ಪ್ರವೀಣ್ ಹಂತಕರನ್ನು ಎನ್ ಕೌಂಟರ್ ಮಾಡಿ; ಸರ್ಕಾರಕ್ಕೆ ಗಡುವು ನೀಡಿದ ಋಷಿಕುಮಾರ ಸ್ವಾಮೀಜಿ

1 min read

 

Tumkurnews
ತುಮಕೂರು; ಬಿಜೆಪಿ ಕಾರ್ಯಕರ್ತ ಪ್ರವೀಣ್ ಹತ್ಯೆ ವಿರೋಧಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳದ ವತಿಯಿಂದ ಋಷಿಕುಮಾರ ಸ್ವಾಮೀಜಿ ನೇತೃತ್ವದಲ್ಲಿ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಟೌನ್‍ಹಾಲ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದ ಪ್ರತಿಭಟನಾಕಾರರು, ಬಿಜೆಪಿ ಮುಖಂಡ ಪ್ರವೀಣ್ ರನ್ನು ಹತ್ಯೆಗೈದಿರುವ ಆರೋಪಿಗಳ ಭಾವಚಿತ್ರಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.
ಋಷಿಕುಮಾರ ಸ್ವಾಮೀಜಿ ಮಾತನಾಡಿ, ರಾಜ್ಯದಲ್ಲಿ ಹಿಂದೂಗಳ ಹತ್ಯೆ ನಿರಂತರವಾಗಿ ನಡೆಯುತ್ತಿದೆ. ಅದರಲ್ಲಿ ಪ್ರಮುಖವಾಗಿ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿರುವ ಹಿಂದೂಗಳ ಹತ್ಯೆ ನಡೆಯುತ್ತಿದೆ. ಪ್ರವೀಣ್ ಅವರದ್ದು 35ನೇ ಹತ್ಯೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರವೀಣ್ ಹತ್ಯೆ ಖಂಡಿಸಿ ತಿಪಟೂರು ಸ್ವಯಂಪ್ರೇರಿತ ಬಂದ್; ವಿಡಿಯೋ
ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದಲ್ಲೂ ಹಿಂದೂ ಕಾರ್ಯಕರ್ತರಿದ್ದಾರೆ. ಆದರೂ ಬಿಜೆಪಿಯಲ್ಲಿರುವ ಹಿಂದೂಗಳನ್ನೇ ಟಾರ್ಗೆಟ್ ಮಾಡಲಾಗುತ್ತಿದೆ, ನಿಮಗೆ ಧಮ್ ಇದ್ದರೆ ನನ್ನನ್ನು ಹೊಡೆಯಿರಿ. ನನಗೆ ಯಾವುದೇ ಭದ್ರತೆ ಇಲ್ಲ ಎಂದ ಸ್ವಾಮೀಜಿ, ನನ್ನ ಮೇಲೆ ಬಹಳಷ್ಟು ದ್ವೇಷ ಸಾಧಿಸುತ್ತಿದ್ದಾರೆ ಎಂದು ಗುಪ್ತ ದಳದ ಮಾಹಿತಿ ಇದೆ ಎಂದರು.
ಮುಂದಿನ 3 ದಿನದಲ್ಲಿ ಪ್ರವೀಣ್ ಹತ್ಯೆಯ ಎಲ್ಲಾ ಆರೋಪಿಗಳನ್ನು ಪತ್ತೆಹಚ್ಚಿ, ಎನ್‍ಕೌಂಟರ್ ಮಾಡಬೇಕು, ತಪ್ಪಿದಲ್ಲಿ ತುಮಕೂರಿನಿಂದ ಮುಖ್ಯಮಂತ್ರಿಗಳ ಮನೆಯವರೆಗೆ ಪಾದಯಾತ್ರೆ ಮಾಡಿ, ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.
ನಾವು ಇನ್ನೆಷ್ಟು ಶಾಂತಿ ಕಾಪಾಡಿಕೊಳ್ಳಬೇಕು. ಯುಪಿಯಲ್ಲಿನ ಯೋಗಿ ಆದಿತ್ಯನಾಥ ಸರ್ಕಾರದ ಕಾರ್ಯ ವೈಖರಿ ಯನ್ನು ನೆನಪಿಸಿಕೊಳ್ಳಿ. ಆರಕ್ಷಕರಿಗೆ ಸ್ವಾತಂತ್ರ್ಯ ನೀಡಿ. ಈ ಕೆಲಸವನ್ನು ಮಾಡದಿದ್ದರೆ ಹಂತಕರಿಗೆ ಎಡೆಮುರಿ ಕಟ್ಟುವುದು ಕಷ್ಟದ ಕೆಲಸ ಎಂದರು.
ಬಜರಂಗ ದಳದ ಜಿಲ್ಲಾ ಸಂಚಾಲಕ ಮಂಜು ಭಾರ್ಗವ ಮಾತನಾಡಿ, ಎಸ್‍ಡಿಪಿಐ, ಪಿಎಫ್‍ಐನ ಗೂಂಡಾ ಕಾರ್ಯಕರ್ತರು ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿ ಹತ್ಯೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಹಿಂದೂ ಸಮಾಜ ಹಿಂದೆ ಸರಿಯುತ್ತದೆ. ಆಗ ಮತ್ತಷ್ಟು ಈ ಸಮಾಜವನ್ನು ಹೆದರಿಸಬಹುದು ಎಂದು ಆ ಸಂಘಟನೆಗಳು ತಿಳಿದಿಕೊಂಡಿವೆ. ಹಾಗಾಗಿ ಪ್ರವೀಣ್ ಹತ್ಯೆ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

ಹುಸಿಯಾದ ‘ಕಠಿಣ ಕ್ರಮ’ದ ಭರವಸೆ; ತುಮಕೂರು ಬಿಜೆಪಿಯಲ್ಲಿ ರಾಜೀನಾಮೆ ಪರ್ವ
ರಾಜ್ಯದಲ್ಲಿ ನಡೆಯುತ್ತಿರುವ ಹಿಂದೂ ಕಾರ್ಯಕರ್ತರ ಹತ್ಯೆಗಳನ್ನ ಸಹಿಸಲಾಗುವುದಿಲ್ಲ. ಕೂಡಲೇ ಸರ್ಕಾರ ತ್ವರಿತಗತಿಯಲ್ಲಿ ವಿಚಾರಣೆ ಮಾಡಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಹತ್ಯೆಕೋರರನ್ನು ಗಲ್ಲಿಗೇರಿಸಬೇಕು. ಈ ಮೂಲಕ ಸರ್ಕಾರ ಹಿಂದೂ ಕಾರ್ಯಕರ್ತರ ರಕ್ಷಣೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ವಿಶ್ವ ಹಿಂದೂ ಪರಿಷತ್‍ನ ಜಿ.ಕೆ. ಶ್ರೀನಿವಾಸ್ ಸೇರಿದಂತೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಆಗಸ್ಟ್ 11ರಿಂದ 17ರವರೆಗೆ ದೇಶದ ಪ್ರತಿ‌ ಮನೆಯಲ್ಲೂ ರಾಷ್ಟ್ರದ್ವಜಾರೋಹಣಕ್ಕೆ ಕೇಂದ್ರ ಕರೆ; ಜಿಲ್ಲೆಯಲ್ಲಿ ಸಿದ್ಧತೆ ಆರಂಭ

About The Author

You May Also Like

More From Author

+ There are no comments

Add yours