328
Tumkurnews.in
ತುಮಕೂರು; ನಿಟ್ಟೂರು ಬೆಸ್ಕಾಂ ಕಲ್ಲೂರು 110/11ಕೆವಿ ಉಪಸ್ಥಾವರದ ವ್ಯಾಪ್ತಿಯಲ್ಲಿ ಉಪಕರಣಗಳ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಜನವರಿ 8 ರಂದು ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಸಿ.ಎಸ್.ಪುರ, ಪೆದ್ದನಹಳ್ಳಿ, ಕಡಬ, ಬ್ಯಾಡಗೆರೆ, ಕಲ್ಲೂರು, ಹಿಂಡಿಸಿಗೆರೆ, ಕೆ.ಕಲ್ಲಹಳ್ಳಿ, ಅಂಕಳಕೊಪ್ಪ, ಮಾಚಿಹಳ್ಳಿ, ಕುರುಬರಹಳ್ಳಿ, ಪಡುಗುಡಿ, ಬಿಟ್ಟಗೊಂಡನಹಳ್ಳಿ, ಮಾದಾಪಟ್ಣ, ಟಿ.ಪಾಳ್ಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಗ್ರಾಹಕರು ಸಹಕರಿಸಬೇಕೆಂದು ಸಹಾಯಕ ಕಾರ್ಯನಿರ್ವಾಹಕ ಇಂಜಿಯರ್ ಮನವಿ ಮಾಡಿದ್ದಾರೆ.