ಕರಾಳ ದಿನ; ಕುಣಿಗಲ್, ಶಿರಾ-ಮಧುಗಿರಿ ರಸ್ತೆಯಲ್ಲಿ ಪ್ರತ್ಯೇಕ 3 ಅಪಘಾತ; ನಾಲ್ವರ ಧಾರುಣ ಸಾವು

1 min read

 

 

 

 

 

ಚಿಕ್ಕಣ್ಣಸ್ವಾಮಿ ದೇವಾಲಯಕ್ಕೆ ಬರುತ್ತಿದ್ದ ಕಾರು ಅಪಘಾತ

Tumkurnews
ತುಮಕೂರು; ಜಿಲ್ಲೆಯ ವಿವಿಧೆಡೆ ಶನಿವಾರ ರಾತ್ರಿಯಿಂದ ಭಾನುವಾರ ಬೆಳಗಿನ ಅವಧಿಯಲ್ಲಿ ನಡೆದ ಮೂರು ಪ್ರತ್ಯೇಕ ಅಪಘಾತಗಳಲ್ಲಿ ನಾಲ್ವರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ.
ಕುಣಿಗಲ್; ಬೆಂಗಳೂರಿನಿಂದ ತುಮಕೂರು ತಾಲ್ಲೂಕು ಹೆಬ್ಬೂರಿನ ಚಿಕ್ಕಣ್ಣ ಸ್ವಾಮಿ ದೇವಾಲಯಕ್ಕೆ ಬರುತ್ತಿದ್ದ ಕಾರು ಬೆಳಗಿನ ಜಾವ 3.30ರ ಸಮಯದಲ್ಲಿ ಕುಣಿಗಲ್ ಬಳಿ ಸ್ವಯಂ ಅಪಘಾತವಾಗಿದೆ. ಇಲ್ಲಿನ ಅಂಚೆಪಾಳ್ಯದ ಬಳಿ ರಸ್ತೆಯಲ್ಲಿದ್ದ ಹಂಪ್ ಗಮನಿಸದೆ ಚಾಲಕ ವೇಗವಾಗಿ ಬಂದು ಹಂಪ್ ಎಗರಿಸಿದ್ದಾನೆ. ಕಾರು ಎಗರಿದ ರಭಸಕ್ಕೆ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಮೂವರ ಪೈಕಿ ಬೆಂಗಳೂರಿನ ವಿಜಯ ನಗರ ನಿವಾಸಿ ನರಸಿಂಹ (29) ಸಾವನ್ನಪ್ಪಿದ್ದಾನೆ. ನಾಯಂಡನಹಳ್ಳಿ ನಿವಾಸಿ ವಿಜಯ್ ಎಂಬುವರ ಕಾಲು ಮುರಿದಿದೆ. ಮನೋಜ್ ಎಂಬುವರಿಗೆ ತಲೆ ಭಾಗದಲ್ಲಿ ಪೆಟ್ಟು ಬಿದ್ದಿರುತ್ತದೆ. ಗಾಯಾಳುಗಳನ್ನು ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹಿಟ್ ಅಂಡ್ ರನ್; ಶಿರಾ ತಾಲ್ಲೂಕಿನ ಕಳ್ಳಂಬೆಳ್ಳ ಸಮೀಪದ ಬಾಲೇನಹಳ್ಳಿ ಗೇಟ್ ಬಳಿ ಶನಿವಾರ ರಾತ್ರಿ ಸರ್ಕಾರಿ ಬಸ್ ಅನ್ನು ಪ್ರಯಾಣಿಕರ ಪ್ರಕೃತಿ ಕರೆಗಾಗಿ ರಸ್ತೆ ಬದಿ ನಿಲ್ಲಿಸಲಾಗಿತ್ತು. ಈ ವೇಳೆ ಬಸ್ಸಿನಲ್ಲಿದ್ದ ಮಹಿಳೆಯೊಬ್ಬರು ರಸ್ತೆ ದಾಟುತ್ತಿದ್ದಾಗ ಯಾವುದೋ ಅಪರಿಚಿತ ವಾಹನ ಡಿಕ್ಕಿ ಹೊಡೆದಿದ್ದು, ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತ ಮಹಿಳೆಯು ಬೆಂಗಳೂರಿನ ಬಿ.ಬಿ.ಎಂ.ಪಿಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ, ಮೂಲತಃ ಬಳ್ಳಾರಿಯ ಸಿರಗುಪ್ಪ ತಾಲ್ಲೂಕಿನ ಹಾಳೆಕೊಪ್ಪ ಗ್ರಾಮದ ಮಾಯಮ್ಮ(35) ಎಂದು ಗುರುತಿಸಲಾಗಿದೆ.
ಬೈಕ್ ಅಪಘಾತ; ಶಿರಾ ನಗರದ ಮಾಗೋಡು ಗೇಟ್ ಬಳಿ ಎರಡು ದ್ವಿಚಕ್ರ ವಾಹನಗಳು ‌ಮುಖಾಮುಖಿ ಡಿಕ್ಕಿಯಾಗಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ.
ಶನಿವಾರ ರಾತ್ರಿ 8.30ರ ಸಮಯದಲ್ಲಿ ಶಿರಾ-ಮಧುಗಿರಿ ರಸ್ತೆಯ ಮಾಗೋಡು ಗೇಟ್ ಬಳಿ ಈ ಅಪಘಾತ ಸಂಭವಿಸಿದ್ದು, ಶಿರಾ ತಾಲ್ಲೂಕು ಕೊಂಡಮ್ಮನಹಳ್ಳ ನಿವಾಸಿ ರಾಕೇಶ್ (22) ಹಾಗೂ ಶಿರಾ ತಾಲ್ಲೂಕು ಗುಳಿಗೆನಹಳ್ಳಿ ನಿವಾಸಿ ನಾಗರಾಜ(21) ಮೃತರಾಗಿದ್ದಾರೆ. ಗುಳಿಗೆನಹಳ್ಳಿಯ ಪೃಥ್ವಿ (20) ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

You May Also Like

More From Author

+ There are no comments

Add yours