2,548
Tumkurnews.in
ತುಮಕೂರು; ಲಂಚ ಪಡೆಯುತ್ತಿದ್ದ ವೇಳೆ ಗ್ರಾಮ ಲೆಕ್ಕಾಧಿಕಾರಿಯೋರ್ವ ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದಿದ್ದಾನೆ.
ಕುಣಿಗಲ್ ತಾಲ್ಲೂಕು ಹುತ್ರಿದುರ್ಗ ಹೋಬಳಿಯ ಇಪ್ಪಾಡಿ ಗ್ರಾಮದ ವಾಸಿ ಸತೀಶ್ ಐ.ಜಿ ಎಂಬುವರು ನೀಡಿದ ದೂರು ಆಧರಿಸಿ ಎಸಿಬಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದರು.
ಸತೀಶ್ ಐ.ಜಿ ಅವರ ತಾಯಿ ಮತ್ತು ದೊಡ್ಡಪ್ಪ ಅವರ ಹೆಸರಿಗೆ ಇಪ್ಪಾಡಿ ಗ್ರಾಮದ ಸರ್ವೆ ನಂಬರ್ 69/5ರ ಜಮೀನಿನ ಜಂಟಿ ಪೌತಿ ಖಾತೆ ವರ್ಗಾವಣೆ ಮಾಡಿಕೊಡಲು ಆರೋಪಿ, ಇಪ್ಪಾಡಿ ವೃತ್ತದ ಗ್ರಾಮ ಲೆಕ್ಕಾಧಿಕಾರಿ ಕೆ.ಬಿ ಲೋಕೇಶ್ 20 ಸಾವಿರ ರೂ. ಲಂಚಕ್ಕೆ ಬೇಡಿಕೆ ಇರಿಸಿದ್ದರು.
ಅದರಂತೆ ಮುಂಗಡವಾಗಿ 10 ಸಾವಿರ ರೂ. ಪಡೆದು, ಬಾಕಿ ಹಣಕ್ಕೆ ಬೇಡಿಕೆ ಇರಿಸಿ ಮೊಬೈಲ್ ನಲ್ಲಿ ದೂರುದಾರರೊಂದಿಗೆ ಮಾತನಾಡಿದ್ದರು. ಬಾಕಿ ಹಣ ಪಡೆಯುವಾಗ ಕುಣಿಗಲ್ ಪಟ್ಟಣದಲ್ಲಿ ಮುನಿಕಾಳ್ಯ ಬಿಲ್ಡಿಂಗ್ ನ ಮೊದಲ ಮಹಡಿಯ ರೂಮಿನಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.