web analytics
My page - topic 1, topic 2, topic 3
ಗ್ರಾಪಂ ಚುನಾವಣೆ; ತಾಲ್ಲೂಕುವಾರು ಮತದಾನದ ಸಂಪೂರ್ಣ ವಿವರ ಇಲ್ಲಿದೆ

ಗ್ರಾಪಂ ಚುನಾವಣೆ; ತಾಲ್ಲೂಕುವಾರು ಮತದಾನದ ಸಂಪೂರ್ಣ ವಿವರ ಇಲ್ಲಿದೆ

 81,531 

Tumkur news.in
ತುಮಕೂರು; ಜಿಲ್ಲೆಯ ತುಮಕೂರು, ಕುಣಿಗಲ್, ಗುಬ್ಬಿ, ಕೊರಟಗೆರೆ ಹಾಗೂ ಪಾವಗಡ ತಾಲೂಕುಗಳಲ್ಲಿ ಶೇ.88.50ರಷ್ಟು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ.ರಾಕೇಶ್‍ಕುಮಾರ್ ತಿಳಿಸಿದ್ದಾರೆ.
ತುಮಕೂರು ತಾಲೂಕಿನ 41 ಗ್ರಾಮ ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದಂತೆ 120099 ಪುರುಷರು, 120396 ಮಹಿಳೆಯರು ಹಾಗೂ 17 ಇತರೆ ಸೇರಿದಂತೆ ಒಟ್ಟು 240512 ಮತದಾರರ ಪೈಕಿ 104777 ಪುರುಷರು, 102548 ಮಹಿಳೆಯರು ಹಾಗೂ 6 ಇತರೆ ಸೇರಿದಂತೆ ಒಟ್ಟು 207331 ಮತದಾರರು ಮತ ಚಲಾಯಿಸಿದ್ದು,ತಾಲೂಕಿನಲ್ಲಿ ಶೇ.86.20ರಷ್ಟು ಮತದಾನವಾಗಿದೆ.
ಕುಣಿಗಲ್ ತಾಲೂಕಿನ 36 ಗ್ರಾಮ ಪಂಚಾಯಿತಿಗಳಲ್ಲಿ 81279 ಪುರುಷರು, 78953 ಮಹಿಳೆಯರು ಸೇರಿದಂತೆ ಒಟ್ಟು 160232 ಮತದಾರರ ಪೈಕಿ 75148 ಪುರುಷರು, 71565 ಮಹಿಳೆಯರು ಸೇರಿದಂತೆ ಒಟ್ಟು 146713 ಮತದಾರರು ಮತ ಚಲಾಯಿಸಿದ್ದು, ತಾಲೂಕಿನಲ್ಲಿ ಶೇ.91.56ರಷ್ಟು ಮತದಾನವಾಗಿದೆ.

ಪೊಲೀಸರ ಡ್ರಂಕ್ ಅಂಡ್ ಡ್ಯೂಟಿ; ಎಎಸ್ಐ ಸೇರಿ ಇಬ್ಬರು ಸಸ್ಪೆಂಡ್
ಗುಬ್ಬಿ ತಾಲೂಕಿನ 34 ಗ್ರಾಮ ಪಂಚಾಯಿತಿಗಳಲ್ಲಿ ಶೇ.88.53ರಷ್ಟು ಮತದಾನವಾಗಿದ್ದು, 92784 ಪುರುಷರು, 91578 ಮಹಿಳೆಯರು ಹಾಗೂ 13 ಇತರೆ ಸೇರಿದಂತೆ ಒಟ್ಟು 184375 ಮತದಾರರ ಪೈಕಿ 83460 ಪುರುಷರು, 79769 ಮಹಿಳೆಯರು ಸೇರಿದಂತೆ ಒಟ್ಟು 163229 ಮತದಾರರು ಮತ ಚಲಾಯಿಸಿದ್ದು, ತಾಲೂಕಿನಲ್ಲಿ ಶೇ.88.53ರಷ್ಟು ಮತದಾನವಾಗಿದೆ.
ಕೊರಟಗೆರೆ ತಾಲೂಕಿನ 24 ಗ್ರಾಮ ಪಂಚಾಯಿತಿಗಳಲ್ಲಿ 62549 ಪುರುಷರು, 62125 ಮಹಿಳೆಯರು ಹಾಗೂ 12 ಇತರೆ ಸೇರಿದಂತೆ ಒಟ್ಟು 124686 ಮತದಾರರ ಪೈಕಿ 56276 ಪುರುಷರು, 53670 ಮಹಿಳೆಯರು ಸೇರಿದಂತೆ ಒಟ್ಟು 109946 ಮತದಾರರು ಮತ ಚಲಾಯಿಸಿದ್ದು, ಶೇ.88.18ರಷ್ಟು ಮತದಾನವಾಗಿದೆ.

ಬ್ರಿಟನ್ ವೈರಸ್ ಭೀತಿಯಿಂದ ತುಮಕೂರು ಪಾರು; ಡಿಎಚ್ಓ ನೀಡಿದ ಸುದ್ದಿ ಏನು?
ಪಾವಗಡ ತಾಲೂಕಿನ 33 ಗ್ರಾಮ ಪಂಚಾಯಿತಿಗಳಲ್ಲಿ 86168 ಪುರುಷರು, 81254 ಮಹಿಳೆಯರು ಹಾಗೂ 5 ಇತರೆ ಸೇರಿದಂತೆ ಒಟ್ಟು 167427 ಮತದಾರರ ಪೈಕಿ 76524 ಪುರುಷರು, 70884 ಮಹಿಳೆಯರು ಸೇರಿದಂತೆ ಒಟ್ಟು 147408 ಮತದಾರರು ಮತ ಚಲಾಯಿಸಿದ್ದು, ಶೇ.88.04ರಷ್ಟು ಮತದಾನವಾಗಿದೆ ಎಂದು ಅವರು ತಿಳಿಸಿದ್ದಾರೆ.
ಮತಪತ್ರ ತುಂಬಿದ ಮತ ಪೆಟ್ಟಿಗೆಗಳನ್ನು ಆಯಾ ತಾಲೂಕು ಕೇಂದ್ರಗಳಲ್ಲಿ ಸ್ಥಾಪಿಸಿರುವ ಮತ ಎಣಿಕೆ ಕೇಂದ್ರಗಳಲ್ಲಿರುವ ಸ್ಟ್ರಾಂಗ್ ರೂಂಗಳಲ್ಲಿಟ್ಟು ಸೀಲ್ ಮಾಡಲಾಗಿದ್ದು, ಪೊಲೀಸ್ ಬಿಗಿ ಭದ್ರತೆಯನ್ನು ಒದಗಿಸಲಾಗಿದೆ. ಡಿಸೆಂಬರ್ 30ರಂದು ಮತ ಎಣಿಕೆ ನಡೆಯಲಿದೆ.

(photo;ತುಮಕೂರು ನಗರದ ಬಿ.ಹೆಚ್ ರಸ್ತೆಯಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮತಪೆಟ್ಟಿಗೆಗಳನ್ನು ಕೊಠಡಿಗಳಲ್ಲಿ ಪೊಲೀಸ್ ಬಂದೋಬಸ್ತಿನೊಂದಿಗೆ ಭದ್ರ ಪಡೆಸಿರುವುದು)

ತುಮಕೂರುನ್ಯೂಸ್.ಇನ್ ವಾಟ್ಸ್ ಆಪ್ ನಂಬರ್ :+91 9148215339 ಇಮೇಲ್: [email protected] ವೆಬ್ ಸೈಟ್ : https://www.tumkurnews.in/

Leave a Reply

Your email address will not be published. Required fields are marked *

error: Content is protected !!