web analytics
My page - topic 1, topic 2, topic 3
ಪೊಲೀಸ್ ಭದ್ರತೆಯಲ್ಲಿ ಬಂತು ಕೊರೋನಾ ವ್ಯಾಕ್ಸಿನ್!; ಜಿಲ್ಲೆಯಲ್ಲಿ ಯಾರಿಗೆ, ಯಾವತ್ತಿನಿಂದ ವಿತರಣೆ?

ಪೊಲೀಸ್ ಭದ್ರತೆಯಲ್ಲಿ ಬಂತು ಕೊರೋನಾ ವ್ಯಾಕ್ಸಿನ್!; ಜಿಲ್ಲೆಯಲ್ಲಿ ಯಾರಿಗೆ, ಯಾವತ್ತಿನಿಂದ ವಿತರಣೆ?

 1,185 

Tumkurnews.in
ತುಮಕೂರು; ಜಿಲ್ಲೆಗೆ ಕೋವಿಡ್ ವ್ಯಾಕ್ಸಿನ್ ಅನ್ನು ಪೊಲೀಸ್ ಬೆಂಗಾವಲಿನಲ್ಲಿ ತರಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ ತಿಳಿಸಿದರು.
ಕೋವಿಡ್ ವ್ಯಾಕ್ಸಿನ್ ಬರಮಾಡಿಕೊಂಡು ಮಾತನಾಡಿದ ಅವರು, ಬೆಂಗಳೂರಿನಿಂದ 12 ಸಾವಿರ ಕೋವಿಡ್ ಶೀಲ್ಡ್ ವ್ಯಾಕ್ಸಿನ್ ನಮ್ಮ ಜಿಲ್ಲೆಗೆ ಸರಬರಾಜು ಆಗಿದೆ. ಅದನ್ನು ಸರ್ಕಾರದ ಮಾರ್ಗಸೂಚಿಯಂತೆ ಜ.16ರಿಂದ 13 ವ್ಯಾಕ್ಸಿನ್ ಸೈಟ್ ಗಳಲ್ಲಿ ವಿತರಿಸಲಾಗುವುದು ಎಂದರು.
ವ್ಯಾಕ್ಸಿನ್ ವಿತರಣೆಗೆ ಜಿಲ್ಲೆಯಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಈ ವ್ಯಾಕ್ಸಿನ್ ಸ್ಟೋರ್ ಗೆ ಪೊಲೀಸ್ ಭದ್ರತೆ ನೀಡಲಾಗಿರುತ್ತದೆ, ಎಲ್ಲಾ ಸಿಬ್ಬಂದಿಗೆ ತರಬೇತಿಯನ್ನು ನೀಡಲಾಗಿದೆ. ಇದೇ ಜ.16ರಿಂದ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ವ್ಯಾಕ್ಸಿನ್ ವಿತರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.
ವ್ಯಾಕ್ಸಿನ್ ಎಲ್ಲಿದೆ?; ಕೋವಿಡ್ ವ್ಯಾಕ್ಸಿನ್ ಲಸಿಕೆಯನ್ನು  ತುಮಕೂರು ನಗರದ ಡಿಎಚ್ಒ ಕಚೇರಿಯ ಆವರಣದಲ್ಲಿರುವ ಜಿಲ್ಲಾ ಲಸಿಕಾ ಉಗ್ರಾಣಕ್ಕೆ ಇಂದು  ರಾತ್ರಿ 8 ಗಂಟೆ ಸಮಯದಲ್ಲಿ ಬೆಂಗಳೂರಿನಿಂದ ಪೋಲಿಸ್ ಭದ್ರತೆಯಲ್ಲಿ ತರಲಾಗಿದೆ.
ಈ ಸಂದರ್ಭದಲ್ಲಿ ಡಿಎಚ್ಒ ಡಾ.ನಾಗೇಂದ್ರಪ್ಪ , ಆರ್ ಸಿ ಎಚ್ ಅಧಿಕಾರಿ ಡಾ. ಕೇಶವರಾಜ್, ಡಿಎಸ್ ಓ ಡಾ. ಮೋಹನ ದಾಸ್ ಮತ್ತಿತರರು ಹಾಜರಿದ್ದರು.
ತುಮಕೂರುನ್ಯೂಸ್.ಇನ್ ವಾಟ್ಸ್ ಆಪ್ ನಂಬರ್ :+91 9148215339 ಇಮೇಲ್: [email protected] ವೆಬ್ ಸೈಟ್ : https://www.tumkurnews.in/

Leave a Reply

Your email address will not be published. Required fields are marked *

error: Content is protected !!