ್ಕಬ್ಬೀಕೆರೆ ಗ್ರಾಮದ ನಿವಾಸಿ ಧರ್ಮರಾಜ್ @ಧರ್ಮ(46) ಬಂಧಿತ.
2011ರ ಆಗಸ್ಟ್ 2ರಂದು ಟಿ.ನಾಗರಾಜು ಎಂಬುವರು, ತಮ್ಮ ಮನೆಯಲ್ಲಿ ಕಳ್ಳತನ ನಡೆದಿದೆ ಎಂದು ಕೊರಟಗೆರೆ ಪೊಲೀಸ್ ಠಾಣೆಗೆ ನೀಡಿದ್ದ ದೂರು ಆಧರಿಸಿ ಈ ಆರೋಪಿಯನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಯು ಬನವಾಸಿ, ಚಿಕ್ಕಮಗಳೂರು, ದಾವಣಗೆರೆ, ಕುಂದಾಪುರ, ಬಾಗಲಕೋಟೆ, ಅಜ್ಜಂಪುರ, ಚಿತ್ತೂರು, ಶಿರಸಿ ಮತ್ತು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಈತನ ವಿರುದ್ಧ ಪ್ರಕರಣಗಳು ದಾಖಲಾಗಿವೆ.
ಅಂತರರಾಜ್ಯ ಕಳ್ಳನಾದ ಈತನಿಂದ 1,80,000 ರೂ., ಮೌಲ್ಯದ 40 ಗ್ರಾಂ ಚಿನ್ನದ ಮಾಂಗಲ್ಯ ಸರವನ್ನು ವಶಕ್ಕೆ ಪಡೆಯಲಾಗಿದೆ.