web analytics
My page - topic 1, topic 2, topic 3
ಮಣ್ಣು ಪರೀಕ್ಷಾ ಘಟಕ ತೆರೆಯಲು ಅರ್ಜಿ ಆಹ್ವಾನ; ಸರ್ಕಾರವೇ ಹಣ ಕೊಡುತ್ತೆ!

ಮಣ್ಣು ಪರೀಕ್ಷಾ ಘಟಕ ತೆರೆಯಲು ಅರ್ಜಿ ಆಹ್ವಾನ; ಸರ್ಕಾರವೇ ಹಣ ಕೊಡುತ್ತೆ!

 2,703 

ತುಮಕೂರು: ಕೃಷಿ ಇಲಾಖೆಯು ಗ್ರಾಮಮಟ್ಟದ ಮಣ್ಣು ಪರೀಕ್ಷಾ ಘಟಕಗಳನ್ನು ಸ್ಥಾಪಿಸಲಿಚ್ಛಿಸುವವರಿಂದ ಅರ್ಜಿ ಆಹ್ವಾನಿಸಿದೆ.
ಅರ್ಹ ಫಲಾನುಭವಿಗಳಿಗೆ ಘಟಕ ಸ್ಥಾಪನೆಯ ಯೋಜನಾ ವೆಚ್ಚ 5 ಲಕ್ಷ ರೂ.ಗಳ ಪೈಕಿ ಶೇ.75 ರಷ್ಟು ಅಂದರೆ 3.75 ಲಕ್ಷ ರೂ.ಗಳ ಸಹಾಯಧನ ನೀಡಲಾಗುವುದು. ಉಳಿದ 1.25 ಲಕ್ಷಗಳನ್ನು ಫಲಾನುಭವಿಗಳೇ ಭರಿಸಬೇಕಾಗುತ್ತದೆ.
ಆಸಕ್ತ ಕೃಷಿ ಕ್ಲಿನಿಕ್ ಮತ್ತು ಕೃಷಿ ವ್ಯಾಪಾರ ಕೇಂದ್ರಗಳು ಕೃಷಿ ಉದ್ದಿಮೆದಾರರು, ಮಾಜಿ ಯೋಧರು, ಮಹಿಳಾ ಸ್ವಸಹಾಯ ಸಂಘಗಳು, ರೈತರ ಉತ್ಪಾದಕರ ಸಂಸ್ಥೆಗಳು, ರೈತ ಉತ್ಪನ್ನ ಕಂಪನಿಗಳು, ರೈತ ಜಂಟಿ ಜವಾಬ್ದಾರಿ ಗುಂಪುಗಳು, ರೈತರ ಸಹಕಾರ ಸಂಘಗಳು, ಪರಿಕರಗಳ ರಿಟೇಲ್ ಔಟ್‍ಲೆಟ್‍ಗಳು, ಪರಿಕರಗಳ ರಿಟೇಲ್‍ದಾರರು, ಶಾಲೆಗಳು, ಕಾಲೇಜುಗಳು ಅಕ್ಟೋಬರ್ 15ರೊಳಗೆ ತಮ್ಮ ಅರ್ಜಿಯನ್ನು ಸಲ್ಲಿಸಬಹುದು.
ಮಹಿಳಾ ಸ್ವಸಹಾಯ ಗುಂಪುಗಳನ್ನು ಆದ್ಯತೆ ಮೇಲೆ ಪರಿಗಣಿಸಲಾಗುವುದು.
ಅರ್ಹತೆ ಮತ್ತಿತರ ಮಾಹಿತಿಗಾಗಿ ಸಂಬಂಧಿಸಿದ ರೈತ ಸಂಪರ್ಕ ಕೇಂದ್ರ ಅಥವಾ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕಿ ರಾಜಸುಲೋಚನ ತಿಳಿಸಿದ್ದಾರೆ.

ತುಮಕೂರುನ್ಯೂಸ್.ಇನ್ ವಾಟ್ಸ್ ಆಪ್ ನಂಬರ್ :+91 9148215339 ಇಮೇಲ್: [email protected] ವೆಬ್ ಸೈಟ್ : https://www.tumkurnews.in/

Leave a Reply

Your email address will not be published. Required fields are marked *

error: Content is protected !!