web analytics
My page - topic 1, topic 2, topic 3
ಪೊಲೀಸರ ಡ್ರಂಕ್ ಅಂಡ್ ಡ್ಯೂಟಿ; ಎಎಸ್ಐ ಸೇರಿ ಇಬ್ಬರು ಸಸ್ಪೆಂಡ್

ಪೊಲೀಸರ ಡ್ರಂಕ್ ಅಂಡ್ ಡ್ಯೂಟಿ; ಎಎಸ್ಐ ಸೇರಿ ಇಬ್ಬರು ಸಸ್ಪೆಂಡ್

 1,678 

Tumkurnews.in

ತುಮಕೂರು; ಕುಣಿಗಲ್ ನಲ್ಲಿ ಪೊಲೀಸರ ಡ್ರಂಕ್ ಅಂಡ್ ಡ್ಯೂಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪೊಲೀಸರು ಅಮಾನತುಗೊಂಡಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ ವಂಶಿಕೃಷ್ಣ ಅವರು, ಓರ್ವ ಎಎಸ್ಐ ಹಾಗೂ ಓರ್ವ ಪೇದೆಯನ್ನು ಅಮಾನತು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಕುಣಿಗಲ್ ನಲ್ಲಿ ಪೊಲೀಸರ ಡ್ರಂಕ್ ಅಂಡ್ ಡ್ಯೂಟಿ, ಪ್ರಶ್ನಿಸಿದವರ ಮೇಲೆಯೇ ಲಾಠಿ!; ಎಸ್.ಪಿ ಪ್ರತಿಕ್ರಿಯೆ ಏನು ಗೊತ್ತೇ?
ಚಿಕ್ಕನಾಯಕನಹಳ್ಳಿ ಎಎಸ್ಐ ಶ್ರೀನಿವಾಸ್ ಹಾಗೂ ತುರುವೇಕೆರೆ ತಾಲ್ಲೂಕು ದಂಡಿನ ಶಿವರ ಠಾಣೆ ಪೇದೆ ಪರಮೇಶ್ವರ್ ಅಮಾನತುಗೊಂಡಿದ್ದಾರೆ.

ಅಪ್ರಾಪ್ತ ವಿವಾಹಿತೆಯ ಹತ್ಯೆ, ಮನೆಯಲ್ಲೇ ಸಮಾಧಿ; ಪತಿಯ ಇಬ್ಬರು ಸಹೋದರರ ಬಂಧನ
ಪ್ರತಿಭಟನಾಕಾರ ಬಿಡುಗಡೆ; ಘಟನೆ ಖಂಡಿಸಿ ಬುಧವಾರ ಕುಣಿಗಲ್ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸುತ್ತಿದ್ದ ಕರ್ನಾಟಕ ರಾಷ್ಟ್ರ ರಕ್ಷಣಾ ಸಮಿತಿ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣ ರೆಡ್ಡಿ ಮತ್ತು ಅವರ ಪಕ್ಷದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು, ಬಳಿಕ ಬಿಡುಗಡೆಗೊಳಿಸಿದ್ದಾರೆ.

ಪೊಲೀಸರ ಮದ್ಯ ಸೇವನೆ ಪ್ರಕರಣ; ರವಿಕೃಷ್ಣ ರೆಡ್ಡಿ ಸೇರಿ ಹಲವರು ಪೊಲೀಸ್ ವಶಕ್ಕೆ
ಪೊಲೀಸರ ವಿರುದ್ಧ ದೂರು; ಪೊಲೀಸರು ಪೊಲೀಸ್ ವಾಹನದಲ್ಲಿ ಮದ್ಯ ಸೇವನೆ ಮಾಡುತ್ತಿದ್ದದ್ದನ್ನು ವಿಡಿಯೋ ಮಾಡಿ ಪ್ರತಿಭಟಿಸಿದ್ದ ಕಾರಣಕ್ಕಾಗಿ ತಾವು ಮತ್ತು ತಮ್ಮ ಸ್ನೇಹಿತರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಣಿಗಲ್ ಪೊಲೀಸರ ವಿರುದ್ಧ ದೂರು ನೀಡಲಾಗಿದೆ ಎಂದು ಕೆ ಆರ್ ಎಸ್ ಪಕ್ಷದ ಯುವ ರಾಜ್ಯಾಧ್ಯಕ್ಷ ರಘು ಜಾಣಗೆರೆ ತಿಳಿಸಿದ್ದಾರೆ.

ತುಮಕೂರುನ್ಯೂಸ್.ಇನ್ ವಾಟ್ಸ್ ಆಪ್ ನಂಬರ್ :+91 9148215339 ಇಮೇಲ್: [email protected] ವೆಬ್ ಸೈಟ್ : https://www.tumkurnews.in/

Leave a Reply

Your email address will not be published. Required fields are marked *

error: Content is protected !!