web analytics
My page - topic 1, topic 2, topic 3
ಕೊರೋನಾಗೆ ಹೆಬ್ಬೂರಿನ ಮಹಿಳೆ ಬಲಿ; ಇಂದು 8 ಹೊಸ ಪ್ರಕರಣ

ಕೊರೋನಾಗೆ ಹೆಬ್ಬೂರಿನ ಮಹಿಳೆ ಬಲಿ; ಇಂದು 8 ಹೊಸ ಪ್ರಕರಣ

 995 

Tumkurnews.in
ತುಮಕೂರು; ಜಿಲ್ಲೆಯಲ್ಲಿ ಬುಧವಾರ ಹೊಸದಾಗಿ 8 ಜನರಿಗೆ ಕೋವಿಡ್ 19 ಸೋಂಕು ತಗಲಿರುವುದು ಕಂಡು ಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 23,467ಕ್ಕೆ ಏರಿದೆ.
ತಾಲೂಕುವಾರು ವಿವರ; ತುಮಕೂರು-3, ಗುಬ್ಬಿ-1, ಕುಣಿಗಲ್-1, ಮಧುಗಿರಿ-1, ಪಾವಗಡ-0, ಶಿರಾ-0, ತಿಪಟೂರು-0, ತುರುವೇಕೆರೆ-0,
ಚಿಕ್ಕನಾಯಕನಹಳ್ಳಿ-1, ಕೊರಟಗೆರೆ-1, ಒಟ್ಟು-8.
ಇಂದು 31 ಮಂದಿ ಗುಣಮುಖರಾಗಿದ್ದು, ಈವರೆಗೆ ಜಿಲ್ಲೆಯಲ್ಲಿ 22,848 ಮಂದಿ ಗುಣಮುಖರಾಗಿದ್ದಾರೆ.
ಸದ್ಯ 173 ಮಂದಿ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.
14 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಓರ್ವ ಮಹಿಳೆ ಸಾವು; ಇಂದು ಚಿಕಿತ್ಸೆ ಫಲಿಸದೆ ಓರ್ವ ಕೊರೋನಾ ಸೋಂಕಿತ ಸಾವನ್ನಪ್ಪಿದ್ದಾರೆ.

ತಾಯಿ ಇಲ್ಲದ ತಬ್ಬಲಿ ಮಗಳನ್ನು ಕೊಂದನಾ ಕುಡುಕ ತಂದೆ?; ಬಾಲಕಿಯ ಅನುಮಾನಸ್ಪದ ಸಾವು
ತುಮಕೂರು ತಾಲ್ಲೂಕು ಹೆಬ್ಬೂರು ಗ್ರಾಮದ 29 ವರ್ಷದ ಮಹಿಳೆ ಮೃತರು. ಜನವರಿ 7ರಂದು ಸಿದ್ದಗಂಗಾ ಆಸ್ಪತ್ರೆಯಲ್ಲಿ ಕೊರೋನಾ ತಪಾಸಣೆ ಮಾಡಿಸಿಕೊಂಡಿದ್ದ ಈಕೆಗೆ ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಸದರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು, ಚಿಕಿತ್ಸೆ ಫಲಿಸದೆ ಇಂದು ಕೊನೆಯುಸಿರೆಳೆದಿದ್ದಾರೆ.
ಈವರೆಗೆ ಜಿಲ್ಲೆಯಲ್ಲಿ 446 ಮಂದಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

ತುಮಕೂರುನ್ಯೂಸ್.ಇನ್ ವಾಟ್ಸ್ ಆಪ್ ನಂಬರ್ :+91 9148215339 ಇಮೇಲ್: [email protected] ವೆಬ್ ಸೈಟ್ : https://www.tumkurnews.in/

Leave a Reply

Your email address will not be published. Required fields are marked *

error: Content is protected !!