web analytics
My page - topic 1, topic 2, topic 3
ಯುವ ಕಾಂಗ್ರೆಸ್ ಚುನಾವಣೆ; ಮಧುಗಿರಿಯಿಂದ 1559 ಮತದಾನ

ಯುವ ಕಾಂಗ್ರೆಸ್ ಚುನಾವಣೆ; ಮಧುಗಿರಿಯಿಂದ 1559 ಮತದಾನ

 876 

Tumkurnews.in
ಮಧುಗಿರಿ; ಯುವ ಕಾಂಗ್ರೆಸ್‌ಗೆ ರಾಜ್ಯ ಮತ್ತು ಜಿಲ್ಲಾ ಪದಾಧಿಕಾರಿಗಳ ಆಯ್ಕೆಗೆ ಆನ್‌ಲೈನ್ ಮೂಲಕ ನಡೆದ ಚುನಾವಣೆಯಲ್ಲಿ ಮಧುಗಿರಿಯಿಂದ 1559 ಮತದಾನವಾಗಿದೆ ಎಂದು ತಾಲ್ಲೂಕು ಯುವ ಕಾಂಗ್ರೆಸ್ ಅಭ್ಯರ್ಥಿ ವೆಂಕಟೇಶ್ ತಿಳಿಸಿದರು.

ಮಧುಗಿರಿಯಲ್ಲಿ ಬೀದಿ ನಾಯಿಗಳ ಉಪಟಳ; ಹೆಚ್ಚಿದ ವಾಹನ ಅಪಘಾತ
ಯುವ ಕಾಂಗ್ರೆಸ್ ಅಧ್ಯಕ್ಷ ಮತ್ತು ಇತರೆ ಪದಾಧಿಕಾರಿಗಳ ಸ್ಥಾನಕ್ಕೆ ನಡೆದ ಆನ್ಲೈನ್ ಚುನಾವಣೆಗೆ ಮತ ಚಲಾಯಿಸಿದ ತಾಲ್ಲೂಕು ಯುವ ಕಾಂಗ್ರೆಸ್ ಸದಸ್ಯರಿಗೆ ಅವರು ಧನ್ಯವಾದಗಳನ್ನು ತಿಳಿಸಿ ಮಾತನಾಡಿದರು.
ಈ ಪ್ರಕ್ರಿಯೆಗೆ ಕ್ರಿಬ್ಕೋ ಸಂಸ್ಥೆಯ ನಿರ್ದೇಶಕ ಆರ್.ರಾಜೇಂದ್ರ, ಕೆ.ಎನ್.ಆರ್ ಮತ್ತು ಆರ್.ಆರ್. ಅಭಿಮಾನಿ ಬಳಗ, ಮುಖಂಡ ಆದಿನಾರಾಯಣರೆಡ್ಡಿ, ರಾಜ್ಯ ಸಹಕಾರ ಮಹಾಮಂಡಲದ ಮಾಜಿ ಅಧ್ಯಕ್ಷ ಎನ್.ಗಂಗಣ್ಣ, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ನಾಗೇಶ್‌ಬಾಬು, ರಾಜ್ಯ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಸುವರ್ಣಮ್ಮ, ಮುಖಂಡರುಗಳಾದ ಎಸ್.ಡಿ.ಕೃಷ್ಣಪ್ಪ, ಬಿ.ಎನ್.ಪರಶುರಾಮ್, ವಿ.ಆರ್.ಭಾಸ್ಕರ್, ಎಸ್.ಬಿ.ಟಿ.ರಾಮು, ಆಯುಬ್ ಖಾನ್, ಬಾಬುಫಕೃದೀನ್, ಸೀತಾರಾಮ್, ಆನಂದ ಮತ್ತು ಪಾಪೀರಣ್ಣ ಸಹಕರಿಸಿದರು ಎಂದು ತಿಳಿಸಿದರು.

ತುಮಕೂರುನ್ಯೂಸ್.ಇನ್ ವಾಟ್ಸ್ ಆಪ್ ನಂಬರ್ :+91 9148215339 ಇಮೇಲ್: [email protected] ವೆಬ್ ಸೈಟ್ : https://www.tumkurnews.in/

Leave a Reply

Your email address will not be published. Required fields are marked *

error: Content is protected !!