2,186
Tumkurnews.in
ತುಮಕೂರು; ಬ್ರಿಟನ್ ವೈರಸ್ ಬಗ್ಗೆ ಭಯ ಬೇಡ ಎಂದು ಬುಧವಾರ ಬೆಳಗ್ಗೆಯೇ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ(ಡಿ.ಎಚ್.ಓ) ಡಾ.ನಾಗೇಂದ್ರಪ್ಪ ಸಿಹಿ ಸುದ್ದಿ ನೀಡಿದ್ದಾರೆ.
ಬ್ರಿಟನ್ ನಲ್ಲಿ ಎರಡನೇ ಹಂತದ ರೂಪಾಂತರಗೊಂಡ ಕೊರೋನಾ ವೈರಸ್ ಸೋಂಕು ಹರಡಿರುವ ಆತಂಕದ ಬೆನ್ನಲ್ಲೇ ಜಿಲ್ಲೆಯಲ್ಲಿ ಐವರನ್ನು ಗುರುತಿಸಿ ಅವರನ್ನು ಮಂಗಳವಾರ ಹೋಂ ಕ್ವಾರಂಟೈನ್ ಮಾಡಲಾಗಿತ್ತು.
ಯುಕೆ ನಿಂದ ತುಮಕೂರಿಗೆ ನಾಲ್ವರು ಆಗಮಿಸಿದ್ದು, ಮರಳೂರು ದಿಣ್ಣೆಯಲ್ಲಿ ಅವರು ಹೋಂ ಕ್ವಾರಂಟೈನ್ ಮಾಡಲಾಗಿತ್ತು.
ಕುಣಿಗಲ್ ಪೊಲೀಸರ ಡ್ರಂಕ್ ಅಂಡ್ ಡ್ಯೂಟಿ, ಪ್ರಶ್ನಿಸಿದವರ ಮೇಲೆಯೇ ಲಾಠಿ!; ಎಸ್.ಪಿ ಪ್ರತಿಕ್ರಿಯೆ ಏನು ಗೊತ್ತೇ?
ಉಳಿದ ಓರ್ವರು ತಿಪಟೂರಿನಲ್ಲಿ ಹೋಂ ಕ್ವಾರಂಟೈನ್ ಗೆ ಒಳಗಾಗಿದ್ದರು.
ಈ ಎಲ್ಲಾ ಐವರನ್ನು ತಪಾಸಣೆಗೆ ಒಳಪಡಿಸಲಾಗಿತ್ತು, ಪರೀಕ್ಷಾ ವರದಿ ಬುಧವಾರ ಲಭಿಸಿದೆ. ಈ ಎಲ್ಲರ ವರದಿ ನೆಗೆಟಿವ್ ಬಂದಿದ್ದು, ಯಾವುದೇ ರೂಪಾಂತರ ಕೊರೋನಾ ವೈರಸ್ ಇವರಲ್ಲಿ ಕಂಡು ಬಂದಿಲ್ಲ ಎಂದು ಡಿಎಚ್ಓ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಬ್ರಿಟನ್ ನಿಂದ ಆಗಮಿಸಿರುವ ಐವರು ಪತ್ತೆ; ಆರೋಗ್ಯ ಇಲಾಖೆ ನಿಗಾ
ಸದ್ಯಕ್ಕೆ ತುಮಕೂರು ಜಿಲ್ಲೆ ರೂಪಾಂತರ ವೈರಸ್ ಭೀತಿಯಿಂದ ಪಾರಾಗಿದ್ದು, ಜನರು ನಿರಾಳರಾಗಿದ್ದಾರೆ.