web analytics
My page - topic 1, topic 2, topic 3
ತಿಪಟೂರು; ಹೋಂ ಮೇಡ್ ವೈನ್ ಮಾರಾಟ ಮಳಿಗೆ ಮೇಲೆ ಅಬಕಾರಿ ದಾಳಿ; ಆಗಿರುವ ತಪ್ಪಾದರೂ ಏನು?

ತಿಪಟೂರು; ಹೋಂ ಮೇಡ್ ವೈನ್ ಮಾರಾಟ ಮಳಿಗೆ ಮೇಲೆ ಅಬಕಾರಿ ದಾಳಿ; ಆಗಿರುವ ತಪ್ಪಾದರೂ ಏನು?

 1,392 

Tumkurnews.in
ತಿಪಟೂರು; ಹೋಂ ಮೇಡ್ ವೈನ್ ಹೆಸರಿನಲ್ಲಿ ವೈನ್ ಮಾರಾಟ ಮಾಡುತ್ತಿದ್ದ ಸ್ಥಳಗಳ ಮೇಲೆ ಅಬಕಾರಿ ಅಧಿಕಾರಿಗಳು ಸೋಮವಾರ ದಾಳಿ ನಡೆಸಿದ್ದು, ಎರಡು ಪ್ರಕರಣಗಳನ್ನು ದಾಖಲಿಸಿದ್ದಾರೆ.
ತಿಪಟೂರು ತಾಲ್ಲೂಕು ಕಸಬಾ ಹೋಬಳಿ, ಕೋಟನಾಯಕನಹಳ್ಳಿ ಗ್ರಾಮದ ವೀರಾಂಜನೇಯ ಹೋಟೆಲ್ ಮಂಭಾಗದಲ್ಲಿರುವ ಮಿಸ್ಟ್ ಕೂರ್ಗ್ ಸ್ಪೈಸಸ್ ಎಂಬ ಅಂಗಡಿ ಮಳಿಗೆ ಮೇಲೆ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳು, ವಿವಿಧ ನಮೂನೆಯ ಒಟ್ಟು 62.250 ಲೀ. ಹೋಂ ಮೇಡ್ ವೈನ್ ಅನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಅಂಗಡಿಯ ಮಾಲೀಕರು ಹಾಗೂ ಅಂಗಡಿ ಮಳಿಗೆ ಕಟ್ಟಡದ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಕೆ.ಬಿ ಕ್ರಾಸ್ ಮಯೂರ ಹೋಟೆಲ್ ಮುಂಭಾಗದ ನ್ಯೂ ಕೂರ್ಗ್ ಸ್ಪೈಸಸ್ ಅಂಗಡಿಯ ಮೇಲೆ ದಾಳಿ ನಡೆಸಿ 10 ಲೀ. ಹೋಂ ಮೇಡ್ ವೈನ್ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಈ ರೀತಿಯಲ್ಲಿ ಹೋಂ ಮೇಡ್ ವೈನ್ ಹೆಸರಿನಲ್ಲಿ ನಾನ್ ಆಲ್ಕೋಹಾಲಿಕ್ ಎಂದು ಲೇಬಲ್ ನಮೂದಿಸಿ ಯುವ ಜನರನ್ನು ಮದ್ಯ ವ್ಯಸನದ ಕಡೆಗೆ ಸೆಳೆಯುವ ಇಂತಹ ಕೃತ್ಯಗಳು ಅಪರಾಧವಾಗಿದ್ದು, ಈ ರೀತಿಯ ಕೃತ್ಯ ಸಾರ್ವಜನಿಕರ ಗಮನಕ್ಕೆ ಬಂದರೆ ತಕ್ಷಣವೇ ಅಬಕಾರಿ ನಿರೀಕ್ಷಕರ ದೂ. ಸಂಖ್ಯೆ; 9620379070ಗೆ ಮಾಹಿತಿ ನೀಡುವಂತೆ ಇಲಾಖೆ ಕೋರಿದೆ.
ಈ ಪ್ರಕರಣಗಳ ದಾಳಿಯಲ್ಲಿ ಅಬಕಾರಿ ಉಪ ಅಧೀಕ್ಷಕ ವಿಜಯ್ ಕುಮಾರ್ ಜಿ.ವಿ., ಅಬಕಾರಿ ನಿರೀಕ್ಷಕ ವಿಜಯ್ ಕುಮಾರ್ ಕೆ.ಟಿ., ಉಪ ನಿರೀಕ್ಷಕ ಜಿ.ಆರ್ ನಾಗರಾಜು ಹಾಗೂ ಕಾನ್ಸ್ ಟೇಬಲ್ಸ್ ಪ್ರಸನ್ನ ಎಸ್. ಜಿ.ಆರ್ ಸ್ವಾಮಿ, ಶಿವಶಂಕರಯ್ಯ, ರೇವಣ್ಣ, ಯತೀಶ್, ಮುಸ್ತಾಕ್, ರಾಜೇಶ್ವರಿ ಹಾಗೂ ವೀಣಾ ಇದ್ದರು.
ತುಮಕೂರುನ್ಯೂಸ್.ಇನ್ ವಾಟ್ಸ್ ಆಪ್ ನಂಬರ್ :+91 9148215339 ಇಮೇಲ್: [email protected] ವೆಬ್ ಸೈಟ್ : https://www.tumkurnews.in/

Leave a Reply

Your email address will not be published. Required fields are marked *

error: Content is protected !!