web analytics
My page - topic 1, topic 2, topic 3
ಬಡವನಹಳ್ಳಿ ಕೃಷಿ ಮಾರುಕಟ್ಟೆ ಮಳಿಗೆ ನಿರ್ಮಾಣಕ್ಕೆ ಚಾಲನೆ; ಎಂ.ವಿ ವೀರಭದ್ರಯ್ಯ

ಬಡವನಹಳ್ಳಿ ಕೃಷಿ ಮಾರುಕಟ್ಟೆ ಮಳಿಗೆ ನಿರ್ಮಾಣಕ್ಕೆ ಚಾಲನೆ; ಎಂ.ವಿ ವೀರಭದ್ರಯ್ಯ

 556 

Tumkurnews.in

ಮಧುಗಿರಿ; ಅಂಗಡಿ ಮಳಿಗೆಗಳ ನಿರ್ಮಾಣವು ಗುಣಮಟ್ಟದಿಂದ ಕೂಡಿರಬೇಕು ಎಂದು ಶಾಸಕ ಎಂ.ವಿ ವೀರಭದ್ರಯ್ಯ ತಿಳಿಸಿದರು.
ತಾಲ್ಲೂಕಿನ ದೊಡ್ಡೇರಿ ಹೋಬಳಿಯ ಬಡವನಹಳ್ಳಿ ಗ್ರಾಮದಲ್ಲಿ ಕೃಷಿ ಮಾರುಕಟ್ಟೆ ವತಿಯಿಂದ 1 ಕೋಟಿ ರೂ. ವೆಚ್ಚದಲ್ಲಿ 15 ಅಂಗಡಿ ಮಳಿಗೆಗಳ ನಿರ್ಮಾಣಕ್ಕೆ ಶನಿವಾರ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಕೃಷಿ ಸೊರಗಿದರೆ ನಾವೆಲ್ಲರೂ ಸಹ ಸೊರಗುತ್ತೇವೆ. ಇಂದಿನ ವಾತಾವರಣದಲ್ಲಿ ನೋಟುಗಳನ್ನು ಸೇವಿಸಲು ಸಾಧ್ಯವಿಲ್ಲ, ಕಂಪ್ಯೂಟರ್ ಗಳ ಮುಖಾಂತರ ಬೆಳೆ ಬೆಳೆಯಲು ಆಗುವುದಿಲ್ಲ, ಕಾರ್ಖಾನೆಗಳಿಂದ ಅನ್ನವನ್ನು ಬೆಳೆಯಲು ಆಗುವುದಿಲ್ಲ. ಹಾಗಾಗಿ
ದೇಶದ ಬೆನ್ನೆಲುಬಾಗಿರುವ ರೈತ, ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೆ ಮಾತ್ರ ಎಲ್ಲರೂ ಕ್ಷೇಮವಾಗಿರಲು ಸಾಧ್ಯ ಎಂದರು.
ಇಂದಿನ ವ್ಯವಸ್ಥೆಯಲ್ಲಿ ರೈತನ ಸ್ಥಿತಿ ಗಂಭೀರವಾಗಿದೆ, ವ್ಯವಸಾಯಕ್ಕೆ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸುವ ಜವಬ್ದಾರಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲಿದೆ.
ಕೃಷಿ ಚಟುವಟಿಕೆಗಳಿಗೆ ಹಾಗೂ ರೈತ ಬೆಳೆದ ಬೆಳೆಗಳಿಗೆ ಉತ್ತಮವಾದ ಮಾರುಕಟ್ಟೆ ಬೆಲೆ ಲಭ್ಯವಾಗಬೇಕು ಎಂದು ತಿಳಿಸಿದರು.

ಮಧುಗಿರಿಯಲ್ಲಿ ಬೀದಿ ನಾಯಿಗಳ ಉಪಟಳ; ಹೆಚ್ಚಿದ ವಾಹನ ಅಪಘಾತ
ಇಲ್ಲಿ ನಿರ್ಮಾಣವಾಗುತ್ತಿರುವ ಮಳಿಗೆಗಳ ನಿರ್ಮಾಣದ ಕಾಮಗಾರಿಗಳಲ್ಲಿ ನಮ್ಮ ಪಕ್ಷದ ಕಾರ್ಯಕರ್ತರನ್ನು ಬಳಸಿಕೊಳ್ಳಬೇಕು. ತಾಲ್ಲೂಕಿನಲ್ಲಿ ಎತ್ತಿನಹೊಳೆ ಕಾಮಗಾರಿಯು ಬಹಳ ಚುರುಕಾಗಿ ನಡೆಯುತ್ತಿದ್ದು, ಇನ್ನೂ ಎರಡು ವರ್ಷಗಳಲ್ಲಿ ತಾಲ್ಲೂಕಿನ 50 ಕೆರೆಗಳಿಗೆ ನೀರು ಹರಿಯಲಿದೆ. ದೊಡ್ಡೇರಿ ಹೋಬಳಿಯ 5 ಕೆರೆಗಳು ಸೇರಿವೆ. ಸುರ್ವರ್ಣಮುಖಿ ನದಿ ನೀರಿಗೆ ಅಡ್ಡಲಾಗಿ ಕೊಟ್ಯಾಂತರ ರೂ. ಗಳ ವೆಚ್ಚದಲ್ಲಿ ಚೆಕ್ ಡ್ಯಾಂ ಗಳ ನಿರ್ಮಾಣ ಮಾಡಲಾಗಿದ್ದು, ಇದರಿಂದಾಗಿ ಅಂತರ್ಜಲ ಮಟ್ಟ ಹೆಚ್ಚಾಗಲಿದೆ ಎಂದರು.
ಜಿಪಂ ಸದಸ್ಯ ಚೌಡಪ್ಪ ಮಾತನಾಡಿ, ಸುಮಾರು 2 ಎಕರೆ ವಿಸ್ತೀರ್ಣವನ್ನು ಈ ಮಾರುಕಟ್ಡೆ ಹೊಂದಿದ್ದು, ಈ ಜಾಗವನ್ನು ಉಳಿಸಿಕೊಡಲು ಸುಮಾರು ವರ್ಷಗಳ ಹಿಂದೆ ಹೋರಾಟ ನಡೆಸಿದ್ದೇನೆ. ಈ ಜಾಗಕ್ಕೆ ಹಕ್ಕುಪತ್ರಗಳನ್ನು ನೀಡಲಾಗಿತ್ತು, ಈಗ ಹಕ್ಕುಪತ್ರಗಳನ್ನು ಖುಲಾಸೆ ಮಾಡಲಾಗಿದೆ. ಮಳಿಗೆಗಳ ನಿರ್ಮಾಣದಿಂದ ಕೃಷಿ ಮಾರುಕಟ್ಟೆಗೆ ಹೆಚ್ಚು ಲಾಭಾಂಶ ಹರಿದು ಬರಲಿದ್ದು, ತಾಲ್ಲೂಕಿನ ಕೃಷಿಕರಿಗೆ ಅನೂಕೂಲವಾಗಲಿದೆ ಎಂದು ತಿಳಿಸಿದರು.
ಕೃಷಿ ಮಾರುಕಟ್ಟೆ ನಿರ್ದೇಶಕ ಬಸವರಾಜು, ತಾಪಂ ಸದಸ್ಯ ನಾಗಭೂಷಣ್, ಗ್ರಾಪಂ ಸದಸ್ಯ ಎಂ.ಎಸ್.ವಿಜಯಪ್ರಕಾಶ್, ಮುಖಂಡರಾದ ಕಾಂತರಾಜು, ರವಿ, ಸಣ್ಣ ಮಲ್ಲಪ್ಪ, ದ್ವಾರಕೀಶ್, ಕುಮಾರ್, ಶ್ರೀನಿವಾಸ್, ಬಸವರಾಜು, ಅಪನಹಳ್ಳಿ ಉಮೇಶ್, ರಾಜಣ್ಣ, ಮಲ್ಲಿಕಾರ್ಜುನ್, ಗ್ರಾಪಂ ಮಾಜಿ ಅಧ್ಯಕ್ಷ ರಂಗನಾಥ್ ಮತ್ತಿತರರು ಇದ್ದರು.

ತುಮಕೂರುನ್ಯೂಸ್.ಇನ್ ವಾಟ್ಸ್ ಆಪ್ ನಂಬರ್ :+91 9148215339 ಇಮೇಲ್: [email protected] ವೆಬ್ ಸೈಟ್ : https://www.tumkurnews.in/

Leave a Reply

Your email address will not be published. Required fields are marked *

error: Content is protected !!