web analytics
My page - topic 1, topic 2, topic 3
ಪಾವಗಡ, ಚಿ.ನಾಹಳ್ಳಿ ಬಿಟ್ಟು ಉಳಿದೆಲ್ಲಾ ತಾಲ್ಲೂಕುಗಳಲ್ಲಿ ಕೊರೋನಾ ಹೊಸ ಪ್ರಕರಣ ಪತ್ತೆ; ಇವತ್ತಿನ ರಿಪೋರ್ಟ್ ಇಲ್ಲಿದೆ

ಪಾವಗಡ, ಚಿ.ನಾಹಳ್ಳಿ ಬಿಟ್ಟು ಉಳಿದೆಲ್ಲಾ ತಾಲ್ಲೂಕುಗಳಲ್ಲಿ ಕೊರೋನಾ ಹೊಸ ಪ್ರಕರಣ ಪತ್ತೆ; ಇವತ್ತಿನ ರಿಪೋರ್ಟ್ ಇಲ್ಲಿದೆ

 1,264 

Tumkurnews.in
ತುಮಕೂರು; ಜಿಲ್ಲೆಯಲ್ಲಿ ಸೋಮವಾರ ಹೊಸದಾಗಿ 13 ಜನರಿಗೆ ಕೋವಿಡ್ 19 ಸೋಂಕು ತಗಲಿರುವುದು ಕಂಡು ಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 23,311ಕ್ಕೆ ಏರಿದೆ.
ತಾಲೂಕುವಾರು ವಿವರ; ತುಮಕೂರು-4, ಗುಬ್ಬಿ-1, ಕುಣಿಗಲ್-1, ಮಧುಗಿರಿ-1, ಪಾವಗಡ-0, ಶಿರಾ-1, ತಿಪಟೂರು-2, ತುರುವೇಕೆರೆ-2,
ಚಿಕ್ಕನಾಯಕನಹಳ್ಳಿ-0, ಕೊರಟಗೆರೆ-1, ಒಟ್ಟು-13.
ಇಂದು 21 ಮಂದಿ ಗುಣಮುಖರಾಗಿದ್ದು, ಈವರೆಗೆ ಜಿಲ್ಲೆಯಲ್ಲಿ 22,620 ಮಂದಿ ಗುಣಮುಖರಾಗಿದ್ದಾರೆ.
ಸದ್ಯ 249 ಮಂದಿ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.
11 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದು ಯಾವುದೇ ಸಾವು ಸಂಭವಿಸಿಲ್ಲ, ಈವರೆಗೆ ಜಿಲ್ಲೆಯಲ್ಲಿ 442 ಮಂದಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
ಇಂದು ಚಿಕ್ಕನಾಯಕನಹಳ್ಳಿ, ಪಾವಗಡ ತಾಲ್ಲೂಕು ಬಿಟ್ಟು ಉಳಿದ ಎಲ್ಲಾ ತಾಲ್ಲೂಕುಗಳಲ್ಲಿ ಕೋವಿಡ್ 19 ಹೊಸ ಪ್ರಕರಣಗಳು ಕಂಡು ಬಂದಿವೆ.

ತುಮಕೂರುನ್ಯೂಸ್.ಇನ್ ವಾಟ್ಸ್ ಆಪ್ ನಂಬರ್ :+91 9148215339 ಇಮೇಲ್: [email protected] ವೆಬ್ ಸೈಟ್ : https://www.tumkurnews.in/

Leave a Reply

Your email address will not be published. Required fields are marked *

error: Content is protected !!