788
Tumkurnews.in
ಕೊರಟಗೆರೆ; ಸಾಲ ಭಾದೆಯಿಂದ ಮನನೊಂದ ರೈತನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ತಾಲ್ಲೂಕಿನ ಪಣ್ಣೇನಹಳ್ಳಿಯ ಅಂಜಿನಪ್ಪ(70) ಆತ್ಮಹತ್ಯೆ ಮಾಡಿಕೊಂಡ ರೈತ. ತಮ್ಮ ಜಮೀನಿನ ಸಮೀಪದ ಹುಣಸೆ ಮರಕ್ಕೆ ನೇಣು ಬಿಗಿದುಕೊಂಡು ಶನಿವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಹೊಳವನಹಳ್ಳಿ ಹೋಬಳಿ ಬಿ.ಡಿ ಪುರ ಗ್ರಾಪಂ ವ್ಯಾಪ್ತಿಯ ಪಣ್ಣೇನಹಳ್ಳಿ ಗ್ರಾಮದ ಅಂಜೀನಪ್ಪ, ಬೈರೇನಹಳ್ಳಿ ಕೆನರಾ ಬ್ಯಾಂಕ್ ನಲ್ಲಿ 2.60 ಲಕ್ಷ ರೂ. ಹಾಗೂ ಅಕ್ಕಿರಾಂಪುರದ ವಿಎಸ್ಎಸ್ಎನ್ನಲ್ಲಿ 25 ಸಾವಿರ ಸಾಲ ಮಾಡಿದ್ದಾರೆ ಎನ್ನಲಾಗಿದೆ.
ಈ ಸಾಲ ತೀರಿಸಲಾಗದೇ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. ಈ ವರ್ಷ ಜಿಲ್ಲೆಯಲ್ಲಿ ಸಂಭವಿಸಿದ ಮೊದಲ ರೈತ ಆತ್ಮಹತ್ಯೆ ಪ್ರಕರಣ ಇದಾಗಿದೆ. ಸ್ಥಳಕ್ಕೆ ಪಿಎಸೈ ಮುತ್ತುರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ತುಮಕೂರುನ್ಯೂಸ್.ಇನ್ ವಾಟ್ಸ್ ಆಪ್ ನಂಬರ್ :+91 9148215339
ಇಮೇಲ್: [email protected]
ವೆಬ್ ಸೈಟ್ : https://www.tumkurnews.in/