web analytics
My page - topic 1, topic 2, topic 3
ಇಂದು ಅತೀ ಕಡಿಮೆ ಪ್ರಕರಣ; ಆದರೂ ಕೊರಟಗೆರೆಗೆ ಕೋವಿಡ್ ಶಾಕ್

ಇಂದು ಅತೀ ಕಡಿಮೆ ಪ್ರಕರಣ; ಆದರೂ ಕೊರಟಗೆರೆಗೆ ಕೋವಿಡ್ ಶಾಕ್

 55,613 

Tumkurnews.in
ತುಮಕೂರು; ಜಿಲ್ಲೆಯಲ್ಲಿ ಭಾನುವಾರ ಹೊಸದಾಗಿ 14 ಜನರಿಗೆ ಕೋವಿಡ್ 19 ಸೋಂಕು ತಗಲಿರುವುದು ಕಂಡು ಬಂದಿದ್ದು, ಒಟ್ಟು
ಸೋಂಕಿತರ ಸಂಖ್ಯೆ 23,298ಕ್ಕೆ ಏರಿದೆ.
ತಾಲೂಕುವಾರು ವಿವರ; ತುಮಕೂರು-8, ಗುಬ್ಬಿ-0, ಕುಣಿಗಲ್-1, ಮಧುಗಿರಿ-0, ಪಾವಗಡ-0, ಶಿರಾ-0, ತಿಪಟೂರು-2, ತುರುವೇಕೆರೆ-1,
ಚಿಕ್ಕನಾಯಕನಹಳ್ಳಿ-0, ಕೊರಟಗೆರೆ-2, ಒಟ್ಟು-14. ಇಂದು 38 ಮಂದಿ ಗುಣಮುಖರಾಗಿದ್ದು, ಈವರೆಗೆ ಜಿಲ್ಲೆಯಲ್ಲಿ 22,599 ಮಂದಿ ಗುಣಮುಖರಾಗಿದ್ದಾರೆ.
ಸದ್ಯ 257 ಮಂದಿ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. 13 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ಇಂದು ಯಾವುದೇ ಸಾವು ಸಂಭವಿಸಿಲ್ಲ, ಈವರೆಗೆ ಜಿಲ್ಲೆಯಲ್ಲಿ 442 ಮಂದಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
ಕೊರಟಗೆರೆ ತಾಲೂಕಿನಲ್ಲಿ ನಿನ್ನೆ ಯಾವುದೇ ಹೊಸ ಸೋಂಕು ಪ್ರಕರಣ ಕಂಡು ಬಂದಿರಲಿಲ್ಲ, ಇಂದು ಇಬ್ಬರಲ್ಲಿ ಹೊಸದಾಗಿ ‌ಸೋಂಕು ಪತ್ತೆಯಾಗುವ ಮೂಲಕ ಶಾಕ್ ನೀಡಿದಂತಾಗಿದೆ.
ತುಮಕೂರುನ್ಯೂಸ್.ಇನ್ ವಾಟ್ಸ್ ಆಪ್ ನಂಬರ್ :+91 9148215339 ಇಮೇಲ್: [email protected] ವೆಬ್ ಸೈಟ್ : https://www.tumkurnews.in/

Leave a Reply

Your email address will not be published. Required fields are marked *

error: Content is protected !!