222
Tumkurnews.in
ತಿಪಟೂರು; ಭಾರತೀಯ ಸಂಸ್ಕೃತಿ, ವಿಚಾರಧಾರೆ ಉಳಿದುಕೊಳ್ಳಲು ರಾಮಯಾಣವೇ ಮೂಲವಾಗಿದ್ದು, ಹಿಂದೂಗಳ ರಕ್ಷಣೆ ಶ್ರೀರಾಮನಿಂದ ಮಾತ್ರವೇ ಆಗಿದ್ದು ಎಂದು ಶಿಡ್ಲೇಹಳ್ಳಿ ಸಂಸ್ಥಾನಮಠ ಗುರುಕುಲಾನಂದಾಶ್ರಮದ ಇಮ್ಮಡಿ ಕರಿಬಸವದೇಶೀಕೇಂದ್ರ ಸ್ವಾಮೀಜಿ ತಿಳಿಸಿದರು.
ನಗರದ ಪಿ.ಜಿ.ಎಂ ಕಲ್ಯಾಣ ಮಂಟಪದಲ್ಲಿ ರಾಮಮಂದಿರ ನಿರ್ಮಾಣದ ಅಂಗವಾಗಿ ನಿಧಿ ಸಮರ್ಪಣಾ ಅಭಿಯಾನದ ಕರಪತ್ರಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರು ಜೀವನದಲ್ಲಿ ರಾಮನ ಆದರ್ಶ ತತ್ವಗಳು, ನಿಷ್ಠೆಯನ್ನು ಪಾಲನೆ ಮಾಡಬೇಕು, ದೇಣಿಗೆ ಸಂಗ್ರಹದ ಮೂಲಕ ರಾಮನ ತತ್ವ, ಆದರ್ಶಗಳನ್ನು ಪ್ರತಿಯೊಂದು ಮನೆಗೆ ತಲುಪಿಸುವ ಉದ್ದೇಶವನ್ನು ಅಭಿಯಾನ ಹೊಂದಿದೆ ಎಂದರು.
ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡುವುದು ಮುಂದಿನ 2 ಸಾವಿರ ವರ್ಷಗಳು ಶಾಶ್ವತವಾಗಿ ನೆಲೆಸುವಂತಹ ಮಂದಿರಕ್ಕಾಗಿ ಆಗಿದೆ. ಅದ್ದರಿಂದ ಪ್ರತಿಯೊಬ್ಬರು ತಮ್ಮ ಶಕ್ತಿಯನುಸಾರವಾಗಿ ಧನ ಸಹಾಯವನ್ನು ಮಾಡಬೇಕೆಂದರು.
ಬಿಜೆಪಿ ಮುಖಂಡ ಲೋಕೇಶ್ವರ್ ಮಾತನಾಡಿ, ಕಳೆದ ವರ್ಷ ನ್ಯಾಯಲಯದ ತೀರ್ಮಾನದ ನಂತರದಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಇದೀಗ ಚಾಲನೆ ದೊರೆತಿದೆ. ಮುಸಲ್ಮಾನರ ಕಾಲದಲ್ಲಿ ಅವನತಿ ಹೊಂದಿದ್ದ ರಾಮಮಂದಿರವನ್ನು ಪುನಃ ರಾಮನ ಜನ್ಮ ಭೂಮಿ ಅಯೋಧ್ಯೆಯಲ್ಲಿ ಸ್ಥಾಪನೆ ಮಾಡಲು ಹೊರಟಿರುವುದು ಭಾರತೀಯರ ಅನೇಕ ವರ್ಷಗಳ ಕನಸು ನನಸಾಗುವ ಕಾಲ ಸನಿಹದಲ್ಲಿದೆ. ಈ ನಿಟ್ಟಿನಲ್ಲಿ ಮಂದಿರ ನಿರ್ಮಾಣಕ್ಕಾಗಿ ಜನಸಾಮಾನ್ಯರಿಂದ ನಿಧಿ ಸಂಗ್ರಹ ಅಭಿಮಾಯನಕ್ಕೆ ಚಾಲನೆ ದೊರೆತಿದ್ದು, ಇಂತಹ ಅಪೂರ್ವ ಕಾರ್ಯದಲ್ಲಿ ನಾವೆಲ್ಲರೂ ಭಾಗಿಯಾಗಬೇಕಿದೆ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಪಿ.ಜೆ ರಾಮಮೋಹನ್, ಉಪಾಧ್ಯಕ್ಷ ಸೊಪ್ಪು ಗಣೇಶ್, ಪೌರಾಯುಕ್ತ ಉಮಾಕಾಂತ್, ಅಭಿಯಾನ ಕಾರ್ಯಧ್ಯಕ್ಷ ಶಿವಪ್ರಸಾದ್, ಸಂಚಾಲಕ ಶ್ರೀಧರ್ ಲಕ್ಕವಳ್ಳಿ, ಗ್ರಾಮಾಂತರ ಸಂಚಾಲಕ ಮನೋಹರ್ ರಂಗಾಪುರ, ಸಂಸ್ಕಾರ ಭಾರತೀ ತಾಲ್ಲೂಕು ಆಧ್ಯಕ್ಷ ದೇವಪ್ರಸಾದ್, ನಗರಸಭಾ ಸದಸ್ಯರುಗಳಾದ ಪದ್ಮ ತಿಮ್ಮೇಗೌಡ, ಜಯಲಕ್ಷ್ಮೀ, ಸಂಧ್ಯಾ ಕಿರಣ್, ಬಳ್ಳೇಕಟ್ಟೆ ಸುರೇಶ್ ಇದ್ದರು.
ತುಮಕೂರುನ್ಯೂಸ್.ಇನ್ ವಾಟ್ಸ್ ಆಪ್ ನಂಬರ್ :+91 9148215339
ಇಮೇಲ್: [email protected]
ವೆಬ್ ಸೈಟ್ : https://www.tumkurnews.in/