296
Tumkurnews.in
ಶಿರಾ; ತಾಲ್ಲೂಕಿನ ಬೆಂಚೆಗೇಟ್ ಕೃಷಿ ಉಪ ಮಾರುಕಟ್ಟೆಯಲ್ಲಿ ರೈತರ ಶೋಷಣೆಯಾಗುತ್ತಿದೆ ಎಂದು ಆರೋಪಿಸಿ ರೈತರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಸದರಿ ಮಾರುಕಟ್ಟೆಯಲ್ಲಿ ಮಂಡಿ ವರ್ತಕರು ತೆಂಗಿನ ಕಾಯಿ ಮಾರಾಟ ರೂಪದಲ್ಲಿ ಮತ್ತು ಹಣದ ರೂಪದಲ್ಲಿ ಎರಡು ರೀತಿಯಲ್ಲಿ ವಂಚಿಸುತ್ತಿದ್ದಾರೆ. ನ್ಯಾಯಯುತವಾಗಿ ರೈತರಿಗೆ ಸಲ್ಲಬೇಕಾದ ಬೆಲೆ ನೀಡದೆ ರಾಶಿ ಲೆಕ್ಕದಲ್ಲಿ ಬಿಡ್ ಕೂಗಿ ಮಾರುವವನಿಗೆ ಮತ್ತು ಕೊಳ್ಳುವವರಿಗೆ ನಷ್ಟ ಮಾಡುತ್ತಿದ್ದಾರೆ, ಇದರಿಂದಾಗಿ ರೈತರಿಗೆ ಅನ್ಯಾಯವಾಗುತ್ತಿದೆ.
ಇದಲ್ಲದೇ ಕಮಿಷನ್ ರೂಪದಲ್ಲಿ ರೈತರಿಂದ ಶೇ.4ರಷ್ಟು ಹಣ ಹಾಗೂ ಒಂದು ರಾಶಿಗೆ 10ರಿಂದ 20 ಕಾಯಿ ಎಂದು ಪಡೆದು ಮಂಡಿ ವರ್ತಕರು ರೈತರ ಸುಲಿಗೆ ಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ರೈತರಿಂದ ಪಡೆದ ರಾಶಿ ಲೆಕ್ಕದ ಕಾಯಿಗಳನ್ನು ಮಂಡಿಯಲ್ಲಿ ತಿಂಗಳಾನುಗಟ್ಟಲೆ ಸಂಗ್ರಹಿಸಿಟ್ಟುಕೊಳ್ಳುತ್ತಾರೆ, ಇದರಿಂದಾಗಿ ರೈತರು ಬರುವ ವಾಹನಗಳಿಗೆ ಜಾಗವಿಲ್ಲದೆ ತೊಂದರೆಯಾಗುತ್ತಿದೆ, ಆದ್ದರಿಂದ ಎಪಿಎಂಸಿ ಅಧಿಕಾರಿಗಳು ಈ ಬಗ್ಗೆ ಪರಿಶೀಲಿಸಿ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ಸದರಿ ಉಪ ಮಾರುಕಟ್ಟೆಯಲ್ಲಿ ಹಣಕಾಸು ವಹಿವಾಟು ಬಿಳಿ ಚೀಟಿಯಲ್ಲಿ ನಡೆಯುತ್ತಿದೆ, ಮಂಡಿಯಲ್ಲಿ ಸ್ವಚ್ಛತೆ ಇಲ್ಲದಂತಾಗಿದೆ, ರೈತರಿಗೆ ಕುಳಿತುಕೊಳ್ಳಲು ಜಾಗ ಇಲ್ಲದಂತಾಗಿದೆ, ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷರು ಸ್ಥಳಕ್ಕಾಗಮಿಸಿ ಎಪಿಎಂಸಿ ಕಾರ್ಯದರ್ಶಿಗೆ ರೈತರ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸಲು ಸೂಚಿಸಿದರು.
ಈ ಸಂದರ್ಭದಲ್ಲಿ ತಾಪಂ ಸದಸ್ಯ ಪುಟ್ಟರಾಜು, ಜಗದೀಶ್, ಎಪಿಎಂಸಿ ನಿರ್ದೇಶಕ ವಸಂತ್, ಗ್ರಾಪಂ ಮಾಜಿ ಸದಸ್ಯ ರಾಜಣ್ಣ,
ಬಸವರಾಜು, ಮತ್ತಿತರರಿದ್ದರು.
ತುಮಕೂರುನ್ಯೂಸ್.ಇನ್ ವಾಟ್ಸ್ ಆಪ್ ನಂಬರ್ :+91 9148215339
ಇಮೇಲ್: [email protected]
ವೆಬ್ ಸೈಟ್ : https://www.tumkurnews.in/