ಸ್ವಂತ ಮಗಳ ಮೇಲೆಯೇ ಅತ್ಯಾಚಾರ ಎಸಗಿದ ತಂದೆ; ಜೀವಾವಧಿ ಶಿಕ್ಷೆ ನೀಡಿದ ಕೋರ್ಟ್

1 min read

 

ಸ್ವಂತ ಮಗಳ ಮೇಲೆಯೇ ಲೈಂಗಿಕ ದೌರ್ಜನ್ಯ ನಡೆಸಿದ ತಂದೆ; ಜೀವಾವಧಿ ಶಿಕ್ಷೆ ನೀಡಿದ ಕೋರ್ಟ್

Tumkur news
ತುಮಕೂರು; ತನ್ನ ಸ್ವಂತ ಮಗಳ ಮೇಲೆಯೇ ಅತ್ಯಾಚಾರ ಎಸಗಿದ್ದ ವ್ಯಕ್ತಿಗೆ ತುಮಕೂರು ಜಿಲ್ಲಾ ನ್ಯಾಯಾಲಯ(ಪೋಕ್ಸೋ) ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಶಿರಾ ತಾಲ್ಲೂಕು ಮುದಿಗೆರೆ ಗ್ರಾಮದಲ್ಲಿ 2022ರ ಫೆಬ್ರವರಿ 2ರಂದು ಆರೋಪಿ ಬಸವರಾಜು ಎಂಬಾತ ತನ್ನ 14 ವರ್ಷದ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದನು. ತನ್ನ ಮೂವರು ಹೆಣ್ಣು ಮಕ್ಕಳ ಪೈಕಿ ಒಬ್ಬಳನ್ನು ಅಂದು ರಾತ್ರಿ 10 ಗಂಟೆ ಸಮಯದಲ್ಲಿ ಎಬ್ಬಿಸಿ, ಮಂಚದಿಂದ ಕೆಳಕ್ಕೆ ಎಳೆದುಕೊಂಡು ನೀನು ದೊಡ್ಡವಳಾಗಿದ್ದೀಯಾ, ನೋಡುತ್ತೇನೆ ಬಾ ಎಂದು ಆಕೆ ಬೇಡವೆಂದರೂ ಆಕೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಆಕೆಯ ಬಟ್ಟೆಗಳನ್ನು ಬಿಚ್ಚಿ, ಕೈಯಿಂದ ಬಾಯಿಯನ್ನು ಮುಚ್ಚಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದನು.
ಬಳಿಕ ಈ ವಿಚಾರವನ್ನು ಯಾರಿಗಾದರೂ ತಿಳಿಸಿದಲ್ಲಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದನು. ನೊಂದ ಬಾಲಕಿಯು ತನ್ನ ಚಿಕ್ಕಮ್ಮನಿಗೆ ಈ ವಿಷಯವನ್ನು ತಿಳಿಸಿದ್ದಳು. ಬಳಿಕ ಇವರಿಬ್ಬರೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿರಾ ತಾಲ್ಲೂಕಿನ ಸಹಾಯಕ ಮಕ್ಕಳ ರಕ್ಷಣಾಧಿಕಾರಿಗೆ ವಿಷಯ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿ ಬಸವರಾಜು ಮೇಲೆ ಶಿರಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ ಅಧಿಕ ಜಿಲ್ಲಾ ಸತ್ರ ನ್ಯಾಯಾಲಯ (ಪೋಕ್ಸೋ)ದ ನ್ಯಾಯಾಧೀಶೆ ಸಂಧ್ಯಾರಾವ್ ಪಿ ಅವರು ಆರೋಪಿ ಬಸವರಾಜು ಎಂ.ವಿ ಗೆ ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ಆಶಾ ಕೆ.ಎಸ್ ವಾದ ಮಂಡಿಸಿದ್ದರು.

ಮಾರ್ಚ್ 12ರಂದು ನಿಷೇದಾಜ್ಞೆ; ಜಿಲ್ಲಾಧಿಕಾರಿ ಆದೇಶ

You May Also Like

More From Author

+ There are no comments

Add yours