web analytics
My page - topic 1, topic 2, topic 3
ಕೋವಿಡ್ ರಿಪೋರ್ಟ್; ಕುಣಿಗಲ್ ಮಾತ್ರ ಸೇಫ್, ಉಳಿದೆಲ್ಲಾ ತಾಲ್ಲೂಕುಗಳಲ್ಲಿ ಹೊಸ ಕೇಸ್

ಕೋವಿಡ್ ರಿಪೋರ್ಟ್; ಕುಣಿಗಲ್ ಮಾತ್ರ ಸೇಫ್, ಉಳಿದೆಲ್ಲಾ ತಾಲ್ಲೂಕುಗಳಲ್ಲಿ ಹೊಸ ಕೇಸ್

 1,468 

Tumkurnews.in
ತುಮಕೂರು; ಜಿಲ್ಲೆಯಲ್ಲಿ ಶುಕ್ರವಾರ ಹೊಸದಾಗಿ 31 ಜನರಿಗೆ ಕೋವಿಡ್ 19 ಸೋಂಕು ತಗಲಿರುವುದು ಕಂಡು ಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 23,392ಕ್ಕೆ ಏರಿದೆ.
ಕುಣಿಗಲ್ ತಾಲ್ಲೂಕು ಹೊರತುಪಡಿಸಿ ಉಳಿದೆಲ್ಲಾ ತಾಲ್ಲೂಕುಗಳಲ್ಲಿ ಇಂದು ಹೊಸ ಸೋಂಕಿತರು ಪತ್ತೆಯಾಗಿದ್ದಾರೆ.

ತಾಲೂಕುವಾರು ವಿವರ; ತುಮಕೂರು-6, ಗುಬ್ಬಿ-1, ಕುಣಿಗಲ್-0, ಮಧುಗಿರಿ-5, ಪಾವಗಡ-1, ಶಿರಾ-3, ತಿಪಟೂರು-8, ತುರುವೇಕೆರೆ-1, ಚಿಕ್ಕನಾಯಕನಹಳ್ಳಿ-5, ಕೊರಟಗೆರೆ-1, ಒಟ್ಟು-31.

ಇಂದು 31 ಮಂದಿ ಗುಣಮುಖರಾಗಿದ್ದು, ಈವರೆಗೆ ಜಿಲ್ಲೆಯಲ್ಲಿ 22,716 ಮಂದಿ ಗುಣಮುಖರಾಗಿದ್ದಾರೆ.
ಸದ್ಯ 233 ಮಂದಿ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.
13 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದು ಯಾವುದೇ ಸಾವು ಸಂಭವಿಸಿಲ್ಲ, ಈವರೆಗೆ ಜಿಲ್ಲೆಯಲ್ಲಿ 443 ಮಂದಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

ತುಮಕೂರುನ್ಯೂಸ್.ಇನ್ ವಾಟ್ಸ್ ಆಪ್ ನಂಬರ್ :+91 9148215339 ಇಮೇಲ್: [email protected] ವೆಬ್ ಸೈಟ್ : https://www.tumkurnews.in/

Leave a Reply

Your email address will not be published. Required fields are marked *

error: Content is protected !!