50,912
Tumkurnews.in
ತುಮಕೂರು; ಜಿಲ್ಲೆಯಲ್ಲಿ ಗುರುವಾರ ಹೊಸದಾಗಿ 29 ಜನರಿಗೆ ಕೋವಿಡ್ 19 ಸೋಂಕು ತಗಲಿರುವುದು ಕಂಡು ಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 23,225ಕ್ಕೆ ಏರಿದೆ.
ತಾಲೂಕುವಾರು ವಿವರ; ತುಮಕೂರು-17, ಗುಬ್ಬಿ-1, ಕುಣಿಗಲ್-1, ಮಧುಗಿರಿ-3, ಪಾವಗಡ-0, ಶಿರಾ-0, ತಿಪಟೂರು-2, ತುರುವೇಕೆರೆ-2,
ಚಿಕ್ಕನಾಯಕನಹಳ್ಳಿ-3, ಕೊರಟಗೆರೆ-0, ಒಟ್ಟು-29.
ಇಂದು 50 ಮಂದಿ ಗುಣಮುಖರಾಗಿದ್ದು, ಈವರೆಗೆ ಜಿಲ್ಲೆಯಲ್ಲಿ 22,520 ಮಂದಿ ಗುಣಮುಖರಾಗಿದ್ದಾರೆ.
ಸದ್ಯ 264 ಮಂದಿ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.
12 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದು ಯಾವುದೇ ಸಾವು ಸಂಭವಿಸಿಲ್ಲ, ಈವರೆಗೆ ಜಿಲ್ಲೆಯಲ್ಲಿ 441 ಮಂದಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
ಹೊಸ ವರ್ಷದ ಮುನ್ನಾ ದಿನವಾದ ಇಂದು ಕೊರಟಗೆರೆ, ಪಾವಗಡ ಹಾಗೂ ಶಿರಾ ತಾಲ್ಲೂಕಿನಲ್ಲಿ ಕೊರೋನಾ ಶೂನ್ಯ ಪ್ರಕರಣಗಳು ಕಂಡು ಬಂದಿದೆ.