web analytics
My page - topic 1, topic 2, topic 3
ಕೋವಿಡ್ ರಿಪೋರ್ಟ್; ಇಂದು ತಿಪಟೂರಿನಲ್ಲಿ ದಿಢೀರ್ ಏರಿಕೆ; ತುಮಕೂರಿನಲ್ಲಿ ಭಾರೀ ಇಳಿಕೆ

ಕೋವಿಡ್ ರಿಪೋರ್ಟ್; ಇಂದು ತಿಪಟೂರಿನಲ್ಲಿ ದಿಢೀರ್ ಏರಿಕೆ; ತುಮಕೂರಿನಲ್ಲಿ ಭಾರೀ ಇಳಿಕೆ

 1,797 

Tumkurnews.in
ತುಮಕೂರು; ಜಿಲ್ಲೆಯಲ್ಲಿ ಗುರುವಾರ ಹೊಸದಾಗಿ 19 ಜನರಿಗೆ ಕೋವಿಡ್ 19 ಸೋಂಕು ತಗಲಿರುವುದು ಕಂಡು ಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 23,361ಕ್ಕೆ ಏರಿದೆ.
ತಾಲೂಕುವಾರು ವಿವರ; ತುಮಕೂರು-1, ಗುಬ್ಬಿ-0, ಕುಣಿಗಲ್-0, ಮಧುಗಿರಿ-0, ಪಾವಗಡ-1, ಶಿರಾ-0, ತಿಪಟೂರು-12, ತುರುವೇಕೆರೆ-2,
ಚಿಕ್ಕನಾಯಕನಹಳ್ಳಿ-2, ಕೊರಟಗೆರೆ-1, ಒಟ್ಟು-19.
ಇಂದು 22 ಮಂದಿ ಗುಣಮುಖರಾಗಿದ್ದು, ಈವರೆಗೆ ಜಿಲ್ಲೆಯಲ್ಲಿ 22,685 ಮಂದಿ ಗುಣಮುಖರಾಗಿದ್ದಾರೆ.
ಸದ್ಯ 233 ಮಂದಿ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

11 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದು ಯಾವುದೇ ಸಾವು ಸಂಭವಿಸಿಲ್ಲ, ಈವರೆಗೆ ಜಿಲ್ಲೆಯಲ್ಲಿ 443 ಮಂದಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
ಇದೇ ಪ್ರಥಮ ಬಾರಿಗೆ ತುಮಕೂರು ತಾಲ್ಲೂಕಿನಲ್ಲಿ ಕೇವಲ ಒಂದು ಹೊಸ ಪ್ರಕರಣ ಕಂಡು ಬಂದಿದೆ. ಆದರೆ ತಿಪಟೂರು ತಾಲ್ಲೂಕಿನಲ್ಲಿ ಒಂದೇ ದಿನ ಇಂದು 12 ಜನರಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.

ತುಮಕೂರುನ್ಯೂಸ್.ಇನ್ ವಾಟ್ಸ್ ಆಪ್ ನಂಬರ್ :+91 9148215339 ಇಮೇಲ್: [email protected] ವೆಬ್ ಸೈಟ್ : https://www.tumkurnews.in/

Leave a Reply

Your email address will not be published. Required fields are marked *

error: Content is protected !!